ಚಿತ್ರ ಕಲಾವಿದ ಬಿ.ಕೆ.ಎಸ್.ವರ್ಮ ವಿಧಿವಶ

Social Share

ಬೆಂಗಳೂರು, ಫೆ.6- ಖ್ಯಾತ ಅಂತರ್ ರಾಷ್ಟ್ರೀಯ ಚಿತ್ರ ಕಲಾವಿದ ಡಾ. ಬಿ.ಕೆ.ಎಸ್. ವರ್ಮಾ (74) ಅವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಬಾಣಸವಾಡಿಯಲ್ಲಿ ಅವರು ಕುಟುಂಬ ಸದಸ್ಯರೊಂದಿಗೆ ವಾಸವಾಗಿದ್ದರು.

ಇಂದು ಮುಂಜಾನೆ ಅವರಿಗೆ ತೀವ್ರತರವಾದ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಕುಟುಂಬ ಸದಸ್ಯರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಾಗ ಅವರಿಗೆ ಹೃದಯಾಘಾತವಾಗಿರುವುದು ತಿಳಿದು ಬಂದಿದೆ. ವೈದ್ಯರು ಚಿಕಿತ್ಸೆ ನೀಡಿದರೂ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾರೆ.

ಆನೇಕಲ್‍ನ ಅತ್ತಿಬೆಲೆ ಕರ್ನೂರಿನ ಗ್ರಾಮದಲ್ಲಿ 1949ರಲ್ಲಿ ಜನಿಸಿದ ವರ್ಮಾ ಅವರು ತಮ್ಮ ಆರನೇ ವಯಸ್ಸಿನಲ್ಲಿ ಹವ್ಯಾಸವಾಗಿ ರೇಖಾಚಿತ್ರವನ್ನು ಬರೆಯಲು ಪ್ರಾರಂಭಿಸಿದರು. ಅವರ ತಾಯಿ ಜಯಲಕ್ಷ್ಮಿ ಸ್ವತಃ ಕಲಾವಿದರಾಗಿದ್ದು ಅವರ ತಂದೆ ಕೃಷ್ಣಮಾಚಾರ್ಯರು ಸಂಗೀತಗಾರರಾಗಿದ್ದರು. ಕಳೆದ 1962 ರಿಂದ 1968 ವರೆಗೆ ಚಿತ್ರಕಲೆ ಮತ್ತು ಶಿಲ್ಪಕಲೆಗಾಗಿ ತರಬೇತಿ ಪಡೆದರು.

ಪರ ವಿರೋಧ ಚರ್ಚೆಗೆ ಗ್ರಾಸವಾದ ಮೋಹನ್ ಭಾಗವತ್‍ರ ಹೇಳಿಕೆ

ಚಿತ್ರಕಲಾ ಕ್ಷೇತ್ರದಲ್ಲಿ ಹೆಚ್ಚಿನ ಜ್ಞಾನ ಮತ್ತು ಅನುಭವವನ್ನು ಪಡೆಯಲು ಅಜಂತಾ, ಎಲ್ಲೋರಾ ಮತ್ತು ಅನೇಕ ಕಲಾ ವಸ್ತುಸಂಗ್ರಹಾಲಯಗಳು ಮತ್ತು ಗ್ಯಾಲರಿಗಳಿಗೆ ಭೇಟಿ ನೀಡಿದರು.

1967ರಲ್ಲಿ ಬಾಲಿವುಡ್ ಚಲನಚಿತ್ರ ಆದ್ಮಿಗಾಗಿ ಸಹಾಯಕ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದರು. ಅದೇ ಸಮಯದಲ್ಲಿ ಅವರು ಬೆಂಗಳೂರಿನ ಹನುಮಂತ ನಗರದಲ್ಲಿ ಬಂಡೆಗಳ ಮೇಲೆ ಚಿತ್ರಿ ಬಿಡಿಸಿ ಗಮನ ಸೆಳೆದರು ನಂತರ ಹಲವಾರು ನಿಯತಕಾಲಿಕೆಗಳು ಮತ್ತು ಪತ್ರಿಕೆಗಳಿಗೆ ಕಲಾವಿದರಾಗಿ ಸೇವೆ ಸಲ್ಲಿಸಿದರು.

1979ರಲ್ಲಿ ಅವರು ಕನ್ನಡ ಚಲನಚಿತ್ರಗಳಾದ ಬಂಗಾರದ ಜಿಂಕೆ, ನಿನಗಾಗಿ ನಾನು, ರಾಜೇಶ್ವರಿ, ಚದುರಿದ ಚಿತ್ರಗಳು ಇತ್ಯಾದಿಗಳಿಗೆ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದರು.

1986 ರಲ್ಲಿ ಮೊದಲ ಬಾರಿಗೆ ಕರ್ನಾಟಕ ಚಿತ್ರಕಲಾ ಪರಿಷತ್‍ನಲ್ಲಿ ಅವರು ಪರಿಸರ ವರ್ಣಚಿತ್ರಗಳ ಸರಣಿಯ ಕೃತಿಗಳ ಪ್ರದರ್ಶನವನ್ನು ನಡೆಸಿದರು. ಅದೇ ಸಮಯದಲ್ಲಿ ಅವರಿಗೆ ರಾಜ್ಯ ಲಲಿತಕಲಾ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.1988ರಲ್ಲಿ ಅವರ ಎರಡು ವರ್ಣಚಿತ್ರಗಳನ್ನು ರಷ್ಯಾ ಉತ್ಸವದಲ್ಲಿ ಭಾರತೀಯ ಉತ್ಸವಕ್ಕೆ ಆಯ್ಕೆ ಮಾಡಲಾಯಿತು.

