ಬೆಂಗಳೂರು,ಡಿ. 6- ಪರೀಕ್ಷೆ ಬರೆಯದೇ ಪ್ರತಿಷ್ಠಿತ ವಿಶ್ವವಿದ್ಯಾಲ ಯಗಳು ಹಾಗೂ ಪದವಿಪೂರ್ವ ಮಾಕ್ರ್ಸ್ಕಾರ್ಡ್ಗಳನ್ನು ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ಹಣ ಪಡೆದು ನಕಲಿ ಮಾಕ್ರ್ಸ್ಕಾರ್ಡ್ ಗಳನ್ನು ನೀಡಿ ವಂಚಿಸಿದ್ದ ಐದು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ ಶ್ರೀ ವೆಂಕಟೇಶ್ವರ ಇನ್ಸ್ಟ್ಯೂಟ್ನಲ್ಲಿದ್ದ ನಕಲಿ 1097 ದಾಖಲಾತಿ, ಪಿಎಚ್ಡಿ ಪುಸ್ತಕಗಳು, ಹಾರ್ಡ್ಡಿಸ್ಕ್, ಪ್ರಿಂಟರ್, ಮೊಬೈಲ್ ಫೋನ್ಗಳು, ಸೀಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶ್ರೀ ವೆಂಕಟೇಶ್ವರ ಇನ್ಸ್ಟ್ಯೂಟ್ ಸಂಸ್ಥೆಯ ವೆಬ್ಸೈಟ್ನಲ್ಲಿ ವಿವಿಧ ಪದವಿಗಳ ಕರೆನ್ಸ್ಪಾಂಡೆನ್ಸ್ ಕೋರ್ಸ್ಗಳ ಮಾಹಿತಿ ನೀಡಿದ್ದು, ಇದನ್ನು ಗಮನಿಸಿದ ಪಿರ್ಯಾದುದಾರರು ಮಹಾಲಕ್ಷ್ಮೀ ಲೇಔಟ್ನಲ್ಲಿರುವ ಕಚೇರಿಗೆ ನವೆಂಬರ್ 2ರಂದು ಹೋಗಿದ್ದಾರೆ.
ಕಚೇರಿಯ ರಿಸೆಪ್ಷನ್ ಕೌಂಟರ್ನಲ್ಲಿ ಕುಳಿತಿದ್ದ ಮಹಿಳೆಯನ್ನು ವಿಚಾರಿಸಿ, ಬಿಕಾಂ ಪದವಿ ಅವಶ್ಯಕತೆ ಇದೆ ಎಂದು ಕೇಳಿದಾಗ ಮಹಿಳೆಯು ಒಂದು ಲಕ್ಷ ಹಣ ಕೊಟ್ಟರೆ ನಿಮಗೆ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ಪದವಿ ಪ್ರಮಾಣ ಪತ್ರ ಕೊಡುವುದಾಗಿ ತಿಳಿಸಿದ್ದಾರೆ.
ತದನಂತರದಲ್ಲಿ ಪಿರ್ಯಾದುದಾರರು 40 ಲಕ್ಷ ಹಣವನ್ನು ಕೊಟ್ಟು ರಸೀದಿ ಪಡೆದುಕೊಂಡು ಪರೀಕ್ಷೆ ಬರೆಯಲು ಯಾವಾಗ ಬರಬೇಕೆಂದು ಕೇಳಿದಾಗ ನೀವು ಪರೀಕ್ಷೆ ಬರೆಯುವುದು ಬೇಡ, ನಾವೇ ಬರೆಸಿ ನಿಮಗೆ ಮಾಕ್ರ್ಸ್ಕಾರ್ಡ್ ಕೊಡಿಸುತ್ತೇವೆ ಎಂದು ಹೇಳಿ ಕಳುಹಿಸಿದ್ದಾರೆ.
ನವೆಂಬರ್ 26ರಂದು ಪಿರ್ಯಾದಿಯ ವಾಟ್ಸಾಪ್ ನಂಬರಿಗೆ ಬಿಕಾಂ ಮೊದಲ ಹಾಗೂ ಎರಡನೇ ವರ್ಷದ ಮಾಕ್ರ್ಸ್ಕಾರ್ಡ್ಗಳನ್ನು ಆರೋಪಿಯ ವಾಟ್ಸಾಪ್ ನಂಬರಿಂದ ಕಳುಹಿಸಿದ್ದಾರೆ. ಅಂತಿಮ ವರ್ಷದ ಮಾಕ್ರ್ಸ್ಕಾರ್ಡ್ ಬಗ್ಗೆ ಕೇಳಿದಾಗ ಉಳಿದ ಹಣವನ್ನು ಕೊಟ್ಟು ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.
