ಬೆಂಗಳೂರು,ಮಾ.18- ಐಪಿಎಸ್ ಅಧಿಕಾರಿ ಎಂದು ಪೊಲೀಸ್ ಅಧಿಕಾರಿಯ ಸಮವಸ್ತ್ರ ಧರಿಸಿ ನಕಲಿ ಪಿಸ್ತೂಲು, ವಾಕಿಟಾಕಿ ಇಟ್ಟುಕೊಂಡು ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದ ನಕಲಿ ಐಪಿಎಸ್ ಅಧಿಕಾರಿಯೊಬ್ಬನನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಂದ್ರಲೇಔಟ್‍ನ ಮಾರುತಿನಗರದ ನೇತ್ರಾವತಿ ರಸ್ತೆಯ 5ನೇ ಕ್ರಾಸ್ ನಿವಾಸಿ ಶ್ರೀನಿವಾಸ(34) ಬಂಧಿತ ನಕಲಿ ಅಧಿಕಾರಿ.
ಈತನಿಂದ 36.20 ಲಕ್ಷ ನಗದು ಹಾಗೂ 54 ಲಕ್ಷ ಬೆಲೆ ಬಾಳುವ ಕಾರು, ಮೊಬೈಲ್‍ಫೋನ್ ಮತ್ತು ಬಿಎಂಡಬ್ಲ್ಯು ಬೈಕ್ ಸೇರಿದಂತೆ 4 ಬೈಕ್, ನಕಲಿ ಪಿಸ್ತೂಲು, ಲ್ಯಾಪ್‍ಟಾಪ್, 4 ವಾಕಿಟಾಕಿಗಳು ಹಾಗೂ ನಕಲಿ ಗುರುತಿನ ಕಾರ್ಡ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ತೂಕದ ಸ್ಕೇಲ್‍ಗಳಲ್ಲಿ ಚಿಪ್ ಅಳವಡಿಸಿ ವಂಚನೆ : 17 ಮಂದಿ ಬಂಧನ
ಆರೋಪಿಯು ಡಿಫ್ಲೋಮೊ ಇನ್ ಕಂಪ್ಯೂಟರ್ ಸೈನ್ಸ್ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿ ಐಷರಾಮಿ ಜೀವನಕ್ಕೆ ಮಾರು ಹೋಗಿ 2010ರಲ್ಲಿ ಎರಡು ಕಾರುಗಳನ್ನು ಕಳ್ಳತನ ಮಾಡಿದ್ದ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಜೈಲಿಗೂ ಹೋಗಿ ಬಂದಿದ್ದನು.
ತದನಂತರ ಕರ್ನಾಟಕ ಓಪನ್ ಯೂನಿವರ್ಸಿಟಿಯಲ್ಲಿ ಬಿಸಿಎ ವ್ಯಾಸಂಗ ಮಾಡಿ ಬನ್ನೇರುಘಟ್ಟದ ಬೇಗೂರುಕೊಪ್ಪದ ಹುಲ್ಲಹಳ್ಳಿ ಬಳಿ ಇರುವ ಶಾಲೆಯೊಂದರಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸಕ್ಕೆ ಸೇರಿಕೊಂಡು ಅದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ರಮ್ಯ ಎಂಬುವರನ್ನು ಪರಿಚಯಿಸಿಕೊಂಡು ನಾನು
ಐಪಿಎಸ್ ಅಧಿಕಾರಿ ಎಂದು ನಂಬಿಸಿ ನಿನ್ನನ್ನೇ ಮದುವೆಯಾಗುವುದಾಗಿ ನಂಬಿಸಿ ಅವರೊಂದಿಗೆ ಸುತ್ತಾಡಿ ಮೋಸ ಮಾಡಿದ್ದಾನೆ.
ಉರಿಗೌಡ, ನಂಜೇಗೌಡ ವಿಚಾರದಿಂದ ಮತ ವಿಭಜನೆ ಸಾಧ್ಯವಿಲ್ಲ : ಹೆಚ್‌ಡಿಕೆ
ಆರೋಪಿಯು ಅಪರಾಧ ಹಿನ್ನಲೆಯುಳ್ಳವನಾಗಿದ್ದು, ಶೋಕಿ ಮಾಡಲು ಹಾಗೂ ಐಷರಾಮಿ ಜೀವನ ನಡೆಸಲು ಸಿನಿಮಾಗಳಲ್ಲಿ ಬರುವ ಪೊಲೀಸ್ ಅಧಿಕಾರಿಗಳ ಪಾತ್ರವನ್ನು ನೋಡಿ ಅದನ್ನೇ ಅನುಕರಿಸಿ ಸುಲಭವಾಗಿ ಹಣ ಸಂಪಾದನೆ ಮಾಡಲು ಐಪಿಎಸ್ ಅಧಿಕಾರಿಯ ವೇಷ ಧರಿಸಿದ್ದಾನೆ.
ವೆಂಕಟನಾರಾಯಣ ಎಂಬುವರು ಸ್ನೇಹಿತರೊಬ್ಬರಿಂದ ಪರಿಚಿತರಾದ ಶ್ರೀನಿವಾಸ್ ಎಂಬಾತ ಪೊಲೀಸ್ ಅಧಿಕಾರಿ ಎಂದು ನಂಬಿಸಿ ಸ್ನೇಹಿತರಿಂದ 2.25 ಕೋಟಿ ಪಡೆದುಕೊಂಡು ನಂತರ 50 ಲಕ್ಷ ವಾಪಸ್ ಕೊಟ್ಟು ಉಳಿದ 1.75 ಕೋಟಿ ರೂ. ಮೋಸ ಮಾಡಿದ್ದಾನೆ ಎಂದು ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
Fake, IPS, officer, arrested, Bengaluru, Police,