ನಕಲಿ ಬಿಲ್‍ಗಳ ಹಾವಳಿ: ನೀರಾವರಿ ನಿಗಮಗಳಲ್ಲಿ ವಿಶೇಷ ಆಡಿಟ್‍ಗೆ ಆದೇಶ..

Social Share

ಬೆಂಗಳೂರು,ಜ.4- ನೀರಾವರಿ ನಿಗಮಗಳಲ್ಲಿ ನಕಲಿ ಬಿಲ್ ಸೃಷ್ಟಿಸಿ ಅಕಾರಿಗಳು, ಗುತ್ತಿಗೆದಾರರು ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಲಸಂಪನ್ಮೂಲ ಇಲಾಖೆ ನೀರಾವರಿ ನಿಗಮಗಳಲ್ಲಿನ ಹಣಕಾಸು ವಹಿವಾಟುಗಳನ್ನು ವಿಶೇಷ ಆಡಿಟ್‍ಗೊಳಪಡಿಸಲು ನಿರ್ಧರಿಸಿದೆ.
ಜಲಸಂಪನ್ಮೂಲ ಇಲಾಖೆಗೆ ಪ್ರತಿ ಬಜೆಟ್‍ನಲ್ಲಿ ಸಾವಿರಾರು ಕೋಟಿ ರೂ. ಅನುದಾನ ಬಿಡುಗಡೆಯಾಗುತ್ತದೆ. ವಿವಿಧ ನೀರಾವರಿ ನಿಗಮಗಳಾದ ಕೃಷ್ಣಾ ಭಾಗ್ಯ ಜಲನಿಗಮ, ಕರ್ನಾಟಕ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ ಮತ್ತು ವಿಶ್ವೇಶ್ವರಯ್ಯ ಜಲ ನಿಗಮಗಳು ಸೇರಿದಂತೆ ಹಲವೆಡೆ ಸಾವಿರಾರು ಕಾಮಗಾರಿಗಳು ನಡೆಯುತ್ತಿರುತ್ತವೆ.
ಈ ನಿಗಮಗಳಿಗೆ ಹಂಚಿಕೆಯಾಗುವ ಸಾವಿರಾರು ಕೋಟಿ ರೂ. ಅನುದಾನದಲ್ಲಿ ಪ್ರಮುಖ ನಾಲೆ, ಕಾಲುವೆ, ಇನ್ನಿತರ ನೀರಾವರಿ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸಲಾಗುತ್ತದೆ. ಸರ್ಕಾರವೇ ಸಾವಿರಾರು ಕೋಟಿ ಸಾಲ ಮಾಡಿ ಕೊಡುತ್ತದೆ.
ಆದರೆ, ನಿಗಮಗಳಲ್ಲಿನ ಅಕಾರಿಗಳು ಹಾಗೂ ಗುತ್ತಿಗೆದಾರರು ಶಾಮೀಲಾಗಿ ಹಣ ದುರುಪಯೋಗ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ.
ಕರ್ನಾಟಕ ನೀರಾವರಿ ನಿಗಮದ ನಕಲಿ ಬಿಲ್ ಹಗರಣ: ಇತ್ತೀಚೆಗೆ ಕರ್ನಾಟಕ ನೀರಾವರಿ ನಿಗಮ ವ್ಯಾಪ್ತಿಯ ಹಿಪ್ಪರಗಿ ಬ್ಯಾರೇಜ್ ಯೋಜನಾ ವಿಭಾಗ (ಬೆಳಗಾವಿ ವಲಯ), ನೀರಾವರಿ ಯೋಜನಾ ವಿಭಾಗ ನಂ.1(ಕಲಬುರಗಿ ವಲಯ) ಮತ್ತು ತುಂಗಭದ್ರಾ ಎಡದಂಡೆ ಕಾಲುವೆ ವಿಭಾಗ ನಂ.4, ಸಿರವಾರ (ಮುನಿರಾಬಾದ್ ವಲಯ) ಕಚೇರಿಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದು ಬೆಳಕಿಗೆ ಬಂದಿತ್ತು. ಈ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸರ್ಕಾರ ಆದೇಶಿಸಿತ್ತು.
23 ಅಧಿಕಾರಿಗಳ ಅಮಾನತು: ಅಥಣಿಯ ಹಿಪ್ಪರಗಿ ಬ್ಯಾರೇಜ್ ಯೋಜನಾ ವಿಭಾಗದಲ್ಲಿ 8 ನಕಲಿ ಬಿಲ್‍ಗಳನ್ನು ಸೃಷ್ಟಿಸಿ 16.62 ಕೋಟಿ ರೂ. ದುರ್ಬಳಕೆ ಕಲಬುರ್ಗಿ ಹಾಗೂ ಮುನಿರಾಬಾದ್ ವಲಯ ಕಚೇರಿಗಳಲ್ಲಿ 20 ನಕಲಿ ಬಿಲ್ ಸೃಷ್ಟಿಸಿ 11.73 ಕೋಟಿ ರೂ. ದುರುಪಯೋಗ ಮಾಡಿರುವುದು ಪತ್ತೆಯಾಗಿದೆ. ಈ ಸಂಬಂಧ ಒಟ್ಟು 23 ಅಕಾರಿಗಳನ್ನು ಅಮಾನತು ಮಾಡಲಾಗಿದೆ.
