ಖೋಟಾ ನೋಟು ಮುದ್ರಣ-ಮಾರಾಟ : ನಾಲ್ವರು ಅಂತರರಾಜ್ಯ ಆರೋಪಿಗಳ ಸೆರೆ

Social Share

ಬೆಂಗಳೂರು, ಜ.25- ಖೋಟಾ ನೋಟು ಮುದ್ರಣ ಮತ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ನಾಲ್ವರು ಅಂತರ್ ರಾಜ್ಯ ಆರೋಪಿಗಳನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿ 10.34 ಲಕ್ಷ ಮೌಲ್ಯದ ಖೋಟಾ ನೋಟುಗಳು, ಕಾರು, ನಾಲ್ಕು ಮೊಬೈಲ್ ಹಾಗೂ ಇನ್ನಿತರ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶದ ಕಡಪ ಜಿಲ್ಲೆಯ ಚರಣ್ ಸಿಂಗ್, ರಜನಿ ಮತ್ತು ಅನಂತಪುರ ಜಿಲ್ಲೆಯ ಗೋಪಿನಾಥ್ ಹಾಗೂ ರಾಜು ಬಂತ ಆರೋಪಿಗಳು. ಉತ್ತರಹಳ್ಳಿ- ಕೆಂಗೇರಿ ಮುಖ್ಯರಸ್ತೆಯಲ್ಲಿ ಇಬ್ಬರು ಖೋಟಾ ನೋಟು ಚಲಾವಣೆ ಮಾಡಲು ಬರುತ್ತಿದ್ದಾರೆಂಬ ಮಾಹಿತಿ ಮೇರೆಗೆ ಎಎಸ್‍ಐ ಗುರುಮೂರ್ತಿ ಅವರು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ದೂರದಲ್ಲಿ ನಿಂತು ಗಮನಿಸುತ್ತಿದ್ದಾಗ ಬೆಲೆನೋ ಕಾರಿನ ಬಳಿ ಒಬ್ಬ ವ್ಯಕ್ತಿ ಅನುಮಾನಸ್ಪದವಾಗಿ ನಿಂತಿದ್ದು ಕಂಡು ಬಂದಿದೆ.

ತಕ್ಷಣ ಗುರುಮೂರ್ತಿಯವರು ಕಾರಿನ ಬಳಿ ಹೋಗಿ ಇಬ್ಬರನ್ನು ವಿಚಾರಿಸಿ ಹೆಸರು ವಿಳಾಸ ಕೇಳಿದಾಗ ತಾವು ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಚರಣ್ ಸಿಂಗ್ ಮತ್ತು ರಜನಿ ಎಂದು ತಿಳಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಹೆಸರಲ್ಲಿ ವಂಚನೆ ವಂಚಿಸುತ್ತಿದ್ದ ಮೂವರ ಬಂಧನ

ನಂತರ ಕಾರನ್ನು ತಪಾಸಣೆ ಮಾಡಿದಾಗ 500 ರೂ. ಮುಖಬೆಲೆಯ 818 ಖೋಟಾ ನೋಟು ಒಳಗೊಂಡ 8 ಕಟ್ಟುಗಳಲ್ಲಿ ಒಟ್ಟು 4.9 ಲಕ್ಷ ರೂ. ಖೋಟಾ ನೋಟಿನ ಹಣವಿರುವುದು ಕಂಡು ಬಂದಿದ್ದು, ತಕ್ಷಣ ಹಣವನ್ನು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿ ಕಾರು, ಎರಡು ಮೊಬೈಲ್ ಫೋನ್‍ಗಳು ಮತ್ತು ಸಂಬಂಧಪಟ್ಟ ಪರಿಕರಗಳನ್ನು ವಶಪಡಿಸಿಕೊಂಡು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನಂತರ ಪೊಲೀಸ್ ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿ ಖೋಟಾ ನೋಟು ತಯಾರಿಕೆ ಬಗ್ಗೆ ಹಲವು ಮಾಹಿತಿಗಳನ್ನು ಕಲೆ ಹಾಕಿ ನಂತರ ಆಂಧ್ರ ಪ್ರದೇಶದ ಅನಂತಪುರಕ್ಕೆ ಹೋಗಿ ಖೋಟಾ ನೋಟುಗಳನ್ನು ನೀಡುತ್ತಿದ್ದ ಗೋಪಿನಾಥ್ ಮತ್ತು ರಾಜು ಎಂಬುವರನ್ನು ಬಂಧಿಸಿದ್ದಾರೆ.

