ಡಾಕ್ಟರ್ ವೇಷ ಧರಿಸಿ ಆಸ್ಪತ್ರೆಯಲ್ಲಿ ಕಳ್ಳತನ

Social Share

ಬೆಂಗಳೂರು, ಜ.16- ನಗರದ ಆಸ್ಪತ್ರೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಡಾಕ್ಟರ್ ವೇಷ ಹಾಕಿ ಆಸ್ಪತ್ರೆ ಒಳಗೆ ಹೋಗಿ ಕೈಗೆ ಸಿಕ್ಕಿದ್ದನ್ನೆಲ್ಲಾ ಕಳ್ಳತನ ಮಾಡಿರುವ ಘಟನೆ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಡಾಕ್ಟರ್ ವೇಷ ಧರಿಸಿದ ಕಳ್ಳಿಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ. ಮೊನ್ನೆ ಮಧ್ಯಾಹ್ನ 2.45ರ ಸುಮಾರಿಗೆ ಅಶೋಕ ನಗರದಲ್ಲಿನ ಸೆಟ್ ಫಿಲೋಮಿನಾ ಆಸ್ಪತ್ರೆಗೆ ರಮೇಶ್ ಎಂಬುವರು ಅವರ ತಾಯಿಯನ್ನು ಕರೆ ತಂದಿದ್ದಾಗ ಆಸ್ಪತ್ರೆಯೊಳಗಿದ್ದ ಡಾಕ್ಟರ್ ವೇಷ ಧರಿಸಿದ್ದ ಕಳ್ಳಿ ಅವರ ಆರೋಗ್ಯ ತಪಾಸಣೆ ಮಾಡಬೇಕು. ನೀವು ಹೊರಗಿರಿ ಎಂದು ಹೇಳಿ ಕಳುಹಿಸಿದ್ದಾಳೆ.

ನಂತರ ರಮೇಶ್ ಅವರ ತಾಯಿಯ ಕೈಯಲ್ಲಿದ್ದ ಉಂಗುರ ಮತ್ತು ಸರವನ್ನು ಕಳ್ಳತನ ಮಾಡಿ ನಕಲಿ ಸರ ಹಾಕಿ ಸ್ಥಳದಿಂದ ನಾಪತ್ತೆಯಾಗಿದ್ದಾಳೆ. ಕೆಲ ಸಮಯದ ಬಳಿಕ ರಮೇಶ್ ಅವರು ಒಳಗೆ ಹೋಗಿ ನೋಡಿದಾಗ ತಾಯಿಯ ಆಭರಣ ಕಳ್ಳತನವಾಗಿರುವುದು ಕಂಡು ಬಂದಿದೆ.

ಪ್ರೀಯಾಂಕ ಗಾಂಧಿಯನ್ನು ಅದ್ದೂರಿಯಾಗಿ ಸ್ವಾಗತಿಸಿದ ‘ಕೈ’ನಾಯಕರು

ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಮಹಿಳೆಯಲ್ಲದೆ ಅದೇ ರೀತಿ ಈ ಹಿಂದೆಯೂ ಕೋಮಲ ಎಂಬ ರೋಗಿಯ ಆಭರಣ ಕಳ್ಳತನವಾಗಿತ್ತು. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ನಕಲಿ ಡಾಕ್ಟರ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

fake, doctor, theft, hospital,

Articles You Might Like

Share This Article