ನಕಲಿ ವಾಲ್ಕೇರ್ ಪಟ್ಟಿ ತಯಾರಿಸುತ್ತಿದ್ದ ಫ್ಯಾಕ್ಟರಿ ಮೇಲೆ ಸಿಸಿಬಿ ದಾಳಿ
ಬೆಂಗಳೂರು,ಮಾ.5- ಪ್ರತಿಷ್ಠಿತ ಬಿರ್ಲಾ ಕಂಪೆನಿಯ ಹೆಸರಿನಲ್ಲಿ ವಾಲ್ಕೇರ್ ಪಟ್ಟಿಯನ್ನು ನಕಲಿಯಾಗಿ ತಯಾರು ಮಾಡುತ್ತಿದ್ದ ಫ್ಯಾಕ್ಟರಿ ಮೇಲೆ ಸಿಸಿಬಿ ಆರ್ಥಿಕ ಅಪರಾಧ ದಳದ ಅಧಿಕಾರಿ ಮತ್ತು ಸಿಬ್ಬಂದಿ ದಾಳಿ ಮಾಡಿ 1.50 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿ ಕೊಂಡಿದ್ದಾರೆ.
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಅಗ್ರಹಾರ ಕೆರೆ ಪಕ್ಕ, 14ನೇ ಅಡ್ಡರಸ್ತೆ, ವೀರಪ್ಪರೆಡ್ಡಿ ಲೇಔಟ್ನ ಫ್ಯಾಕ್ಟರಿಯೊಂದರಲ್ಲಿ ಪ್ರತಿಷ್ಠಿತ ಬಿರ್ಲಾ ಕಂಪೆನಿಯ ವೈಟ್ ವಾಲ್ಕೇರ್ ಪಟ್ಟಿಯನ್ನು ನಕಲಿಯಾಗಿ ತಯಾರು ಮಾಡಲಾಗು ತ್ತಿತ್ತು.
ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಆರ್ಥಿಕ ಅಪರಾಧ ದಳದ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳದ ಮೇಲೆ ದಾಳಿ ಮಾಡಿ ಬಿರ್ಲಾ ಕಂಪೆನಿ ಹೆಸರಿನ 800 ಖಾಲಿ ಚೀಲಗಳು, ಯಂತ್ರ ಸೇರಿದಂತೆ 1.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿದ್ದಾರೆ.
ಬಿರ್ಲಾ ಕಂಪೆನಿಯ ಹೆಸರಿನಲ್ಲಿ ವಾಲ್ಕೇರ್ ಪಟ್ಟಿಯನ್ನು ನಕಲಿಯಾಗಿ ತಯಾರಿಸಿ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದ ರಾಜಸ್ಥಾನ ಮೂಲದ ಶ್ಯಾಮ್ಸುಂದರ್ ಸಿಂಗ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.