ಸಂಚಲನ ಸೃಷ್ಟಿಸಿದ ಫೇಸ್‍ಬುಕ್ ಹಿಂಪಾಲಕರ ಕಡಿತ

Social Share

ನವದೆಹಲಿ, ಅ.12- ಸಾಮಾಜಿಕ ಜಾಲತಾಣವಾಗಿರುವ ಫೆಸ್‍ಬುಕ್‍ನಲ್ಲಿ ಹಲವಾರು ಮಂದಿ ಅನಗತ್ಯವಾಗಿ ತಮ್ಮ ಹಿಂಪಾಲಕರನ್ನು ಕಳೆದುಕೊಂಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಫೆಸ್‍ಬುಕ್‍ನ ಮೂಲ ಸಂಸ್ಥೆ ಮಿಟಾದ ಸಿಇಒ ಝುಕರ್‍ಬರ್ಗ್ ಅವರು 1.19 ಕೋಟಿ ಹಿಂಪಾಲಕರನ್ನು ಕಳೆದುಕೊಂಡಿದ್ದಾರೆ. ಈ ಮೂಲಕ ಅವರ ಹಿಂಪಾಲಕರ ಒಟ್ಟು ಸಂಖ್ಯೆ 10 ಸಾವಿರಕ್ಕಿಂತ ಕಡಿಮೆಯಾಗಿದೆ.

ಬಾಂಗ್ಲಾದೇಶದಿಂದ ಗಡಿಪಾರಾಗಿರುವ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ ಟ್ವೀಟ್ ಮಾಡಿದ್ದು, ಫೆಸ್ ಬುಕ್ ಸುನಾಮಿಯನ್ನೇ ಸೃಷ್ಟಿಸಿದೆ. ನನ್ನ ಖಾತೆಯಲ್ಲಿ ಸುಮಾರು 9 ಲಕ್ಷ ಹಿಂಪಾಲಕರು ದೂರವಾಗಿದ್ದಾರೆ. ಈಗ 9 ಸಾವಿರ ಮಾತ್ರ ಉಳಿದಿದ್ದಾರೆ. ಫೆಸ್‍ಬುಕ್‍ನ ಈ ರೀತಿಯ ಹಾಸ್ಯವನ್ನು ಇಷ್ಟ ಪಡುತ್ತೇನೆ ಎಂದಿದ್ದಾರೆ.

ಮಿಟಾ ವಕ್ತಾರರನ್ನು ಈ ಕುರಿತು ಸುದ್ದಿ ಸಂಸ್ಥೆ ಸಂಪರ್ಕಿಸಿದಾಗ, ಇದು ನಮ್ಮ ಗಮನಕ್ಕೆ ಬಂದಿದೆ. ಕೆಲವರ ಖಾತೆಯ ಪ್ರೋಫೈಲ್‍ನಲ್ಲಿ ಅಸಮಂಜಸವಾದ ಹಿಂಪಾಕರ ಸಂಖ್ಯೆ ಕಾಣಿಸುತ್ತದೆ. ಎಲ್ಲವನ್ನು ಸರಿದಾರಿಗೆ ತರಲು ನಾವು ಕೆಲಸ ಮಾಡುತ್ತಿದ್ದೇವೆ. ಶೀಘ್ರವೇ ಸಹಜ ಸ್ಥಿತಿಗೆ ಮರಳಲಿದೆ. ಆಗವರೆಗಿನ ಅನಾನುಕೂಲತೆಗಳಿಗೆ ವಿಷಾದಿಸುತ್ತೇವೆ ಎಂದು ಹೇಳಿದರು.

Articles You Might Like

Share This Article