ಈ ಪ್ರಕರಣದ ಮುಂದುವರೆದ ತನಿಖೆಯಲ್ಲಿ ಲೆಕ್ಕ ಅಕ್ಷಕ ದೀಪಕ ಮೂಡಲಗಿ, ಕೇಂದ್ರ ಕಚೇರಿಯಲ್ಲಿ ಸೇವೆ ಸಲ್ಲಿಸಿದ 2013-14 ರ ಅವಯಲ್ಲಿ ನಕಲಿ ಬಿಲ್‍ಗಳನ್ನು ಸೃಷ್ಟಿಸಿ ಹಣ ದುರುಪಯೋಗ ಮಾಡಿಕೊಂಡಿರುವುದು ಬಯಲಾಗಿದೆ.
ವೈಯಕ್ತಿಕ ಖಾತೆಗೆ ಅಕ್ರಮ ಹಣ ಜಮೆ: ಸಿರವಾರ ವಿಭಾಗದಲ್ಲಿ 5.11 ಕೋಟಿ, ಇಇ ಕಲಬುರ್ಗಿ ವಿಭಾಗದಲ್ಲಿ 2.82 ಕೋಟಿ, ಇಇಹೆಚ್‍ಬಿಸಿ ಅಥಣಿ ವಿಭಾಗದಲ್ಲಿ 17.17 ಕೋಟಿ , ಇಇ ಅಥಣಿ ವಿಭಾಗದಲ್ಲಿ 3.24 ಕೋಟಿ ರೂ. ಸೇರಿ ಒಟ್ಟು 28.35 ಕೋಟಿ ರೂ. ಹಣ ದುರ್ಬಳಕೆ ಮಾಡಿರುವುದು ಪತ್ತೆಯಗಿದೆ. ಅಧಿಕಾರಿಗಳು ಸರ್ಕಾರದ ಹಣವನ್ನು ಚೆಕ್ ಮುಖಾಂತರ ಗುತ್ತಿಗೆದಾರರ ವೈಯಕ್ತಿಕ ಖಾತೆಗೆ ಅಕ್ರಮವಾಗಿ ಒಟ್ಟು 11.73 ಕೋಟಿ ರೂ. ಹಣ ಜಮೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ.
ವಿಶೇಷ ಆಡಿಟ್‍ಗೆ ಇಲಾಖೆ ಸೂಚನೆ: ನೀರಾವರಿ ನಿಗಮದಲ್ಲಿ ನಡೆದ ಇಷ್ಟು ದೊಡ್ಡ ಪ್ರಮಾಣದ ನಕಲಿ ಬಿಲ್ ಹಗರಣದಿಂದ ಎಚ್ಚೆತ್ತುಕೊಂಡ ಇಲಾಖೆ ಸಚಿವ ಗೋವಿಂದಕಾರಜೋಳ ಇದೀಗ ಎಲ್ಲ ನೀರಾವರಿ ನಿಗಮಗಳಲ್ಲಿ ವಿಶೇಷ ಆಡಿಟ್‍ಗೆ ನಿರ್ದೇಶನ ನೀಡಿದ್ದಾರೆ. ಎಲ್ಲ ನಿಗಮಗಳಲ್ಲಿ ವಿಶೇಷ ಆಡಿಟ್ ಮೂಲಕ ಇಂತಹ ನಕಲಿ ಬಿಲ್ ಹಗರಣ ನಡೆದಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಈ ಮೂಲಕ ವಿಭಾಗ ಕಚೇರಿಯಲ್ಲಿ ಲಭ್ಯವಿರುವ ದಾಖಲೆಗಳು, ಕೇಂದ್ರ ಕಚೇರಿಯಿಂದ ಪಾವತಿಯಾಗಿರುವ ಮೂಲ ವೋಚರ್‍ಗಳು, ಡಾಟಾ ಎಂಟ್ರಿಯ ಟ್ಯಾಲಿ ಶೀಟ್ ಮತ್ತು ಬ್ಯಾಂಕ್ ಪಾಸ್ ಶೀಟ್ ದಾಖಲೆಗಳನ್ನು ಹಾಗೂ ಕಾಮಗಾರಿ ಬಿಲ್‍ಗಳ ವೋಚರ್‍ಗಳನ್ನು ಪರಿಶೀಲನೆ ಮಾಡಿ ವಿಭಾಗ ಮತ್ತು ಕೇಂದ್ರ ಕಚೇರಿಯ ದಾಖಲೆಗಳೊಂದಿಗೆ ತಾಳೆ ಮಾಡಲಾಗುತ್ತಿದೆ.
ಆ ಮೂಲಕ ಹಣ ದುರುಪಯೋಗ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಕರ್ನಾಟಕ ನೀರಾವರಿ ನಿಗಮದಲ್ಲಿನ ಅವ್ಯವಹಾರ ಬಯಲಿಗೆ ಬಂದ ಹಿನ್ನೆಲೆ ಎಲ್ಲ ನಿಗಮಗಳಲ್ಲಿ ವಿಶೇಷ ಆಡಿಟ್ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಕಾರಜೋಳ ತಿಳಿಸಿದ್ದಾರೆ.

Articles You Might Like

Share This Article