ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ಬೆಂಗಳೂರಲ್ಲಿ ಹೃದಯವಿದ್ರಾವಕ ಘಟನೆ

Social Share

ಬೆಂಗಳೂರು, ಡಿ.20- ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದ ಯಶೋಧ(70) ಇವರ ಮಗಳು ಸುಮನ್(41), ಮಗ ನರೇಶ್ ಗುಪ್ತ(36) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು.

ಯಶೋಧ ಅವರಿಗೆ ಮೂವರು ಮಕ್ಕಳಿದ್ದು, ಒಬ್ಬ ಮಗಳನ್ನು ಮದುವೆ ಮಾಡಿದ್ದು, ಅವರು ರಾಜಾಜಿನಗರದಲ್ಲಿ ವಾಸವಾಗಿದ್ದಾರೆ. ಯಶೋಧ ಅವರ ಪತಿ ನಾಲ್ಕು ತಿಂಗಳ ಹಿಂದೆ ಅಷ್ಟೇ ಮೃತಪಟ್ಟಿದ್ದರು. ಪತಿ ಅಗಲಿಕೆಯಿಂದ ಯಶೋಧ ಮಾನಸಿಕವಾಗಿ ನೊಂದಿದ್ದರು.

ಪತಿ ಬಳಸುತ್ತಿದ್ದ ವಸ್ತುಗಳನ್ನು ಅನಾಥಾಶ್ರಮಕ್ಕೆ ಕೊಟ್ಟು ನಂತರ ತಾವು ವಾಸವಿದ್ದ ಮನೆಯನ್ನು ಖಾಲಿ ಮಾಡಿ ಇತ್ತೀಚೆಗಷ್ಟೇ ಮಹಾಲಕ್ಷ್ಮೀಲೇಔಟ್ ನ ಆಂಜನೇಯ ದೇವಸ್ಥಾನ ಸಮೀಪದ ಅಪಾರ್ಟ್‍ಮೆಂಟ್‍ವೊಂದಕ್ಕೆ ಬಂದು ಇಬ್ಬರು ಮಕ್ಕಳೊಂದಿಗೆ ಯಶೋಧ ನೆಲೆಸಿದ್ದರು.

ಕೇಳ್ರಪ್ಪ ಕೇಳಿ, ಹೊಸ ವರ್ಷಕ್ಕೂ ಮುನ್ನ ಬೆಂಗಳೂರು ರಸ್ತೆಗಳು ಗುಂಡಿ ಮುಕ್ತವಾಗಲಿವೆಯಂತೆ..!

ಈ ನಡುವೆ ಮಗಳು ಸುಮನಾಗೆ ಆರೋಗ್ಯ ಸಮಸ್ಯೆ ಇದ್ದುದ್ದರಿಂದ ತಾನು ಮದುವೆಯಾಗುವುದಿಲ್ಲ ಎಂದು ತಿಳಿಸಿದ್ದರಿಂದ ಸಹೋದರ ನರೇಶ್ ಸಹ ಮದುವೆಯಾಗಿರಲಿಲ್ಲ.

ಯಶೋಧ ಅವರ ಸಹೋದರಿ ಅಪರ್ಣಾ ಅವರು ದೂರವಾಣಿ ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ. ಇದರಿಂದ ಗಾಬರಿಯಾದ ಅಪರ್ಣಾ ಅವರು ರಾಜಾಜಿನಗರದಲ್ಲಿ ವಾಸವಿರುವ ಯಶೋಧ ಅವರ ಮೊದಲ ಮಗಳಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಅವರು ಮನೆ ಬಳಿ ಹೋಗಿ ಕಾಲಿಂಗ್ ಬೆಲ್ ಒತ್ತಿದ್ದಾರೆ.

ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಅಪಾರ್ಟ್‍ಮೆಂಟ್‍ನ ಸೆಕ್ಯುರಿಟಿ ಗಾರ್ಡ್ ಗೆ ತಿಳಿಸಿದ್ದಾರೆ. ಸೆಕ್ಯುರಿಟಿ ಗಾರ್ಡ್ ಭೀಮಣ್ಣ ಎಂಬುವರು ಹೋಗಿ ಬಾಗಿಲು ತೆಗೆದು ನೋಡಿದಾಗ ಮೂವರು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ತಕ್ಷಣ ಸೆಕ್ಯುರಿಟಿ ಗಾರ್ಡ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಮಹಾಲಕ್ಷ್ಮೀಲೇಔಟ್ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದಾರೆ.

ಬಿಜೆಪಿಯ ಒಂದು ನಾಯಿಯೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿಲ್ಲ : ಖರ್ಗೆ

ಊರಲ್ಲಿ ಇರುವುದಿಲ್ಲವೆಂದು ತಿಳಿಸಿದ್ದ ಯಶೋಧ:
ಎರಡು ದಿನಗಳ ಹಿಂದೆ ಯಶೋಧ ಅವರು ಸೆಕ್ಯುರಿಟಿ ಗಾರ್ಡ್ ಭೀಮಣ್ಣ ಅವರನ್ನು ಕರೆದು ನಾವುಗಳು ಎರಡು ದಿನ ಊರಿನಲ್ಲಿ ಇರುವುದಿಲ್ಲ. ಹಾಲು, ಪೇಪರನ್ನು ನೀನೆ ತೆಗೆದುಕೊ ಎಂದು ತಿಳಿಸಿದ್ದರಂತೆ. ನರೇಶ್ ಅವರು ಕಾಂಟ್ರಾಕ್ಟ್ ಕೆಲಸ ಮಾಡುತ್ತಿದ್ದು, ಯಾವುದೇ ಆರ್ಥಿಕ ಸಮಸ್ಯೆ ಇರಲಿಲ್ಲ ಎಂದು ಹೇಳಲಾಗಿದೆ. ಮೂವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಮೇಲ್ನೋಟಕ್ಕೆ ಮಗಳ ಆರೋಗ್ಯ ಸಮಸ್ಯೆ ಒಂದು ಕಡೆ ಆದರೆ, ಮತ್ತೊಂದೆಡೆ ಇಬ್ಬರು ಮಕ್ಕಳು ಮದುವೆಯಾಗದೆ ಉಳಿದರಲ್ಲ ಎಂಬ ಚಿಂತೆಯಿಂದ ಯಶೋಧ ಅವರು ಈ ನಿರ್ಧಾರಕ್ಕೆ ಬಂದು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಗೊತ್ತಾಗಿದೆ. ಕುಟುಂಬಸ್ಥರ ಹೇಳಿಕೆ ಪಡೆದ ನಂತರವಷ್ಟೇ ಆತ್ಮಹತ್ಯೆಗೆ ಕಾರಣ ತಿಳಿದು ಬರಲಿದೆ.

family, three members, Suicide, Bengaluru,

Articles You Might Like

Share This Article