ಬೆಂಗಳೂರು,ಜು.4- ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಮುಂದುವರೆದಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ರೈತರೊಬ್ಬರು ಹೃದಯಾಘಾತದಿಂದ ನಗರದಲ್ಲಿ ಮೃತಪಟ್ಟಿದ್ದಾರೆ.ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲ್ಲೂಕಿನ ಕುರುಬರ ಹುಂಡಿ ಗ್ರಾಮದ ನಿವಾಸಿ ಈಶ್ವರ್(50) ಮೃತಪಟ್ಟ ಅನ್ನದಾತ.
ದೇವನಹಳ್ಳಿ ತಾಲ್ಲೂಕಿನ ಚೆನ್ನರಾಯಪಟ್ಟಣದಲ್ಲಿ ಕೆಐಎಡಿಬಿಯಿಂದ ಬಲವಂತದ ಭೂಸ್ವಾಧೀನ ಮಾಡುತ್ತಿರುವುದನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಚಾಮರಾಜನಗರದಿಂದ ಮೈಸೂರಿಗೆ ಬಂದು ಮೈಸೂರಿನಿಂದ ಬೆಂಗಳೂರಿಗೆ ಈಶ್ವರ್ ಅವರು ಇಂದು ಬೆಳಗ್ಗೆ ರೈಲಿನಲ್ಲಿ ಆಗಮಿಸಿದ್ದಾರೆ.
ರೈಲು ನಿಲ್ದಾಣದಿಂದ ನಗರದ ಫ್ರೀಡಂ ಪಾರ್ಕ್‌ಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಮೆಜೆಸ್ಟಿಕ್‌ನ ಸಂಗೊಳ್ಳಿರಾಯಣ್ಣ ಸರ್ಕಲ್ ಬಳಿ ಈಶ್ವರ್ ಅವರಿಗೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ.
ತಕ್ಷಣ ಅವರನ್ನು ಸಮೀಪದ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.ಈಶ್ವರ್ ಅವರಿಗೆ ಮಧುಮೇಹ ಹಾಗೂ ಬಿಪಿ ಇತ್ತು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಬಗ್ಗೆ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
- ಪ್ರಿಯತಮನೊಂದಿಗೆ ಸೇರಿ ಪತಿ ಕೊಂದಿದ್ದ ಪತ್ನಿ : ಸಾಕ್ಷಿ ಹೇಳಿದ 3 ವರ್ಷದ ಮಗು
- ರೈಲ್ವೆ ಪ್ಲಾಟ್ಫಾರ್ಮ್ನಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ ಯೋಧನಿಗೆ ಸೇನೆ ಶ್ಲಾಘನೆ
- ಹಾವೇರಿ : ಹೃದಯಾಘಾತ ಲಾರಿ ಚಾಲಕ ಸಾವು
- ನಾಳೆ ಭಾರತ್ ಬಂದ್ : ಬ್ಯಾಂಕಿಂಗ್ ಸೇರಿದಂತೆ ದೇಶದಾದ್ಯಂತ ಅನೇಕ ಸೇವೆಗಳು ವ್ಯತ್ಯಯ
- ಡಿಕೆಶಿ ಸಿಎಂ ಆದರೆ ಸಾಕು, ನನಗೆ ಸಚಿವ ಸ್ಥಾನ ಬೇಡ : ಸಿ.ಪಿ.ಯೋಗೇಶ್ವರ್