ಪಟಾಕಿ ಎಫೆಕ್ಟ್, ಬೆಂಗಳೂರಲ್ಲಿ 23 ಮಂದಿ ಕಣ್ಣುಗಳಿಗೆ ಹಾನಿ

Social Share

ಬೆಂಗಳೂರು,ಅ.25- ನಗರದಲ್ಲಿ ಪಟಾಕಿ ಅವಘಡಗಳ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.ನಿನ್ನೆಯವರೆಗೆ ನಗರದಲ್ಲಿ ಎಂಟು ಮಂದಿ ಪಟಾಕಿ ಸಿಡಿಸಲು ಹೋಗಿ ತಮ್ಮ ಕಣ್ಣುಗಳಿಗೆ ಹಾನಿ ಮಾಡಿಕೊಂಡಿದ್ದರು.ಮತ್ತೆ 15 ಪಟಾಕಿ ಸಿಡಿಸಲು ಹೋಗಿ ಕಣ್ಣುಗಳಿಗೆ ಹಾನಿ ಮಾಡಿಕೊಂಡು ಮಿಂಟೋ ಹಾಗೂ ನಾರಾಯಣ ನೇತ್ರಾಲಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಿಂಟೋ ಆಸ್ಪತ್ರೆಯಲ್ಲಿ 11 ಹಾಗೂ ನಾರಾಯಣ ನೇತ್ರಾಲಯದಲ್ಲಿ 12 ಪ್ರಕರಣಗಳು ದಾಖಲಾಗುವುದರೊಂದಿಗೆ ಇದುವರೆಗೂ ಪಟಾಕಿ ಹಚ್ಚಲು ಹೋಗಿ ಕಣ್ಣಿಗೆ ಹಾನಿ ಮಾಡಿಕೊಂಡವರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.

ನಾರಾಯಣ ನೇತ್ರಾಲಯದಲ್ಲಿ ದಾಖಲಾಗಿದ್ದ 9 ಮಂದಿ ಕಣ್ಣಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದರೆ, ಮೂರು ಮಂದಿಯ ಕಣ್ಣಿಗೆ ಶಸ್ತ್ರ ಚಿಕಿತ್ಸೆ ನಡೆಸಬೇಕಿದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.

ಅದೇ ರೀತಿ ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದ ಎಂಟು ಮಂದಿಯಲ್ಲಿ ಏಳು ಮಂದಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ವಾಪಸ್ಸಾಗಿದ್ದು ಒಬ್ಬರು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಹೊಸ ಪ್ರಕರಣಗಳು: ನಿನ್ನೆ ಅಜಾದ್‍ನಗರದಲ್ಲಿ 10 ವರ್ಷದ ಬಾಲಕ ಫ್ಲವರ್ ಪಾಟ್ ಹಚ್ಚಲು ಹೋದಾಗ ಸಂಭವಿಸಿದ ಅವಘಡದಲ್ಲಿ ತನ್ನ ಎರಡು ಕಣ್ಣುಗಳಿಗೆ ಸಣ್ಣ ಪ್ರಮಾಣದ ಹಾನಿ ಮಾಡಿಕೊಂಡಿದ್ದಾನೆ.

ಪಂಚರತ್ನ ರಥಯಾತ್ರೆ ಸಂದರ್ಭದಲ್ಲೇ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್..?

ಅದೇ ರೀತಿ 50 ವರ್ಷದ ವ್ಯಕ್ತಿಯೊಬ್ಬರು ಪಟಾಕಿ ಹೊಡೆಯುವಾಗ ತಮ್ಮ ಎಡಗಣ್ಣಿಗೆ ಸ್ವಲ್ಪ ಪ್ರಮಾಣದ ಹಾನಿ ಮಾಡಿಕೊಂಡಿದ್ದಾರೆ.ಅದೇ ರೀತಿ 1 9 ವರ್ಷದ ಮೈಸೂರು ರಸ್ತೆಯ ಯುವಕ ಲಕ್ಷ್ಮೀ ಪಟಾಕಿ ಹೊಡೆಯಲು ಹೋಗಿ ತನ್ನ ಬಲಣ್ಣಿಗೆ ತೀವ್ರ ತರದ ಹಾನಿ ಮಾಡಿಕೊಂಡಿರುವುದರಿಂದ ಆತ ಬಲಗಣ್ಣಿನ ನೋಟ ಕಳೆದುಕೊಳ್ಳುವ ಸಾಧ್ಯತೆಗಳಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ಎನ್‍ಜಿಎಫ್ ಲೇಔಟ್‍ನಲ್ಲಿ ನಾಲ್ಕು ವರ್ಷದ ಬಾಲಕಿ ಫ್ಲವರ ಪಾಟ್ ಹಚ್ಚುವ ಸಂದರ್ಭದಲ್ಲಿ ತನ್ನ ಎರಡು ಕಣ್ಣಿಗೆ ಸ್ವಲ್ಪ ಪ್ರಮಾಣದ ಹಾನಿ ಮಾಡಿಕೊಂಡಿದ್ದರೆ, ಸರ್ಜಾಪುರ ರಸ್ತೆಯಲ್ಲಿ 49 ವರ್ಷದ ಮಹಿಳೆ ಲಕ್ಷ್ಮೀ ಪಟಾಕಿ ಹಚ್ಚಲು ಹೋಗಿ ಬಲಗಣ್ಣಿಗೆ ಹಾನಿ ಮಾಡಿಕೊಂಡಿದ್ದರೆ, ಅವೆನ್ಯೂ ರಸ್ತೆಯಲ್ಲಿ 22 ವರ್ಷದ ಯುವಕ ಪಟಾಕಿ ಸಿಡಿಸಲು ಹೋಗಿ ತನ್ನ ಕಣ್ಣುಗಳಿಗೆ ಹಾನಿ ಮಾಡಿಕೊಂಡಿದ್ದಾನೆ.

Articles You Might Like

Share This Article