ಬೆಂಗಳೂರು, ಜ.30- ಕೋಟ್ಯಂತರ ಬೆಲೆ ಬಾಳುವ ಸೈಟ್‍ಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‍ಗಳಲ್ಲಿ ಲೋನ್ ತೆಗೆದುಕೊಂಡು ವಂಚಿಸುತ್ತಿದ್ದ ಖತರ್ನಾಕ್ ವಂಚಕನೊಬ್ಬನನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಂಚಕನ ವಿರುದ್ಧ 7 ಪ್ರಕರಣಗಳು ದಾಖಲಾಗಿವೆ. ಪೊಲೀಸರು ಬಂಧಿಸಲು ಹೋದಾಗ ಅವರಿಗೆ ಧಮ್ಕಿ ಹಾಕಿದ್ದಾನೆ.
ಈತ ತಂಡವೊಂದನ್ನು ಕಟ್ಟಿಕೊಂಡು 2016ರಿಂದ ನಗರದಲ್ಲಿ ಬೆಲೆ ಬಾಳುವ ಸೈಟ್‍ಗಳನ್ನು ಗುರುತಿಸಿಕೊಂಡು ಅವುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಆ ದಾಖಲೆಗಳನ್ನು ಬ್ಯಾಂಕ್‍ಗಳಿಗೆ ನೀಡಿ ಕೋಟ್ಯಂತರ ರೂ. ಹಣ ಲೋನ್ ತೆಗೆದುಕೊಂಡು ಲೋನ್ ಹಣ ತೀರಿಸದೆ ಮೊಬೈಲ್ ಸ್ವಿಚ್‍ಆಪ್ ಮಾಡಿಕೊಳ್ಳುತ್ತಿದ್ದನು.
ಹಿರಿಯರ T-20 ವಿಶ್ವಕಪ್ ಗೆಲ್ಲುವುದೇ ನನ್ನ ಗುರಿ : ಶೆಫಾಲಿ
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಂಚಕನನ್ನು ಬಂಧಿಸಲು ಹೋದಾಗ ಜನಪ್ರತಿನಿಧಿಗಳಿಂದ ಫೋನ್ ಮಾಡಿಸಿದ್ದನಂತೆ. ಅಲ್ಲದೆ ವಿಜಯಮಲ್ಯ ಬ್ಯಾಂಕ್‍ಗಳಿಗೆ ಸಾವಿರಾರು ಕೋಟಿ ವಂಚನೆ ಮಾಡಿದ್ದಾನೆ. ಅವರನ್ನು ಕೇಳುವವರ್ಯಾರು ಇಲ್ಲ. ನಾನು ಮಾಡಿರುವುದು 3-4 ಕೋಟಿ ಅಷ್ಟೇ. ನಾನು ಬ್ಯಾಂಕಿನಲ್ಲಿ ಹಣ ಪಡೆದಿದ್ದೇನೆ ಅದನ್ನು ಕೇಳಲು ನೀವ್ಯಾರು, ಜೈಲಿನಿಂದ ಹೊರ ಬಂದು ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಬಂಧಿಸಿ ತೆರಳಿದ್ದ ಪೊಲೀಸರಿಗೆ ಧಮ್ಕಿ ಹಾಕಿದ್ದಾನೆ.
ಭ್ರಷ್ಟ ಬಿಜೆಪಿ ಮೊಂಡುವಾದ ಮಾಡುತ್ತಿದೆ : ಸಿದ್ದರಾಮಯ್ಯ
ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.
fake, document, creating, banks, loans, Fraud,