ಹಣ ಎಣಿಸಲು ಬಾರದ ಅನಕ್ಷರಸ್ಥನ ಜೊತೆ ಮದುವೆ ಮುರಿದುಕೊಂಡ ವಧು

Social Share

ಲಖ್ನೌ ,ಜ.22- ಅನಕ್ಷರಸ್ಥ ವರನಿಗೆ ಹಣ ಎಣಿಸಲು ಬಾರದಿದ್ದಾಗ ಕೋಪಗೊಂಡ ವಧು ವಿವಾಹವನ್ನೇ ರದ್ದು ಪಡಿಸಿದ ಘಟನೆ ಉತ್ತರ ಪ್ರದೇಶದ ಫರೂಕಾಬಾದ್‍ನಲ್ಲಿ ನಡೆದಿದೆ.

ಫರೂಕಾಬಾದ್ ನಗರದ ನಿವಾಸಿಯಾದ ವಧು ಮೈನ್‍ಪುರಿಯ ಯುವಕನೊಂದಿಗೆ ವಿವಾಹ ನಿಶ್ಚಿತವಾಗಿತ್ತು ಮದುವೆಗೆ ಸಕಲ ಸಿದ್ಧತೆಯೂ ಆಗಿತ್ತು. ಆದರೆ ವರ ಅನಕ್ಷರಸ್ಥ ಎಂದು ವಧುವಿನ ಕುಟುಂಬಕ್ಕೆ ಗೊತ್ತಿರಲಿಲ್ಲ.

ಆದರೆ ನಿನ್ನೆ ವರ ಮೆರವಣಿಗೆ ಬಂದಾಗ ದಾರ್ಮಿಕ ಆಚರಣೆ ಪ್ರಾರಂಭವಾಗಿದ್ದವು. ರಾತ್ರಿ 1 ಗಂಟೆಗೆ ಮದುವೆಗೆ ತಯಾರಿ ಶುರುವಾಯಿತು. ಅಷ್ಟರಲ್ಲಿ ಯಾರೋ ವಧುವಿನ ಅಣ್ಣನ ಬಳಿ ಹೋಗಿ ವರ ಅವಿದ್ಯಾವಂತ, ಅನಕ್ಷರಸ್ಥ ಎಂದು ಹೇಳಿದ್ದಾನೆ. ಈ ವೇಳೆ ವರನಿಗೆ 2,100 ರೂ. ನೀಡಿ ಎಣಿಸುವಂತೆ ವಧುವಿನ ಸಹೋರ ಹೇಳಿದ್ದಾನೆ. ಆದರೆ ಆತನಿಗೆ ಆ ಹಣ ಎಣಿಸಲು ಸಾಧ್ಯವಾಗಿಲ್ಲ.

ಅಮೆರಿಕ ಅಧ್ಯಕ್ಷ ಬಿಡೆನ್ ಮನೆಯಲ್ಲಿ ಎಫ್‍ಬಿಐ ಶೋಧ ದಾಖಲೆಗಳ ವಶ

ತಡ ಮಾಡದೆ ಮುಂಜಾನೆ ಹೆಬ್ಬೆಟ್ ವ್ಯಕ್ತಿಯನ್ನು ಮದುವೆಯಾಗುವುದಿಲ್ಲವೆಂದು ವಧು ಸ್ಪಷ್ಟವಾಗಿ ಹೇಳಿದ್ದಾಳೆ. ವಧುವಿನ ಕಡೆಯವರು ವರನಿಗೆ ಎಣಿಸಲು 2,100 ರೂ. ಕೊಟ್ಟಾಗ ಆತ ತಡಬಡಾಯಿಸಿದಾನೆ.

ಕೋಪಗೊಂಡ ವಧು ಮದುವೆಯನ್ನೇ ರದ್ದು ಮಾಡಿ ಇದಲ್ಲದೆ ವರನ ಸಮೇತ ಮತ್ತೆ ಮದುವೆ ಮೆರವಣಿಗೆಯನ್ನೇ ವಾಪಸ್ ಕಳುಹಿಸಿದ್ದಾಳೆ. ವರನ ಕಡೆಯವರು ಅನಕ್ಷರಸ್ಥ ಎಂಬುದನ್ನು ಮುಚ್ಚಿಟ್ಟಿದರು ಸುಳ್ಳು ಹೇಳಿದ್ದರು ಆದರೆ ಇದೇ ಸುಳ್ಳು ನಂತರ ದುಬಾರಿಯಾಗಿದೆ.

Farrukhabad, uneducated, wedding, cancel,

Articles You Might Like

Share This Article