ಭಯೋತ್ಪಾದನೆ ಮಾನವೀಯತೆಗೆ ದೊಡ್ಡ ಕಂಟಕ: ಅಜಿತ್ ದೆವೋಲ್

Social Share

ನವದೆಹಲಿ,ನ.29- ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಐಸಿಸ್ ಪ್ರಭಾವಿತ ಭಯೋತ್ಪಾದನೆ ಮಾನವೀಯತೆಗೆ ದೊಡ್ಡ ಕಂಟಕವಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೆವೋಲ್ ಹೇಳಿದ್ದಾರೆ.

ಅನ್ಯ ನಂಬಿಕೆಯ ಸಂಸ್ಕøತಿಗಳ ನಡುವೆ ಶಾಂತಿ ಮತ್ತು ಸಾಮಾಜಿಕ ಸೌಹಾರ್ದತೆಯಲ್ಲಿ ಪುಲೇಮ ಪಾತ್ರ ಕುರಿತು ಪ್ರತಿಕ್ರಿಯಿಸಿದ ಅವರು, ಇಂಡೋನೇಷ್ಯಾ ಮತ್ತು ಭಾರತದ ನಡುವಿನ ಸಂಬಂಧಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಎರಡೂ ದೇಶಗಳು ಭಯೋತ್ಪಾದನೆ ಮತ್ತು ವಿಭಜನೆಯಿಂದ ಸಂತ್ರಸ್ತವಾಗಿವೆ. ಪಾಲಿಸಬಹುದಾದ ಕ್ರಮಗಳ ಮೂಲಕ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಿದೆ ಎಂದಿದ್ದಾರೆ. ಐಸಿಸಿ ಪ್ರಭಾವಿತ ಭಯೋತ್ಪಾದನೆ ನಿಗ್ರಹಿಸಲು ನಾಗರಿಕ ಸಮಾಜದ ಬೆಂಬಲ ಅಗತ್ಯವಿದೆ. ಸಿರಿಯಾ ಮತ್ತು ಆಫ್ಘಾನಿಸ್ತಾನದಿಂದ ಮರಳಿದವರು ಮತ್ತು ಅಲ್ಲಿಂದ ಕರೆಗಳ ಮೂಲಕ ನಿಯಂತ್ರಿಸಲ್ಪಡುತ್ತಿರುವವರ ಮೇಲೆ ನಿಗಾವಹಿಸಬೇಕಿದೆ.

ವೋಟರ್ ಐಡಿ ಹಗರಣ: ಬಿಬಿಎಂಪಿ ಮುಖ್ಯ ಆಯುಕ್ತರ ಎತ್ತಂಗಡಿ ಸಾಧ್ಯತೆ

ಭಾರತ ಮತ್ತು ಇಂಡೋನೇಷ್ಯಾದ ಚಿಂತಕರ ಕೂಟ ಪರಸ್ಪರ ಉಭಯ ರಾಷ್ಟ್ರಗಳ ನಡುವೆ ಸಹನೆ, ಸೌಹಾರ್ದತೆ, ಶಾಂತಿಯುತ ವಾತಾವರಣವನ್ನು ಮುಂದುವರೆಸಲು ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ಮೂಲಕ ತೀವ್ರವಾದಿಗಳು, ಭಯೋತ್ಪಾದಕರು ಮತ್ತು ಧರ್ಮಾಂಧರ ವಿರುದ್ಧದ ಹೋರಾಟಗಳಿಗೆ ಶಕ್ತಿ ಬರಲಿದೆ ಎಂದಿದ್ದಾರೆ.

ಧರ್ಮಾಂಧರು ಧರ್ಮವನ್ನು ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುವುದು ಯಾವುದೆ ನೆಲೆಯಲ್ಲಿ ಸಮರ್ಥನೀಯವಲ್ಲ. ಎಲ್ಲರು ಇದರ ವಿರುದ್ಧ ದನಿ ಎತ್ತಬೇಕು ಎಂದರು. ಇಸ್ಲಾಂ ಶಾಂತಿ ಮತ್ತು ಉತ್ತಮ ಜೀವನದ ಸಂದೇಶ ಹೊಂದಿದೆ.

ಪ್ರೇಕ್ಷಕರ ಮನ ಗೆದ್ದ ‘ಸದ್ದು ವಿಚಾರಣೆ ನಡೆಯುತ್ತಿದೆ’

ಆದರೆ ವಿಛಿದ್ರಕಾರಿ ಶಕ್ತಿಗಳು ಇದನ್ನು ಪಾಲನೆ ಮಾಡದೆ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಇಸ್ಲಾಂನ ನೈಜ ಸಂದೇಶಗಳನ್ನು ಸಾರುವ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಅರ್ಥೈಸುವಿಕೆಯನ್ನು ಹೆಚ್ಚಿಸಬೇಕಿದೆ. ಪವಿತ್ರ ಕುರಾನ್ ಒಬ್ಬರ ಹತ್ಯೆ ಇಡೀ ಮಾನವೀಯತೆ ಹತ್ಯೆ.ಒಬ್ಬರ ರಕ್ಷಣೆ ಮನುಷ್ಯತ್ವದ ರಕ್ಷಣೆ ಎಂದು ಪ್ರತಿಪಾದಿಸುತ್ತದೆ ಎಂದು ಹೇಳಿದ್ದಾರೆ.

“Extremism, Terrorism, Very, Meaning, Islam NSA, Ajit Doval,

Articles You Might Like

Share This Article