ಇದರ ಬಗ್ಗೆ ಅನುಮಾನಗೊಂಡು ಪರೀಕ್ಷೆ ಬರೆಯದೇ ಮಾಕ್ರ್ಸ್ಕಾರ್ಡ್ ಕಳುಹಿಸಿದ್ದ ಶ್ರೀವೆಂಕಟೇಶ್ವರ ಇನ್ಸ್ಟ್ಯೂಟ್ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು ಕಾರ್ಯಾಚರಣೆಗಿಳಿದು ಮಾಹಿತಿ ಕಲೆ ಹಾಕಿದರು.ಆರೋಪಿಗಳು ತಮ್ಮದೇ ಜಾಲವನ್ನು ಹೊಂದಿದ್ದು, ಪ್ರಮುಖ ಆರೋಪಿ ಶ್ರೀನಿವಾಸ ರೆಡ್ಡಿ ಹಾಗೂ ಈತನ ಸಹಚರರು ಸೇರಿಕೊಂಡು ನಗರದ ಮಹಾಲಕ್ಷ್ಮೀ ಲೇಔಟ್, ಮಾರತ್ಹಳ್ಳಿ ಹಾಗೂ ಕೊಡಿಗೇಹಳ್ಳಿಯಲ್ಲಿ ಶ್ರೀವೆಂಕಟೇಶ್ವರ ಇನ್ಸ್ಟ್ಯೂಟ್ನ ಮೂರು ಕಚೇರಿಗಳನ್ನು ತೆರೆದು ಆನ್ಲೈನ್ನಲ್ಲಿ ಜಾಹೀರಾತನ್ನು ನೀಡುತ್ತಿದ್ದರು.
ಅವಶ್ಯಕತೆ ಇರುವ ವಿದ್ಯಾರ್ಥಿಗಳು ಆರೋಪಿಗಳನ್ನು ಸಂಪರ್ಕಿಸಿದ ನಂತರ ಪರೀಕ್ಷೆ ಬರೆಸಿ ಅಂಕಪಟ್ಟಿಯನ್ನು ನೀಡುವುದಾಗಿ ಪುಸಲಾಯಿಸಿ ವಿದ್ಯಾರ್ಥಿಗಳಿಂದ ಹೆಚ್ಚು ಹೆಚ್ಚು ಹಣವನ್ನು ಪಡೆದುಕೊಂಡು ನಂತರ ಯಾವುದೇ ಪರೀಕ್ಷೆ ಬರೆಸದೇ ವಿದ್ಯಾರ್ಥಿಗಳಿಗೆ ರಾಜ್ಯ ಹಾಗೂ ಹೊರರಾಜ್ಯಗಳ ವಿವಿಧ ವಿಶ್ವವಿದ್ಯಾಲಯಗಳಲ್ಲಿ ನೀಡುವ ಅಂಕಪಟ್ಟಿ ರೀತಿಯಲ್ಲೇ ನಕಲಿ ಅಂಕಪಟ್ಟಿಗಳನ್ನು ತಯಾರಿಸಿ ಆ ಅಂಕಪಟ್ಟಿಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಹೆಚ್ಚು ಹೆಚ್ಚು ಹಣ ಗಳಿಸುತ್ತಿದ್ದ ಬಗ್ಗೆ ಸಿಸಿಬಿ ಅಧಿಕಾರಿ ಮತ್ತು ಸಿಬ್ಬಂದಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
ಮೂರು ತಂಡ ರಚನೆ:
ಈ ಜಾಲವನ್ನು ಪತ್ತೆ ಮಾಡಲು ಕೇಂದ್ರ ಅಪರಾಧ ವಿಭಾಗದಿಂದ ಮೂರು ವಿಶೇಷ ತಂಡಗಳನ್ನು ರಚಿಸಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದುಕೊಂಡು ಏಕಕಾಲದಲ್ಲಿ ಆರೋಪಿಗಳು ನಡೆಸುತ್ತಿದ್ದ ಮಹಾಲಕ್ಷ್ಮೀ ಲೇಔಟ್, ಮಾರತ್ಹಳ್ಳಿ, ಕೊಡಿಗೇಹಳ್ಳಿಯಲ್ಲಿದ್ದ ಇನ್ಸ್ಟ್ಯೂಟ್ಗಳ ಮೇಲೆ ದಾಳಿ ಮಾಡಿ ಸತತ 12 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಐದು ಮಂದಿ ಆರೋಪಿಗಳನ್ನು ಬಂಧಿಸಿ ಹಲವು ದಾಖಲಾತಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರುತ್ತೆ : ಸಿಎಂ ದೃಢ ವಿಶ್ವಾಸ
