ನಕಲಿ ಮತದಾರರನ್ನು ಮಾತ್ರ ಪಟ್ಟಿಯಿಂದ ಕೈಬಿಡಲಾಗಿದೆ : ಬಿಬಿಎಂಪಿ ವಿಶೇಷ ಆಯುಕ್ತ

Social Share

ಬೆಂಗಳೂರು,ನ.18- ನಗರದ ಮತದಾರರ ಪಟ್ಟಿಯಿಂದ ಆರು ಲಕ್ಷ ಮಂದಿ ಹೆಸರನ್ನು ಕೈಬಿಡಲು ಚಿಲುಮೆ ಸಂಸ್ಥೆ ಕಾರಣವಲ್ಲ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಸ್ಪಷ್ಟನೆ ನೀಡಿದ್ದಾರೆ.

ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಮಂದಿಯ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಕೆಲವರು ಎರಡು ಕಡೆ ಮತದಾನದ ಗುರುತಿನ ಚೀಟಿ ಹೊಂದಿರುವುದು ಹಾಗೂ ಮತ್ತಿತರ ಕಾರಣಗಳಿಂದಾಗಿಯೇ ಹೊರತು ಬೇರೆ ಯಾವ ಉದ್ದೇಶವೂ ಇಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಚಿಲುಮೆ ಸಂಸ್ಥೆಯವರು ತಮ್ಮ ಸಿಬ್ಬಂದಿಗಳಿಗೆ ಬೂತ್ ಲೆವೆಲ್ ಕೋ ಆರ್ಡಿನೇಟರ್ ಎಂದು ಗುರುತಿನ ಚೀಟಿ ನೀಡಿರುವುದು ತಪ್ಪು ಹೀಗಾಗಿ ಸಂಸ್ಥೆ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದರು.

ನ.1ರಿಂದಲೇ ಪೂರ್ವಾನ್ವಯವಾಗುವಂತೆ ಮೀಸಲಾತಿ ಹೆಚ್ಚಳ ಜಾರಿ

ಚಿಲುಮೆ ಸಂಸ್ಥೆಯವರು ಮಾಡಿರುವ ಪ್ರಮಾದದ ಬಗ್ಗೆ ಚುನಾವಣಾ ಆಯೋಗಕ್ಕೂ ವರದಿ ನೀಡಲಾಗುವುದು. ಈಗಾಗಲೇ ವರದಿ ಸಿದ್ಧವಾಗಿದ್ದು, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ವರದಿಗೆ ಅನುಮೋದನೆ ನೀಡಿದ ಕೂಡಲೆ ವರದಿಯನ್ನು ಆಯೋಗಕ್ಕೆ ಸಲ್ಲಿಸಲಾಗುವುದು ಎಂದರು.

ಎನ್‍ಜಿಒಗಳಿಗೆ ಯಾವುದೆ ಮತದಾರರ ಪಟ್ಟಿ ಕೇಳುವ ಅಕಾರ ಇರಲಿಲ್ಲ . ಅವರು ಕೇವಲ ಜಾಗೃತಿ ಮೂಡಿಸಬೇಕಾಗುತ್ತದೆ. ಈ ಕಾರ್ಯವನ್ನು ಚಿಲುಮೆ ಸಂಸ್ಥೆ ಉಚಿತವಾಗಿ ಮಾಡಿಕೊಡುತ್ತೇವೆ ಎಂದು ಒಪ್ಪಂದ ಮಾಡಿಕೊಂಡಿತ್ತು. ಅವರು ತಮ್ಮ ಕಾರ್ಯದಲ್ಲಿ ವಿಫಲವಾಗಿರುವುದರಿಂದ ಆ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದ ರದ್ದುಪಡಿಸಲಾಗಿದೆ ಎಂದು ರಂಗಪ್ಪ ಮಾಹಿತಿ ನೀಡಿದರು.

ರಾಷ್ಟ್ರೀಯ ನಾಯಕರನ್ನು ಕರೆತಂದು ಸಾಲು ಸಾಲು ಸಮಾವೇಶ ನಡೆಸಲು ಬಿಜೆಪಿ ಸಿದ್ಧತೆ

ನಗರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಬಿಬಿಎಂಪಿ ಸಿಬ್ಬಂದಿಗಳೇ ಮುಂದುವರೆಸಲಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

fake, six lakh, voters, deleted, BBMP, Rangappa,

Articles You Might Like

Share This Article