ಬೈಕ್ ಕದ್ದ ಕಳ್ಳನನ್ನು 6 ಗಂಟೆಗಳಲ್ಲೇ ಪತ್ತೆ ಹಚ್ಚಿದ ಫೇಸ್ ಬುಕ್.. !

Spread the love

two-wheeler

ದೊಡ್ಡಬಳ್ಳಾಪುರ, ಆ.11- ಚಿಂತಾಮಣಿಯಲ್ಲಿ ಕಳವಾದ ಬೈಕ್ ಕೇವಲ ಆರು ಗಂಟೆಗಳಲ್ಲೇ ಫೇಸ್‍ಬುಕ್ ಮೂಲಕ ಪತ್ತೆಯಾದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಿವಾಸಿ ಸುನೀಲ್ ಎಂಬವರು ತನ್ನ ಆರ್ ಎಕ್ಸ್ ಯಮಹಾ ಬೈಕ್ ಅನ್ನು ಮನೆ ಕಾಂಪೌಂಡ್ ಬಳಿ ನಿಲ್ಲಿಸಿದ್ದರು. ಕಳ್ಳರು ಅನ್ನು ಕದ್ದೊಯ್ದಿದ್ದರು.

ಬೈಕ್ ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ಕೊಡುವುದಾಗಿ ಸುನೀಲ್ ಅವರು ಫೇಸ್‍ಬುಕ್‍ನಲ್ಲಿ ಬರೆದು, ಬೈಕ್‍ನ ಚಿತ್ರವನ್ನು ಪೋಸ್ಟ್ ಮಾಡಿದ್ದರು.
ಬೈಕ್ ಕದ್ದ ಆರೋಪಿಗಳು ಪೆಟ್ರೋಲ್ ಖಾಲಿಯಾಗುವವರೆಗೂ ಓಡಿಸಿ ಬಳಿಕ ಅದನ್ನು ತಳ್ಳಿಕೊಂಡು ದೊಡ್ಡಬಳ್ಳಾಪುರ ನಗರದ ರೈಲ್ವೆ ಸ್ಟೇಷನ್ ಬಳಿಯ ಪೆಟ್ರೋಲ್ ಬಂಕ್ ಕಡೆ ಬರುತ್ತಿದ್ದರು. ಸುನೀಲ್ ಅವರ ಸ್ನೇಹಿತ ಸಂತೋಷ್ ಅವರು ಇದನ್ನು ನೋಡಿದ್ದಾರೆ. ಅನುಮಾನಗೊಂಡ ಅವರು ಬೈಕ್‍ನ ಬಗ್ಗೆ ವಿಚಾರಿಸಿದಾಗ ಆರೋಪಿಗಳು ಸರಿಯಾದ ಉತ್ತರ ನೀಡಿರಲಿಲ್ಲ. ತಕ್ಷಣ ಸಂತೋಷ್ ದೊಡ್ಡಬಳ್ಳಾಪುರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ದೊಡ್ಡಬಳ್ಳಾಪುರ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Facebook Comments

Sri Raghav

Admin