ಬೆಂಗಳೂರಲ್ಲಿ ದೀಪಾವಳಿ ಮುಗಿದರೂ ನಿಲ್ಲದ ಪಟಾಕಿ ಸದ್ದು, 40 ಮಂದಿ ಕಣ್ಣಿಗೆ ಹಾನಿ

Social Share

ಬೆಂಗಳೂರು,ನ.3- ಪಟಾಕಿ ಸದ್ದು ಕಡಿಮೆಯಾದರೂ ಆದರಿಂದಾದ ದುಷ್ಪರಿಣಾಮ ಮಾತ್ರ ಕಡಿಮೆಯಾಗಿಲ್ಲ.ದೀಪಾವಳಿ ಮುಗಿದರೂ ರಾಜಧಾನಿಯಲ್ಲಿ ಪಟಾಕಿ ಅವಘಡ ನಿಂತಿಲ್ಲ. ಇದುವರೆಗೂ 40ಕ್ಕೂ ಹೆಚ್ಚು ಮಂದಿ ಪರೋಕ್ಷ ಇಲ್ಲವೆ ಪ್ರತ್ಯಕ್ಷವಾಗಿ ತಮ್ಮ ಕಣ್ಣುಗಳಿಗೆ ಹಾನಿ ಮಾಡಿಕೊಂಡಿದ್ದಾರೆ.

ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯೇ ಅತಿ ಹೆಚ್ಚು ಮಂದಿ ಪಟಾಕಿ ಅವಘಡಗಳಿಂದಾಗಿ ತಮ್ಮ ಕಣ್ಣುಗಳಿಗೆ ಹಾನಿ ಮಾಡಿಕೊಂಡಿದ್ದಾರೆ ಎಂದು ಮಿಂಟೋ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ. ಈ ಬಾರಿ ಪಟಾಕಿ ಸಿಡಿಸಿದವರಿಗಿಂತ ಪಟಾಕಿ ಸಿಡಿಸುವುದನ್ನು ನೋಡಿದವರಿಗೆ ಅತಿ ಹೆಚ್ಚು ಹಾನಿಯಾಗಿರುವುದು ಕಂಡು ಬಂದಿದೆ.

ಮಿಂಟೊ ಆಸ್ಪತ್ರೆಯಲ್ಲಿ ಪಟಾಕಿ ಗಾಯಕ್ಕೆ ಚಿಕಿತ್ಸೆ ಪಡೆದ 40 ಮಂದಿಯಲ್ಲಿ 21 ಮಂದಿ ಪಟಾಕಿ ಸಿಡಿಸದವರಾಗಿದ್ದಾರೆ. ಇದರ ಜೊತೆಗೆ ಪಾದಚಾರಿ ಮಾರ್ಗದಲ್ಲಿ ಚಲಿಸುತ್ತಿದ್ದಾಗ 33 ಮಂದಿಗೆ ಪಟಾಕಿಯಿಂದ ಹಾನಿಗಿಡಾಗಿದ್ದಾರೆ.

ಪಟಾಕಿ ಬಗ್ಗೆ ಜಾಗೃತಿ ಮೂಡಿಸಿದರು ಅವಘಡಗಳು ಮಾತ್ರ ಕಡಿಮೆಯಾಗದಿರುವುದು ದುರಂತವೇ ಸರಿ.ಪಟಾಕಿ ಅವಘಡಗಳಿಂದ ತಮ್ಮ ಕಣ್ಣುಗಳಿಗೆ ಹಾನಿ ಮಾಡಿಕೊಂಡಿರುವ 40 ಮಂದಿಯಲ್ಲಿ 5 ಮಂದಿಯ ಕಣ್ಣಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.

ಅದೇ ರೀತಿ 18 ಮಂದಿಗೆ ಗಂಭೀರ ಗಾಯವಾಗಿದ್ದು ಅವರುಗಳು ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ.ಸುಜಾತಾ ರಾಥೋಡ್ ಮಾಹಿತಿ ನೀಡಿದ್ದಾರೆ.

Articles You Might Like

Share This Article