ಶಿರಾಡಿ ಘಾಟ್‍ನಲ್ಲಿ ಗೋಡಂಬಿ ಖರೀದಿಸುವ ಮುನ್ನ ಹುಷಾರ್..!

Social Share

ಚಿಕ್ಕಮಗಳೂರು, ಜ.7- ಗ್ರಾಮ ಪಂಚಾಯತ್, ಅರಣ್ಯ ಇಲಾಖೆ, ಪೊಲೀಸ್, ಆಹಾರ ಇಲಾಖೆಯಂತಹ ಪ್ರಮುಖ ಇಲಾಖೆಗಳು ಗಾಢನಿದ್ರೆ ಅಥವಾ ಭ್ರಷ್ಟಾಚಾರಕ್ಕೆ ಒಳಗಾದರೆ ಏನಾಗುತ್ತದೆ ಎಂಬುದಕ್ಕೆ ಇಲ್ಲಿದೆ ಒಂದು ಉತ್ತಮ ನಿದರ್ಶನ. ಬೆಂಗಳೂರು ಅಥವಾ ಮಂಗಳೂರಿಗೆ ಶಿರಾಡಿ ಘಾಟ್ ಮೂಲಕ ತೆರಳುವಾಗ ಕಡಿಮೆ ಬೆಲೆಗೆ ಸಿಗುವ ಗೋಡಂಬಿ ಕೊಳ್ಳುವವರು ಎಚ್ಚರದಿಂದಿರುವುದು ಒಳಿತು.
ಹಾಫ್ ರೇಟ್, ಚೀಪ್ ರೇಟ್ ಎಂದು ಕೆಲವು ಯುವಕರು ಗೋಡಂಬಿ ತೋರಿಸಿ ನಿಮ್ಮನ್ನು ಯಾಮಾರಿಸುತ್ತಾರೆ. ಇವರು ಮಾರುವ ನಕಲಿ ಗೋಡಂಬಿ ಕೇವಲ 300 ರಿಂದ 500ರೂ. ಅಷ್ಟೇ. ಹಾಗಾಗಿ ಇಷ್ಟು ಕಡಿಮೆ ಇದೆಯಲ್ಲ ಎಂದು ಕೊಂಡುಕೊಳ್ಳುವವರೇ ಹೆಚ್ಚು. ಒಂದೊಮ್ಮೆ ಇಷ್ಟು ಕಡಿಮೆ ಇದೆಯಾ ಎಂದು ಅನುಮಾನ ಮೂಡಬಹುದು. ನಿಜಕ್ಕೂ ಇಲ್ಲೇ ಇರುವುದು ಅಸಲಿಯತ್ತು… ಅಂದರೆ ಇದು ನಕಲಿ ಗೋಡಂಬಿ..! ಮಾತ್ರವಲ್ಲ, ವಿಷಕಾರಿಯೂ ಹೌದು..!
ಹೇಗೆಂದರೆ ಸ್ವಲ್ಪ ಗೋಡಂಬಿ, ಮೈದಾ ಹಾಕಿ ಮಿಶ್ರಣ ಮಾಡಿ ಅದನ್ನು ಕಬ್ಬಿನ ಜ್ಯೂಸ್ ಮೆಷಿನ್ ಹೋಲುವ ಮಿಷನ್‍ಗಳ ಅಚ್ಚುಗಳಲ್ಲಿ ಥೇಟ್ ಗೋಡಂಬಿಯಂತೆ ತಯಾರಿಸಿ ನಂತರ ಬಾಯ್ಲ್ ಮಾಡಲಾಗುತ್ತದೆ. ಇದನ್ನೇ ಕಡಿಮೆ ಬೆಲೆಗೆ ರಸ್ತೆ ಬದಿಯಲ್ಲೆಲ್ಲ ಮಾರಾಟ ಮಾಡುತ್ತಾರೆ.
ಮೈದಾ ಹಾಕಿದ ಯಾವುದೇ ಆಹಾರ ಪದಾರ್ಥ ಹೆಚ್ಚು ದಿನ ಇಟ್ಟರೆ ಹಾಳಾಗುವುದರಿಂದ ಅದನ್ನು ಆ್ಯಸಿಡ್‍ನಿಂದ ಕ್ಲೀನ್ ಮಾಡಲಾಗುತ್ತದೆ ಮತ್ತು ವಿಷಯುಕ್ತ ಕೆಮಿಕಲ್ ಬಳಸಲಾಗುತ್ತದೆ. ಇದನ್ನೇ ಅಸಲಿ ಗೋಡಂಬಿ ಎಂಬಂತೆ ಮಾರಾಟ ಮಾಡುತ್ತಾರೆ. ಇಂತಹ ಗೋಡಂಬಿ ಬಳಕೆಯಿಂದ ಕಿಡ್ನಿ, ಹಾರ್ಟ್, ಲಿವರ್‍ಗೆ ಹಾನಿಯಂತೂ ಕಟ್ಟಿಟ್ಟ ಬುತ್ತಿ. ಕೆಲವೊಮ್ಮೆ ಇವುಗಳಿಗೆ ಡ್ಯಾಮೇಜ್ ಆಗುವ ಸಾಧ್ಯತೆಯೂ ಇಲ್ಲದಿಲ್ಲ.
ಧರ್ಮಸ್ಥಳ, ಸುಬ್ರಮಣ್ಯಕ್ಕೆ ಹೋಗುವ ಬೆಂಗಳೂರು, ಮೈಸೂರು ಭಾಗದ ಪ್ರವಾಸಿಗರೇ ಇವರ ಟಾರ್ಗೆಟ್. ಆಯ್ಯೋ ನಾವೇನು ತೆಗೆದುಕೊಳ್ಳುವುದಿಲ್ಲ ಎಂದು ಸುಮ್ಮನಾಗಬೇಡಿ. ನೀವಲ್ಲದಿದ್ದರೂ ನಿಮ್ಮ ಕುಟುಂಬದವರೋ, ಗೆಳೆಯರೋ ಇದಕ್ಕೆ ಮಾರುಹೋಗಬಹುದು.
ಇಂತಹ ವ್ಯಕ್ತಿಗಳು ತಮ್ಮ ಹೆಂಡತಿ, ಮಕ್ಕಳನ್ನು ಸಾಕಲು ಇನೊಬ್ಬರನ್ನು ಬಲಿ ಕೊಡುತ್ತಾರೆ. ಹಾಗಾಗಿ ಇಂತಹ ವಿಷಯವನ್ನು ತಿಳಿದು ಬೇರೆಯವರಿಗೂ ತಿಳಿಸುವುದರಿಂದ ಅಮಾಯಕರ ಜೀವ ಉಳಿಸಿದಂತಾಗುತ್ತದೆ. ಇದಕ್ಕಿಂತ ಪುಣ್ಯ ಬೇರೊಂದಿಲ್ಲ.

Articles You Might Like

Share This Article