ಮುಂಬೈ-ಗೋವಾ ಹೆದ್ದಾರಿಯ ಸೇತುವೆ ಕೆಳಗೆ ಸ್ಪೋಟಕ ಪತ್ತೆ

Social Share

ಮುಂಬೈ, ನ .11-ಮಹಾರಾಷ್ಟ್ರದ ರಾಯಗಢ ಜಿಲ್ಲಾಯ ಮುಂಬೈ-ಗೋವಾ ಹೆದ್ದಾರಿಯ ಸೇತುವೆಯ ಕೆಳಗೆ ಸ್ಪೋಟಕ ಮಾದರಿಯ ಸಾಧನವು ಪತ್ತೆಯಾದ ಕೆಲ ಕಾಲ ಆತಂಕದ ವಾತಾವರಣ ಸೃಷ್ಠಿಯಾಯಿತು.

ಸ್ಥಳೀಯ ಪೊಲೀಸರು, ಬಾಂಬ್ ಪತ್ತೆದಳ ಸ್ಥಳಕ್ಕೆ ದಾವಿಸಿ ಮುಂಜಾನೆ ತೆರವುಮಾಡಲಾಗಿದೆ ಎಂದ ಅಧಿಕಾರಿಯೊಬ್ಬರು ಹೇಳಿದರು. ಕಳೆದ ರಾತ್ರಿ ಪೆನ್ ಬಳಿಯ ಸೇತುವೆಯ ಕೆಳಗೆ ಭೋಗಾವತಿ ನದಿಯಲ್ಲಿ ವಿದ್ಯುತ್ ಸಕ್ರ್ಯೂಟ್‍ಗೆ ಜೋಡಿಸಲಾದ ತಲಾ ಆರು ಜಿಲೆಟಿನ್‍ಕಡ್ಡಿ ಮತ್ತು ವಾಚ್ ಪತ್ತೆಯಾಗಿದ್ದು ಇದು ಸ್ಥಳೀಯ ನಿವಾಸಿಗಳಲ್ಲಿ ಭಯ ಹುಟ್ಟಿಸಿತ್ತು.

ರಾಯಗಢ ಪೊಲೀಸ್‍ನ ಹಿರಿಯ ಅಧಿಕಾರಿಗಳು, ರಾಜ್ಯ ಭಯೋತ್ಪಾದನಾ ನಿಗ್ರಹ ದಳ (ಎಟಿಎಸï) ಮತ್ತು ನವಿ ಮುಂಬೈನ ಬಿಡಿಡಿಎಸ್ ತಂಡವು ಎಚ್ಚರಿಕೆ ನೀಡಿತ್ತು.

ಚೆನ್ನೈ- ಮೈಸೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಮೋದಿ ಚಾಲನೆ

ಇಂದು ಮುಂಜಾನೆ ಬಿಡಿಡಿಎಸ್ ತಂಡವು ಪ್ರತ್ಯೇಕ ಸ್ಥಳದಲ್ಲಿ ಸಾಧನವನ್ನು ತೆಗೆದುಕೊಂಡು ಅದರ ಎಲೆಕ್ಟ್ರಿಕ್ ಸಕ್ರ್ಯೂಟ್ ಮತ್ತು ಅದಕ್ಕೆ ಸಂಪರ್ಕಗೊಂಡಿರುವ ಜೆಲಾಟಿನ್ ಸ್ಟಿಕ್‍ಗಳನ್ನು ಬೇರ್ಪಡಿಸುವ ಮೂಲಕ ಅದನ್ನು ತಟಸ್ಥಗೊಳಿಸಿತು ಎಂದು ತಿಳಿಸಿದರು ಸಾಧನವನ್ನು ವಿವರವಾದ ತನಿಖೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುತ್ತಿದ್ದೇವೆ ಎಂದು ಜಿಲ್ಲಾ ಎಸ್.ಪಿ ಘಾರ್ಗೆ ತಿಳಿಸಿದ್ದಾರೆ.

ಮತ್ತೊಂದು ವಿವಾದ : `ಹಿಂದೂ’ ಶಬ್ದದ ಸತ್ಯಶೋಧನೆಗೆ ಮುಂದಾದ ಸತೀಶ್

ಘಟನೆಗೆ ಸಂಬಂಸಿದಂತೆ ರಾಯಗಢ ಪೊಲೀಸರು ತನಿಖೆ ಆರಂಭಿಸಿದ್ದು, ಇಲ್ಲಿಯವರೆಗೆ ಎಫ್‍ಐಆರ್ ದಾಖಲಾಗಿಲ್ಲ ಎಂದು ಅವರು ತಿಳಿದುಬಂದಿದೆ.

Articles You Might Like

Share This Article