ಕೌಟುಂಬಿಕ ಕಲಹ: ಪತ್ನಿ ಕೊಲೆ
ಗದಗ, ಫೆ.4-ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ದೊಣ್ಣೆ, ಇಟ್ಟಿಗೆಯಿಂದ ಒಡೆದು ಕೊಲೆ ಮಾಡಿ ಪತಿ ಪರಾರಿಯಾಗಿರುವ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಿ(31) ಕೊಲೆಯಾದ ಮಹಿಳೆ.
ಇಂದು ಬೆಳಗ್ಗೆ ವಾಯುವಿಹಾರಕ್ಕೆ ಬಂದ ಸಂದರ್ಭದಲ್ಲಿ ಈಕೆಯ ಪತಿ ಲೋಕೇಶ್ ದೊಣ್ಣೆ ಮತ್ತು ಇಟ್ಟಿಗೆಯಿಂದ ಲಕ್ಷ್ಮಿಯನ್ನು ಒಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ರೋಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.