ಆರೋಪಿಗಳು ಪ್ರತಿಷ್ಠಿತ ವಿದ್ಯಾಲಯ ಹಾಗೂ ವಿಶ್ವವಿದ್ಯಾಲಯಗಳ ಎಸ್ಎಸ್ಎಲ್ಸಿ, ಪಿಯುಸಿ, ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ, ಎಂಜಿನಿಯರಿಂಗ್, ಎಂಬಿಎ ಮಾಕ್ರ್ಸ್ಕಾರ್ಡ್ಗಳನ್ನು ನೀಡುವುದಾಗಿ ವಿದ್ಯಾರ್ಥಿಗಳನ್ನು ನಂಬಿಸಿ ಒಂದು ಮಾಕ್ರ್ಸ್ಕಾರ್ಡ್ಗೆ 50 ಸಾವಿರದಿಂದ ಒಂದು ಲಕ್ಷದವರೆಗೂ ಹಣವನ್ನು ಪಡೆದುಕೊಂಡು ವಿದ್ಯಾರ್ಥಿಗಳಿಂದ ಯಾವುದೇ ಪರೀಕ್ಷೆ ಬರೆಸದೆ ರಾಜ್ಯ ಹಾಗೂ ಹೊರರಾಜ್ಯದ ವಿಶ್ವವಿದ್ಯಾಲಯಗಳ ಮಾಕ್ರ್ಸ್ಕಾರ್ಡ್ಗಳನ್ನು ನೀಡುತ್ತಿದ್ದುದ್ದು ತನಿಖೆಯಿಂದ ಬೆಳಕಿಗೆ ಬಂದಿದೆ.ಇದಲ್ಲದೆ, ಸುಮಾರು 10 ಲಕ್ಷದಿಂದ 20 ಲಕ್ಷ ಹಣ ಪಡೆದುಕೊಂಡು ಆರೋಪಿಗಳು ಪಿಎಚ್ಡಿ ಪದವಿ ಮಾಕ್ರ್ಸ್ಕಾರ್ಡ್ ನೀಡುತ್ತಿದ್ದುದ್ದನ್ನು ತನಿಖಾ ತಂಡ ಪತ್ತೆಹಚ್ಚಿದೆ.
ಆರೋಪಿಗಳಿಂದ ಛತ್ತಿಸ್ಗಡದ ಡಾ. ಸಿ.ವಿ. ರಾಮನ್ ವಿಶ್ವವಿದ್ಯಾಲಯದ 228 ದಾಖಲಾತಿಗಳು, ಆಂಧ್ರಪ್ರದೇಶದ ನ್ಯಾಷನಲ್ ಇನ್ಸ್ಟ್ಯೂಟ್ ಆಫ್ ಓಪನ್ ಸ್ಕೂಲ್ನ 283 ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 18, ಶಿಲಾಂಗ್ ಮತ್ತು ವಿಲಿಯಂ ಕೇರಿ ವಿವಿಯ 128, ಅರುಣಾಚಲ ಪ್ರದೇಶದ ನಾರ್ತ್ ಈಸ್ಟ್ ಫ್ರಾನ್ಟೈರ್ ಟೆಕ್ನಿಕಲ್ ಯೂನಿರ್ವಸಿಟಿಯ 147, ಗುಜರಾತ್ ರಾಜ್ಯದ ಕೊಲರಾಕ್ಸ್ ಟೀಚರ್ ಯೂನಿರ್ವಸಿಟಿ 25, ಪಶ್ಚಿಮ ಬಂಗಾಳದ ಸ್ವಾಮಿ ವಿವೇಕಾನಂದ ಗ್ಲೋಬಲ್ ಯೂನಿರ್ವಸಿಟಿ 4, ಸಿಕ್ಕಿಂನ ಈಸ್ಟ್ರನ್ ಇನ್ಸ್ಟ್ಯೂಟ್ ಫಾರ್ ಇನ್ಟಿಗ್ರೇಟೆಂಡ್ ಲರ್ನಿಂಗ್ ಇನ್ ಮ್ಯಾನೇಜಮೆಂಟ್ ಆಫ್ ಯೂನಿರ್ವಸಿಟಿಯ 6, ಸಿಕ್ಕಿಂ ನ ಎಲ್ಲಿಂ ಯೂನಿರ್ವಸಿಟಿ 5, ಹರಿಯಾಣದ ವಿ.ಎಸ್. ಪ್ರಸನ್ನ ಭಾರತಿ ಯೂನಿರ್ವಸಿಟಿಯ 13, ಹಿಮಾಚಲ ಪ್ರದೇಶದ ಐಇಸಿ ಯೂನಿರ್ವಸಿಟಿಯ 18, ಇತರೇ ವಿಶ್ವವಿದ್ಯಾಲಯದ 65 ಮಾಕ್ರ್ಸ್ಕಾರ್ಡ್ಗಳು, ಖಾಲಿ ಇರುವ ಮಾಕ್ರ್ಸ್ಕಾರ್ಡ್ಗಳು 87, ಸೀಲ್ಗಳು 74 ಸೇರಿದಂತೆ 8 ಮೊಬೈಲ್ ಫೋನ್ಗಳು, ಐದು ಹಾರ್ಡ್ಡಿಸ್ಕ್, ಪ್ರಿಂಟರ್ ಹಾಗೂ ಐದು ಪಿಎಚ್ಡಿ ಟಿಸಿಎಸ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಸಿಸಿಬಿ ತಂಡ ಯಶಸ್ವಿಯಾಗಿದೆ.
#FakeMarksCard #exposed, #fiveArrested #CCB