ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕ್‌ಗಳಿಗೆ ಪಂಗನಾಮ ಹಾಕಿದ್ದ ಆರೋಪಿಗಳ ಬಂಧನ

Social Share

ಬೆಂಗಳೂರು, ನ.23- ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ನಕಲಿ ಚಿನ್ನಾಭರಣಗಳನ್ನು ಅಡಮಾನವಿಟ್ಟು ಕೋಟ್ಯಾಂತರ ರೂ. ಸಾಲ ಪಡೆದುಕೊಂಡು ಬ್ಯಾಂಕ್ಗಳಿಗೆ ವಂಚಿಸಿದ್ದ ಮೂವರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅರುಣ್ ರಾಜು ಕಾನಡೆ(30), ಸತ್ಯಾನಂದ ಅಲಿಯಾಸ್ ಸತ್ಯ(28) ಮತ್ತು ದತ್ತಾತ್ರೇಯ ಬಾಕಳೆ ಅಲಿಯಾಸ್ ಯಶ್(28) ಬಂಧಿತ ಆರೋಪಿಗಳು.

ಕಳೆದ ಸೆಪ್ಟೆಂಬರ್ 23ರಂದು ಮಧ್ಯಾಹ್ನ 12.30ರ ಸುಮಾರಿನಲ್ಲಿ ವಿಜಯನಗರ ವ್ಯಾಪ್ತಿಯ ಬ್ಯಾಂಕ್ ಆಪ್ ಬರೋಡಾ ಶಾಖೆಗೆ ಸತ್ಯಾನಂದ ಮತ್ತು ಜಯಲಕ್ಷ್ಮೀ ಎಂಬುವರು ಸುಮಾರು 235.6 ಗ್ರಾಂ ನಕಲಿ ಚಿನ್ನಾಭರಣಗಳನ್ನು ತೆಗೆದುಕೊಂಡು ಬಂದಿದ್ದು ಜಯಲಕ್ಷ್ಮೀ ಹೆಸರಿನಲ್ಲಿ ಅಡಮಾನವಿಟ್ಟು 7.15 ಲಕ್ಷ ರೂ.ಗಳನ್ನು ಸಾಲವಾಗಿ ಪಡೆದುಕೊಂಡು ಮೋಸ ಮಾಡಲು ಪ್ರಯತ್ನಿಸಿದ್ದರು.

ಎಸ್‍ಐ ನೇಮಕಾತಿ ಅಕ್ರಮ : ಆರೋಪಿಗಳಿಂದ 3.11 ಕೋಟಿ ರೂ. ಜಪ್ತಿ

ಬ್ಯಾಂಕ್ ಅಪ್ರೈಸರ್ ಮತ್ತು ಮ್ಯಾನೇಜರ್ಗೆ ಅನುಮಾನ ಬಂದು ಅವರು ತಂದಿದ್ದ ಚಿನ್ನಾಭರಣಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ನಕಲಿ ಚಿನ್ನಾಭರಣಗಳೆಂದು ಖಚಿತಪಡಿಸಿಕೊಂಡರು. ತಕ್ಷಣ ಬ್ಯಾಂಕ್ ಮ್ಯಾನೇಜರ್ ಮಹೇಶ್ ಸಿ ಹೂಗಾರ್ ಅವರು ವಿಜಯ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮೂವರನ್ನು ಬಂಧಿಸಿದ್ದು, ವಿಚಾರಣೆಗೊಳಪಡಿಸಿದಾಗ ಆರೋಪಿಗಳು ತಾಮ್ರದ ಮೇಲೆ ಚಿನ್ನವನ್ನು ಲೇಪನ ಮಾಡಿ ಹಾಲ್ ಮಾರ್ಕ್ ಗುರುತನ್ನು ಮುದ್ರಿಸಿರುವ ನಕಲಿ ಚಿನ್ನಾಭರಣಗಳನ್ನು ಪಶ್ಚಿಮ ಬಂಗಾಳದಿಂದ ಕೊರಿಯರ್ ಮೂಲಕ ತರಿಸಿಕೊಂಡು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಅಡಮಾನ ಮಾಡಿ ಸಾಲವನ್ನು ಪಡೆದುಕೊಂಡು ವಾಪಸ್ ಕಟ್ಟದೆ ವಂಚಿಸುವ ಪ್ರವೃತ್ತಿ ಹೊಂದಿರುವುದು ಗೊತ್ತಾಗಿದೆ.

ಆರೋಪಿಗಳು ಗುಜರಾತ್ ರಾಜ್ಯದ ಸೂರತ್ ಸಿಟಿ, ಕರ್ನಾಟಕದ ಬೆಂಗಳೂರು, ಉಡುಪಿ, ಗದಗ, ಕೊಪ್ಪಳ, ಹುಬ್ಬಳ್ಳಿ ಜಿಲ್ಲೆಗಳಲ್ಲಿನ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸುಮಾರು 15 ಕೆಜಿಗಳಷ್ಟು ನಕಲಿ ಚಿನ್ನಾಭರಣಗಳನ್ನು ಅಡಮಾನ ಮಾಡಿ ಕೋಟ್ಯಾಂತರ ರೂಪಾಯಿಗಳನ್ನು ಸಾಲವಾಗಿ ಪಡೆದುಕೊಂಡು ವಾಪಸ್ ಕಟ್ಟದೇ ಮೋಸ ಮಾಡಿರುತ್ತಾರೆ.

ಇದುವರೆಗೂ 1475.640 ಗ್ರಾಂ ನಕಲಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದ ಸಂಬಂಧಪಟ್ಟ ಬ್ಯಾಂಕುಗಳವರು ಆರೋಪಿತರ ವಿರುದ್ಧ ಪ್ರಕರಣ ದಾಖಲಿಸುವಂತೆ ಮಾಹಿತಿ ನೀಡಿ ತನಿಖೆ ಕೈಗೊಂಡಿ ದ್ದಾರೆ.

ನೆಲಮಂಗಲದಲ್ಲಿ ಘರ್ಜಿಸಿದ ಪೊಲೀಸ್ ಪಿಸ್ತೂಲ್ : ದರೋಡೆಕೋರನಿಗೆ ಗುಂಡೇಟು

ಪಶ್ಚಿಮ ವಿಭಾಗದ ಉಪಪೊಲೀಸ್ ಆಯುಕ್ತ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ವಿಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರವಿ ಅವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್ ಹಾಗೂ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ಮಾಲುಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

fake, gold, jewelery, banks, three, Arrest,

Articles You Might Like

Share This Article