ಬೆಂಗಳೂರು, ಸೆ.6- ಮೋಹಕ ತಾರೆ ರಮ್ಯಾ ಅವರ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯೊಂದು ಹರಿದಾಡಿ ಕೆಲಕಾಲ ಆತಂಕ ಮೂಡಿಸಿತ್ತು. ಇಂದು ಬೆಳಿಗ್ಗೆ ತಮಿಳುನಾಡಿನ ಕೆಲವು ಖಾಸಗಿ ವೆಬ್‍ಸೈಟ್‍ಗಳು ನಟಿ ರಮ್ಯಾ ಅವರಿಗೆ ಹೃದಯಾಘಾತವಾಗಿದೆ ಎಂದು ಪ್ರಕಟಿಸಿದ್ದವು. ಇದು ಸಾಕಷ್ಟು ಆತಂಕ ಮೂಡಿಸಿತ್ತು.
ವಿದೇಶಿ ಪ್ರವಾಸದಲ್ಲಿರುವ ರಮ್ಯಾ ಅವರು ತಕ್ಷಣಕ್ಕೆ ಪ್ರತಿಕ್ರಿಯೆಗೆ ಲಭ್ಯವಾಗದ ಹಿನ್ನಲೆಯಲ್ಲಿ ದ್ವಂದ್ವಗಳು ಮತ್ತಷ್ಟು ಹೆಚ್ಚಾದವು. ಅದರ ಬೆನ್ನಲ್ಲೇ ರಮ್ಯಾ ಅವರ ಆಪ್ತ ಬಳಗದ ಚಿತ್ರಾ ಸುಬ್ಯಹ್ಮಣ್ಯಂ, ಸುನೈನಾ ಸುರೇಶ್, ತಮಿಳು ನಟ ಅಜಿತ್ ಸೇರಿದಂತೆ ಅನೇಕರು ಟ್ವೀಟ್ ಮಾಡಿದ್ದು, ಇದೊಂದು ಸುಳ್ಳು ಸುದ್ದಿ. ಯಾರೂ ನಂಬಬಾರದು ಎಂದು ಸ್ಪಷ್ಟಪಡಿಸಿದರು. ಹೀಗಾಗಿ ಕೆಲವೇ ಹೊತ್ತಿನಲ್ಲಿ ಆತಂಕ ನಿವಾರಣೆಯಾಯಿತು.
ಪತ್ರಕರ್ತೆ ಚಿತ್ರಾ ಸುಬ್ಯಹ್ಮಣ್ಯಂ ಅವರು, ನಾನು ಈಗಷ್ಟೇ ರಮ್ಯಾ ಅವರೊಂದಿಗೆ ಮಾತನಾಡಿದ್ದೇನೆ. ಆಕೆ ಆರಾಮಾಗಿದ್ದಾರೆ. ಪೆಗ್‍ವೇ ಮೂಲಕ ನಾಳೆ ಬೆಂಗಳೂರಿಗೆ ಬರಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಅದಕ್ಕೂ ಕೆಲ ನಿಮಿಷಗಳ ಮೊದಲು ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಚಿತ್ರಾ ಅವರು ಪ್ರತಿಭಾನ್ವಿತ ಮಹಿಳೆ ದಿವ್ಯಾ ಸ್ಪಂದನಾ (ರಮ್ಯಾ) ಅವರ ಜೊತೆ ಜಿನಿವಾದಲ್ಲಿ ಊಟ ಮಾಡಿದ್ದೇನೆ. ಬೆಂಗಳೂರಿನೊಂದಿಗಿನ ನಮ್ಮ ಪ್ರೀತಿ ಸೇರಿದಂತೆ ಹಲವಾರು ವಿಚಾರಗಳನ್ನು ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದ್ದರು.
ಅಮೆರಿಕದ ಗ್ರೀನ್‍ಕಾರ್ಡ್ ಪಡೆಯುವ ಮೊದಲೆ ಸಾವನ್ನಪ್ಪುತ್ತಾರಂತೆ 4 ಲಕ್ಷ ಭಾರತೀಯರು..!
ಬಳಿಕ ರಮ್ಯಾ ಅವರ ನಿರ್ಮಾಣ ಸಂಸ್ಥೆ ಆ್ಯಪಲ್ ಬ್ಯಾಕ್ಸ್ ಸ್ಟುಡಿಯೋದ ಮುಖ್ಯಸ್ಥೆ ಸುನೈನಾ ಸುರೇಶ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಎಲ್ಲವೂ ಚೆನ್ನಾಗಿದೆ. ರಮ್ಯಾ ಅವರು ಆರೋಗ್ಯವಾಗಿದ್ದಾರೆ. ದಯವಿಟ್ಟು ಸುಳ್ಳು ಸುದ್ದಿಯನ್ನು ಹರಡಬೇಡಿ ಎಂದು ಮನವಿ ಮಾಡಿದ್ದಾರೆ.
ಎಲ್ಲರಿಗಿಂತಲೂ ಮೊದಲು ಸುಳ್ಳು ಸುದ್ದಿಯನ್ನು ಅಲ್ಲಗಳೆದ ತಮಿಳಿನ ಖ್ಯಾತ ನಟ ಅಜಿತ್‍ಕುಮಾರ್, ಇಂತಹ ಸುದ್ದಿಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು. ಬಳಿಕ ತಮಿಳಿನ ಸುದ್ದಿ ವಾಹಿನಿಗಳು ತಾವು ಹರಡಿದ್ದ ಸುಳ್ಳು ಸುದ್ದಿಗಳನ್ನು ಅಂತರ್ಜಾಲದಿಂದ ತೆಗೆದು ಹಾಕಿದವು.
#FakeNews, #Actress, #Ramya, #SocialMedia,