ನವದೆಹಲಿ,ಜ.22- ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ) ರಾಜಮನೆತನದ ಅಧಿಕಾರಿಯಂತೆ ನಟಿಸಿ ನಾಲ್ಕು ತಿಂಗಳ ಕಾಲ ದೆಹಲಿಯ ಪಂಚತಾರಾ ಹೊಟೇಲ್ನಲ್ಲಿ ತಂಗಿದ್ದು, 23 ಲಕ್ಷಕ್ಕೂ ಅಧಿಕ ಮೊತ್ತದ ಬಿಲ್ ಪಾವತಿಸದೆ ಪರಾರಿಯಾಗಿದ್ದ ಆರೋಪಿಯನ್ನು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಮಹಮದ್ ಶರೀಫ್ ಕಳೆದ ವರ್ಷ ಆಗಸ್ಟ್ 1 ರಂದು ನವದೆಹಲಿಯ ಲೀಲಾ ಪ್ಯಾಲೇಸ್ಗೆ ಆಗಮಿಸಿದ್ದು, ನಾಲ್ಕು ತಿಂಗಳ ಕಾಲ ಕೊಠಡಿ ಸಂಖ್ಯೆ 427ರಲ್ಲಿ ತಂಗಿದ್ದ. ನವೆಂಬರ್ 20ರಂದು ಕೊಠಡಿ ಖಾಲಿ ಮಾಡಿ, ಬೆಳ್ಳಿಯ ಲೋಟ, ತಟ್ಟೆ ಸೇರಿದಂತೆ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದ.
ಲೀಲಾ ಪ್ಯಾಲೇಸ್ ಹೋಟೆಲ್ನ ಸಿಬ್ಬಂದಿಗಳು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿದ್ದ ದೆಹಲಿ ಪೊಲೀಸರು, ಜನವರಿ 19 ರಂದು ಕರ್ನಾಟಕದ ದಕ್ಷಿಣ ಕನ್ನಡದಲ್ಲಿನ ನಿವಾಸದಿಂದ ಆರೋಪಿ ಶರೀಫ್ನನ್ನು ಬಂಧಿಸಿದ್ದಾರೆ.
ಜೆಡಿಎಸ್ ಸ್ವಂತಬಲದ ಮೇಲೆ ಅಧಿಕಾರ ಹಿಡಿಯಲು ಬೆಂಬಲ ನೀಡಿ: ನಿಖಿಲ್
ಆರೋಪಿ ಎಮಿರೆಟ್ಸ್ ಸರ್ಕಾರದ ಪ್ರಮುಖ ಪ್ರಮುಖ ಕಾರ್ಯನಿರ್ವಹಣಾಕಾರಿ ಶೇಖ್ ಫಲಾಹ್ ಬಿನ್ ಜಾಯೆದ್ ಅಲ್ ನಹ್ಯಾನ್ ಕಚೇರಿಯ ಅಧಿಕಾರಿಯನ್ನು ಹೋಲುವ ನಕಲಿ ಕಾರ್ಡ್ ಮತ್ತು ಗುರುತಿನ ಚೀಟಿಗಳನ್ನು ನೀಡಿ ಹೋಟೆಲ್ ಸಿಬ್ಬಂದಿ ಮತ್ತು ಅಕಾರಿಗಳನ್ನು ನಂಬಿಸಿದ್ದಾನೆ.
ಹೋಟೆಲ್ಗೆ ಆಗಮಿಸಿದ ವೇಳೆ ಆರೋಪಿ ಯುಎಇ ರೆಸಿಡೆಂಟ್ ಕಾರ್ಡ್ ಕೂಡ ನೀಡಿದ್ದಾನೆ. ಹೋಟೆಲ್ನವರನ್ನು ನಂಬಿಸಿ ತನ್ನ ಇಮೇಜ್ ಹೆಚ್ಚಿಸಿಕೊಳ್ಳಲು ಮತ್ತು ಐಶರಾಮಿ ಸೌಲಭ್ಯಗಳನ್ನು ಅನುಭವಿಸುವ ಉದ್ದೇಶದಿಂದಲೇ ಈ ಕಾರ್ಡ್ ಅನ್ನು ನೀಡಿರುವ ಸಾಧ್ಯತೆ ಇದೆ ಎಂದು ಆರೋಪಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆ ಭರವಸೆ
ಕಳೆದ ವರ್ಷದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಕೊಠಡಿ ಬಾಡಿಗೆ 11.5 ಲಕ್ಷ ಸೇರಿ ಒಟ್ಟು 23,48,413 ರೂಪಾಯಿ ಬಾಕಿ ಉಳಿಸಿದ್ದಾನೆ. 20 ಲಕ್ಷ ರುಪಾಯಿ ಬಾಕಿಗೆ 2022ರ ನವೆಂಬರ್ 21 ರಂದು ಪಾವತಿಯಾಗುವ ಪೋಸ್ಟ್-ಡೇಟ್ ಚೆಕ್ ನೀಡಿದ್ದಾನೆ. ಬ್ಯಾಂಕ್ ಅಧಿಕಾರಿಗಳು ಅದನ್ನು ಬ್ಯಾಂಕ್ಗೆ ಸಲ್ಲಿಸಿದಾಗ ಹಣದ ಕೊರತೆಯಿಂದ ಚೆಕ್ ಬೌನ್ಸ್ ಆಗಿದೆ. ನವೆಂಬರ್ 20 ರಂದು ಮಧ್ಯಾಹ್ನ 1 ಗಂಟೆ ಆರೋಪಿ ಬೆಲೆಬಾಳುವ ವಸ್ತುಗಳೊಂದಿಗೆ ಹೊಟೇಲ್ನಿಂದ ಪರಾರಿಯಾಗಿದ್ದಾನೆ.
ದೆಹಲಿಯ ಲೀಲಾ ಪ್ಯಾಲೇಸ್ ಹೊಟೇಲ್ ಅಧಿಕಾರಿಗಳು ಸಲ್ಲಿಸಿದ್ದ ದೂರು ಆಧರಿಸಿ ಆರೋಪಿ ವಿರುದ್ಧ ಕಳ್ಳತನ, ವಂಚನೆ ಸೇರಿದಂತೆ ಹಲವು ಆರೋಪಗಳ ಅಡಿ ಪ್ರಕರಣ ದಾಖಲಿಸಲಾಗಿದೆ.
Fake, UAE, official, arrested, duping, Delhi hotel,