ಆರೋಪಿ ಬಂಧನ : ನಕಲಿ ಸ್ಟ್ರೀಲ್ ಥ್ರೆಡ್ ಸಾಕೇಟ್ ವಶ

Social Share

ಬೆಂಗಳೂರು, ಜ.28- ಪ್ರತಿಷ್ಠಿತ ಟಾಟಾ ಕಂಪೆನಿಯ ಸ್ಟ್ರೀಲ್ ಥ್ರೆಡ್ ಸಾಕೇಟ್‍ಗಳನ್ನು ನಕಲಿ ಮಾಡಿ ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದ ಗೋಡೌನ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಆರೋಪಿಯೊಬ್ಬನನ್ನು ಬಂಧಿಸಿ 9.69 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸೋಮನಾಥ ಬನ್ಸಾಲ ಬಂಧಿತ ಆರೋಪಿ. ಈತನಿಂದ ಸುಮಾರು 128 ಬಾಕ್ಸ್‍ಗಳ 3030 ಥ್ರೆಡ್ ಸಾಕೇಟ್‍ಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಮೌಲ್ಯ 9,69,600 ರೂ. ಎಂದು ಅಂದಾಜಿಸಲಾಗಿದೆ.

ಟಾಟಾ ಕಂಪೆನಿ ಹೆಸರಿನಲ್ಲಿ ನಕಲಿಯಾಗಿ ತಯಾರಿಸಿ ಸ್ಟೀಲ್ ಥ್ರೆಡ್ ಸಾಕೇಟ್‍ಗಳನ್ನು ರಾಜ್‍ಕೋಟ್‍ನಿಂದ ತೆಗೆದುಕೊಂಡು ಬಂದು ಆರೋಪಿಯು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯ ಲಾಲ್‍ಬಾಗ್ ರಸ್ತೆ, ಕೆಎಸ್ ಗಾರ್ಡನ್, 4ನೇ ಕ್ರಾಸ್‍ನ ಕೊಲ್ಕತಾ ಪೈಪ್ ಪಿಟಿಂಗ್ಸ್ ವಿಳಾಸದಲ್ಲಿ ದಾಸ್ತಾನು ಮಾಡಿದ್ದನು.

ಕುಕ್ಕರ್ ಕಿರಾತಕ ಶಾರಿಕ್ ಎನ್‍ಐಎ ವಶಕ್ಕೆ!

ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಆರ್ಥಿಕ ಅಪರಾಧ ದಳ ಅಕಾರಿ ಮತ್ತು ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ಕೈಗೊಂಡು ಗೋಡೌನ್ ಮೇಲೆ ದಾಳಿ ಮಾಡಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Fake, Stral ,thread, socket, CCB Police, raid,

Articles You Might Like

Share This Article