ಆರೋಪಿ ರಾಜು ಆಂಧ್ರಪ್ರದೇಶದ ತನ್ನ ಮನೆಯಲ್ಲಿ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದುದ್ದನ್ನು ಪೆÇಲೀಸರು ಪತ್ತೆಹಚ್ಚಿ 500 ರೂ. ಮುಖಬೆಲೆಯ 6.25 ಲಕ್ಷ ರೂ. ಖೋಟಾ ನೋಟುಗಳು, ಪ್ರಿಂಟ್ ಮಾಡಿರುವ ಹಾಳೆಗಳು, ಲ್ಯಾಪ್‍ಟಾಪ್ ಎರಡು ಮೊಬೈಲ್, ನಾಲ್ಕು ಕಲರ್‍ಪ್ರಿಂಟರ್, ಮತ್ತೊಂದು ಪ್ರಿಂಟರ್, ಖೋಟಾ ನೋಟು ತಯಾರಿಸಲು ಬಳಸುವ ಇಂಕು, ಸ್ಕ್ರೀನ್ ಪ್ರಿಂಟಿಂಗ್ ಬಾಕ್ಸ್, ಲ್ಯಾಮಿನೇಷನ್ ಮಿಷನ್ ಹಾಗೂ ಇತರ ಪರಿಕರಗಳನ್ನು ವಶಪಡಿಸಿಕೊಂಡು ನಗರಕ್ಕೆ ಬಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಬಂಧನಕ್ಕೆ ಪಡೆದುಕೊಂಡಿದ್ದಾರೆ.

ಪೆಟ್ರೋಲ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ಸಾವು

ಆರೋಪಿ ರಾಜು 7ನೇ ತರಗತಿ ವಿದ್ಯಾಭ್ಯಾಸ ಮಾಡಿದ್ದು, ಇಂಟರ್‍ನೆಟ್ ನೋಡಿ ನೋಟುಗಳು ಹೇಗೆ ತಯಾರು ಮಾಡಲಾಗುತ್ತದೆ ಎಂದು ನೋಡಿ ಕಲಿತುಕೊಂಡು ಆಂಧ್ರ ಪ್ರದೇಶದ ತನ್ನ ಮನೆಯಲ್ಲಿ ಖೋಟಾ ನೋಟು ತಯಾರಿಸುತ್ತಿದ್ದುದ್ದು ವಿಚಾರಣೆಯಿಂದ ತಿಳಿದುಬಂದಿದೆ.

ಆರೋಪಿ ಗೋಪಿನಾಥ್ ಖೋಟಾ ನೋಟು ಚಲಾವಣೆಗೆ ಗಿರಾಕಿಗಳನ್ನು ಹುಡುಕುತ್ತಿದ್ದನು. ಇನ್ನಿಬ್ಬರು ಆರೋಪಿಗಳಾದ ಚರಣ್ ಸಿಂಗ್ ಮತ್ತು ರಜನಿ ತಯಾರಾದ ಖೋಟಾ ನೋಟುಗಳನ್ನು ತೆಗೆದುಕೊಂಡು ಹೊರಗೆ ಹೋಗಿ ಚಲಾವಣೆಯಲ್ಲಿ ತೊಡಗುತ್ತಿದ್ದುದ್ದು ಪೆÇಲೀಸರ ವಿಚಾರಣೆಯಿಂದ ಗೊತ್ತಾಗಿದೆ.

ದಕ್ಷಿಣ ವಿಭಾಗದ ಉಪಪೊಲೀಸ್ ಆಯುಕ್ತ ಕೃಷ್ಣಕಾಂತ್ ಅವರ ಮಾರ್ಗದರ್ಶನದಲ್ಲಿ ಸುಬ್ರಮಣ್ಯಪುರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಪವನ್ ಅವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಮಂಜುನಾಥ್ ಅವರನ್ನೊಳಗೊಂಡ 10 ಮಂದಿಯ ತಂಡ ಈ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಪತ್ತೆ ಮಾಡಿ ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

fake, notes, printing, selling, Four arrested,

Articles You Might Like

Share This Article