ಭಾರತದಲ್ಲಿ ನಡೆಯುವ IMF ದುಂಡು ಮೇಜಿನ ಸಭೆಗೆ ಚೀನಾ ಹಣಕಾಸು ಸಚಿವರು

1990 ರಲ್ಲಿ ಡಾ. ಶತಾವಧಾನಿ.ಆರ್.ಗಣೇಶ್ ಅವರೊಂದಿಗೆ ಚಿತ್ರಕಲೆಯ ಜೊತೆಗೆ ಕಾವ್ಯದ ಯುಗಳ ಗೀತೆ ಪ್ರದರ್ಶನ 24 ಗಂಟೆಗಳ ಕಾಲ ತಡೆರಹಿತವಾಗಿ ನಡೆದು ಸಾರ್ವಕಾಲಿಕ ದಾಖಲೆಯನ್ನು ರಚಿಸಿತು. ನಂತರದ ದಿನಗಳಲ್ಲಿ ವಿದೇಶದಲ್ಲೂ ಅವರ ಅಮೋಘ ಚಿತ್ರಕಲೆ ಪ್ರದರ್ಶನ ಭಾರಿ ಮೆಚ್ಚುಗೆ ಪಡೆಯಿತು.

1999ರಲ್ಲಿ ಅವರು ಲಂಡನ್‍ಗೆ ಭೇಟಿ ನೀಡಿ ಈಸ್ಟರ್ನ್ ಆಟ್ರ್ಸ್‍ನಲ್ಲಿ ಕಲಾಕೃತಿ ಪ್ರಸ್ತುತಪಡಿಸಿದರು.ಇದರ ನಡುವೆ ಅಮೆರಿಕಾದ ವಿವಿಧ ನಗರಗಳಲ್ಲಿ 30 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದರು.

ಕನ್ನಡ ತಾಯಿ ಭುವನೇಶ್ವರಿ, ಭಾರತಮಾತೆ, ಪೂಜೆಯಲ್ಲಿ ಮೈಮರೆತ ರಾಘವೇಂದ್ರ ಸ್ವಾಮಿ, ಈಶ್ವರ ಕುಟುಂಬ ಕಲಾಕೃತಿಗಳು ವಿಶ್ವಮಟ್ಟದಲ್ಲಿ ಜನಪ್ರಿಯವಾಗಿದ್ದವು. ಮನೆಮನೆಗಳಲ್ಲೂ ಪೂಜೆಗೊಳ್ಳುತ್ತಿದ್ದವು.
ಅವರೇ ಒಮ್ಮೆ ಹೇಳಿದಂತೆ ಒಮ್ಮೆ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ರಾಜಾ ರವಿವರ್ಮಾರವರ ಪೇಂಟಿಂಗ್‍ಗಳನ್ನು ವೀಕ್ಷಿಸುತ್ತಿದ್ದಿದ್ದಾಗ ತನ್ಮಯರಾಗಿ ವರ್ಮಾ ಎಂಬ ಹೆಸರನ್ನು ತಮ್ಮ ಹೆಸರಿನ ಜೊತೆಗೆ ಸೇರಿಸಿಕೊಂಡ ನಂತರ ಅವರ ಜೀವನದ ದಿಶೆಯೇ ಬದಲಾಯಿತಂತೆ.

ಆ ದಿನಗಳಲ್ಲಿ ಬ್ಲೇಡಿನಿಂದ, ಉಗುರಿನಿಂದ, ಎಂಬಾಸಿಂಗï, ಥ್ರೇಡ್ ಪೇಂಟಿಂಗ್ ಮಾಡಿ ಹಣಗಳಿಸಿದ್ದರು. ತಮ್ಮ ಎರಡೂ ಕೈಗಳ ಬೆರೆಳುಗಳನ್ನೆ ಉಪಯೋಗಿಸಿ ಸುಂದರವಾದ ಚಿತ್ತಾರಗಳನ್ನು ಮೂಡಿಸಿರುವ ಪರಿ ಅನನ್ಯ.
ಅವರು ಬಿಡಿಸಿದ ಓಂಗಣೇಶ ಚಿತ್ತಾರ ಜನರ ಆಸಕ್ತಿಯನ್ನು ಕೆರಳಿಸಿತು.

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಬೌದ್ಧ ದೇವಾಲಯಕ್ಕೆ ಬೆಂಕಿ

ಸುಂದರವಾದ ಚಿತ್ರಕಲೆಯನ್ನು ಬಿಡಿಸುವ ಕಲೆಯನ್ನು ಮೆಚ್ಚಿ ಸ್ವಾಗತಿಸಿದ ಕಲಾವಿದರಲ್ಲಿ ಮುಖ್ಯರು, ಸೂಪರ್ ಸ್ಟಾರ್ ರಜನಿಕಾಂತ್, ಕರ್ನಾಟಕ ರತ್ನ ಮೇರುನಟ ಡಾ. ರಾಜ್ ಕುಮಾರ್ ಚಿತ್ರಗಳಂತೂ ಭಾರಿ ಮೆಚ್ಚುಗೆ ತಂದುಕೊಟ್ಟಿತು 2001ರಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪುರಸ್ಕಾರ ಸೇರಿ ಹಲವಾರು ಪ್ರಶಸ್ತಿಗಳು ಅವರಿಗೆ ಸಂದಿದೆ. 2011ರಲ್ಲಿ ಅವರಿಗೆ ಬೆಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು.

Famous, painter artist, BKS Verma, passed away,

Articles You Might Like

Share This Article