ಬೆಂಗಳೂರು, ಡಿ.15- ಕ್ಲಿನಿಕ್‍ಗೆ ಬಂದಿದ್ದ ಮಹಿಳೆಗೆ ಯಾವುದೋ ಚುಚ್ಚು ಮದ್ದು ನೀಡಿ ಅಚಾತುರ್ಯಕ್ಕೆ ಕಾರಣನಾದ ನಕಲಿ ವೈದ್ಯ ಹಾಗೂ ಕ್ಲಿನಿಕ್ ಮಾಲೀಕನನ್ನು ರಾಜಗೋಪಾಲ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನಕಲಿ ವೈದ್ಯ ಡಾ. ನಾಗರಾಜ್ ಹಾಗೂ ಕ್ಲಿನಿಕ್ ಮಾಲೀಕ ಕುಮಾರಸ್ವಾಮಿ ಬಂಧಿತರು. ಸಂಜೀವಿನಿ ನಗರದಲ್ಲಿ ಸಹನ ಪಾಲಿ ಕ್ಲಿನಿಕ್ ಇದ್ದು, ಶ್ರೀಗಂಧ ನಗರ ನಿವಾಸಿ, ಗಾರ್ಮೆಂಟ್ಸ್ ಉದ್ಯೋಗಿ ಜ್ಯೋತಿ ಎಂಬ ಮಹಿಳೆ ಜ್ವರಕ್ಕಾಗಿ ಈ ಕ್ಲಿನಿಕ್‍ಗೆ ಹೋದಾಗ ವೈದ್ಯ ನಾಗರಾಜ್ ಆಕೆಯನ್ನು ಪರೀಕ್ಷಿಸಿ ಸೊಂಟಕ್ಕೆ ಚುಚ್ಚುಮದ್ದು ನೀಡಿದ್ದಾರೆ.
ಎಚ್‍ಡಿಕೆ ಹುಟ್ಟುಹಬ್ಬದ ಅಂಗವಾಗಿ ನಾಳೆ ಶ್ರೀನಿವಾಸ ಕಲ್ಯಾಣ ಮಹೋತ್ಸವ
ಚಿಕಿತ್ಸೆ ಪಡೆದು ಮನೆಗೆ ಹೋದ ಮಹಿಳೆಯ ಆರೋಗ್ಯದಲ್ಲಿ ಏರು-ಪೇರಾಗಿದೆ. ಚುಚ್ಚುಮದ್ದು ನೀಡಿದ ಸೊಂಟದ ಜಾಗ ಕಪ್ಪಾಗಿದೆ. ಇದರಿಂದ ಗಾಬರಿಯಾದ ಆ ಮಹಿಳೆ ಮತ್ತೆ ಕ್ಲಿನಿಕ್‍ಗೆ ಹೋಗಿದ್ದಾರೆ. ಕ್ಲಿನಿಕ್‍ನಲ್ಲಿದ್ದ ನಾಗರಾಜ್ ಕಪ್ಪಾದ ಜಾಗಕ್ಕೆ ಹಚ್ಚಲು ಮುಲಾಮು ನೀಡಿ ಕಳುಹಿಸಿದ್ದಾನೆ. ಮಹಿಳೆ ಮನೆಗೆ ಹೋಗಿ ಮುಲಾಮು ಹಚ್ಚಿದ್ದು ತದನಂತರದಲ್ಲಿ ಆ ಜಾಗದಲ್ಲಿ ಗಾಯವಾಗಿ ಸೆಪ್ಟಿಕ್ ಆಗಿದೆ.
ಇದರಿಂದ ಗಾಬರಿಯಾದ ಮಹಿಳೆ ಕ್ಲಿನಿಕ್‍ಗೆ ಹೋಗಿ ವಿಚಾರಿಸಿದಾಗ, ಈ ವಿಷಯವನ್ನು ಯಾರಿಗೂ ಹೇಳಬೇಡಿ. ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ. ನಾನು ಪರಿಹಾರ ಕೊಡುತ್ತೇನೆ ಎಂದು ಹೇಳಿದ್ದಾನೆ. ಆ ಮಹಿಳೆ ನಂತರ ಬೇರೆ ಆಸ್ಪತ್ರೆಗೆ ಚಿಕಿತ್ಸೆಗೆ ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ತಿಳಿಸಿದಾಗ ಗಾಬರಿಯಾಗಿ ಆಕೆ ರಾಜಗೋಪಾಲ ನಗರ ಠಾಣೆ ಪೊಲೀಸರಿಗೆ ತಿಳಿಸಿದ್ದಾರೆ.
ಬೊಮ್ಮಾಯಿ -ಬಿಎಸ್‍ವೈ ನಡುವೆ ಶೀತಲ ಸಮರ..!
ಪೊಲೀಸರು ಕ್ಲಿನಿಕ್‍ಗೆ ಬಂದು ತನಿಖೆ ನಡೆಸಿದಾಗ ನಾಗರಾಜು ನಕಲಿ ವೈದ್ಯ ಎಂಬುದು ಗೊತ್ತಾಗಿದೆ. ತಕ್ಷಣ ಕ್ಲಿನಿಕ್ ಮಾಲೀಕ ಕುಮಾರ್ ಸ್ವಾಮಿ ಹಾಗೂ ನಕಲಿ ವೈದ್ಯ ನಾಗರಾಜನನ್ನು ಬಂಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
fake clinic, doctor, owner, Arrest,