ಅಯೋಧ್ಯೆ,ಜ.18- ಉತ್ತರ ಪ್ರದೇಶದ ಫೈಜಾಬಾದ್ನಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಘಟಿಸಿದ್ದ ಕೋಮುಗಲಭೆಯ ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ದೋಷ ಮುಕ್ತರೆಂದು ಘೋಷಿಸಲಾಗಿದೆ.
2012ರ ಅಕ್ಟೋಬರ್ 24ರಂದು ಫೈಜಾಬಾದ್ನಲ್ಲಿ ದುರ್ಗಾದೇವಿಯ ಮೆರವಣಿಗೆ ನಡೆದಿತ್ತು. ದೇವರ ಮೂರ್ತಿಗಳ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸುತ್ತಿದ್ದಾರೆ ಎಂಬ ವದಂತಿ ವ್ಯಾಪಕವಾಗಿ ಹರಡಲಾರಂಭಿಸಿತ್ತು. ಇದರಿಂದಾಗಿ ಭುಗಿಲೆದ್ದ ಗಲಭೆಯಲ್ಲಿ ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿದ್ದರು. ಹತ್ತಾರು ಅಂಗಡಿಗಳು ಮತ್ತು ಮನೆಗಳನ್ನು ಸುಟ್ಟುಹಾಕಲಾಯಿತು, ವ್ಯಾಪಕ ಲೂಟಿ ನಡೆದಿತ್ತು. ಪೊಲೀಸ್ ವಾಹನಗಳಿಗೆ ಪುಂಡರ ಗುಂಪು ಬೆಂಕಿ ಹಚ್ಚಿದ್ದಲ್ಲದೆ, ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆಯನ್ನು ನಡೆಸಿತ್ತು.
ಅಯೋಧ್ಯೆ-ಫೈಜಾಬಾದ್ ದುರ್ಗಾಪೂಜಾ ಸಮಿತಿಯ ಅಧ್ಯಕ್ಷರೂ ಆಗಿದ್ದ ಸಮಾಜವಾದಿ ಪಕ್ಷದ ಹಿರಿಯ ನಾಯಕ ಮನೋಜ್ ಜೈಸ್ವಾಲ್ ನೇತೃತ್ವದಲ್ಲಿ ದುರ್ಗಾ ಪೂಜೆ ಮೆರವಣಿಗೆ ನಡೆದಿತ್ತು. ಆ ವೇಳೆ ರಾಜ್ಯದಲ್ಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿತ್ತು. ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದರು.
RSS-BJPಯಿಂದ ಭಯದ ದೇಶದಲ್ಲಿ ವಾತಾವರಣ ಸೃಷ್ಟಿ : ರಾಹುಲ್
ಈ ಗಲಭೆಯ ಹಿನ್ನೆಲೆಯಲ್ಲಿ ಪೊಲೀಸರು 14 ಮಂದಿ ಆರೋಪಿಗಳ ವಿರುದ್ಧ ದೋಷಾರೋಪಣಾಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಫೈಜಾಬಾದ್ ಸ್ಥಳೀಯ ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆಯಿಂದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಫೈಜಾಬಾದ್ ಜಿಲ್ಲಾ ನ್ಯಾಯಾೀಧಿಶ ಸಂಜೀವ್ ಫೌಜ ರ್ ಅವರ ನ್ಯಾಯಾಲಯ ಆದೇಶ ನೀಡಿದೆ ಎಂದು ಜಿಲ್ಲಾ ಸರ್ಕಾರಿ ವಕೀಲ ರಾಮ್ ಕೃಷ್ಣ ತಿವಾರಿ ತಿಳಿಸಿದ್ದಾರೆ.
ಎರಡುವರೆ ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ವಶ
ಪ್ರಕರಣದ ಎಲ್ಲಾ ಸಾಕ್ಷಿಗಳು ಪ್ರತಿಕೂಲವಾಗಿದ್ದವು ಮತ್ತು ಆರೋಪಿಗಳ ವಿರುದ್ಧ ಬಲವಾದ ಪುರಾವೆಗಳನ್ನು ಪ್ರಸ್ತುತ ಪಡಿಸುವಲ್ಲಿ ಪೊಲೀಸರು ವಿಫಲರಾದರು ಎಂದು ತಿವಾರಿ ತಿಳಿಸಿದ್ದಾರೆ.
Faizabad, court, acquits, 14 accused, 2012, communal, riots case,