ವಾಷಿಂಗಟನ್,ಡಿ.3- ಚೀನಾ ಮೂಲದ ಟಿಕ್‍ಟಾಕ್ ಮೊಬೈಲ್ ಅಪ್ಲಿಕೇಷನ್ ಅಮೆರಿಕಾದ ಭದ್ರತೆ ಕಳವಳವನ್ನು ಎದುರಿಸಬೇಕಾಗಬಹುದು ಎಂದು ಎಫ್‍ಬಿಐನ ನಿರ್ದೇಶಕ ಕ್ರಿಸ್ ವ್ರೇ ಎಚ್ಚರಿಕೆ ನೀಡಿದ್ದಾರೆ. ಟಿಕ್‍ಟಾಕ್ ಅನ್ನು ಭಾರತದಲ್ಲಿ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿಷೇಧಿಸಿತ್ತು. ಇದೇ ಪ್ರಶ್ನೆಗಳು ಹಲವು ರಾಷ್ಟ್ರಗಳನ್ನು ಕಾಡಲಾರಂಭಿಸಿವೆ.
ಅಮೆರಿಕಾದ ಮಿಂಚಿಗನ್ ವಿಶ್ವವಿದ್ಯಾಲಯದ ಸಾರ್ವಜನಿಕ ನೀತಿಯ ಗೆರಾಲ್ಡ್ ಆರ್ ಫೋರ್ಡ್ ಶಾಲೆಯಲ್ಲಿ ಸಭೀಕರನ್ನು ಉದ್ದೇಶಿಸಿ ಮಾತನಾಡಿದ ಕ್ರಿಸ್, ಟಿಕ್‍ಟಾಕ್ ಸಂಸ್ಥೆ ನಮ್ಮ ಮೌಲ್ಯಗಳನ್ನು ಚೀನಾ ಸರ್ಕಾರದ ಜೊತೆ ಹಂಚಿಕೊಳ್ಳಬಾರದು ಎಂದು ಹೇಳಿದ್ದಾರೆ.
ಟಿಕ್‍ಟಾಕ್ ವಿಡಿಯೋಗಳ ಹಂಚಿಕೆಯ ದೊಡ್ಡ ಆನ್‍ಲೈನ್ ವೇದಿಕೆಯಾಗಿದೆ. ಇಲ್ಲಿನ ದತ್ತಾಂಶಗಳು ದುರುಪಯೋಗವಾಗುವ ಸಾಧ್ಯತೆ ಇದೆ. ಕಾರ್ಯನಿರ್ವಹಣೆಯ ಮೇಲೆ ಪ್ರಭಾವ ಬೀರುವ ಮತ್ತು ಆ್ಯಪ್‍ನ ಬಳಕೆದಾರರ ಮಾರ್ಗವಾಗಿ ದತ್ತಾಂಶ ಸಂಗ್ರಹಿಸುವ ಅವಕಾಶಗಳಿವೆ. ಈ ಎಲ್ಲಾ ಯೋಜನೆಗಳ ಹಿನ್ನೆಲೆಯಲ್ಲಿ ಅಮೆರಿಕಾ ತನ್ನ ಒಳಿತಿಗಾಗಿ ಕಾರ್ಯಾಚರಣೆ ಮಾಡಬೇಕಾಗುತ್ತದೆ ಎಂದು ಕ್ರಿಸ್ ಅಭಿಪ್ರಾಯಪಟ್ಟಿದ್ದಾರೆ.
ಅಪಘಾತಗಳ ನಗರಿ ಎಂಬ ಕುಖ್ಯಾತಿ ಪಾತ್ರವಾದ ಸಿಲಿಕಾನ್‍ಸಿಟಿ ಬೆಂಗಳೂರು
ಇದೇ ರೀತಿಯ ಆತಂಕವನ್ನು ಕಳೆದ ತಿಂಗಳು ಅಮೆರಿಕಾ ಸಂಸತ್‍ನಲ್ಲಿ ವ್ಯಕ್ತಪಡಿಸಲಾಗಿತ್ತು. ಬಳಿಕ ವಾಷಿಂಗಟನ್ ಆ್ಯಪ್ ಕುರಿತ ಚರ್ಚೆಯನ್ನು ಮುಂದುವರೆಸಿದೆ. ಚೀನಾದ ಬೀಜಿಂಗ್‍ನ ಬೈಟ್‍ಡ್ಯಾನ್ಸ್ ಸಂಸ್ಥೆಯ ಒಡೆತನ ಟಿಕ್‍ಟಾಕ್ ವಕ್ತಾರರು ಕ್ರಿಸ್‍ರ ಹೇಳಿಕೆಗೆ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.
ಕಳೆದ ಸೆಪ್ಟಂಬರ್‍ನಲ್ಲಿ ಟಿಕ್‍ಟಾಕ್ ನಿರ್ವಹಣಾಕಾರಿ ವನೆಸ್ಸಾ ಪಪ್ಪಸ್ ,ಅಮೆರಿಕಾದ ಸಂಸದರ ಪ್ರಶ್ನೆಗೆ ಉತ್ತರಿಸಿ ತಮ್ಮ ಸಂಸ್ಥೆ ಚೀನಾ ಸರ್ಕಾರದ ಜೊತೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ ಎಂದು ಸ್ಪಷ್ಟ ಪಡಿಸಿದರು. ಅಮೆರಿಕಾದ ಬಳಕೆದಾರರ ಮಾಹಿತಿಯ ತಾಣಕ್ಕೆ ಚೀನಾ ಸರ್ಕಾರದ ಪ್ರವೇಶಕ್ಕೆ ಅವಕಾಶವಿಲ್ಲ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನೀತಿ ಪರಿಷ್ಕರಣೆ
2020ರಲ್ಲಿ ಡೋನಾಲ್ಡ್ ಟ್ರಂಪ್ ಸರ್ಕಾರ ಟಿಕ್‍ಟಾಕ್ ನಿಷೇಧ ಮಾಡುವ ಬೆದರಿಕೆ ಹಾಕಿತ್ತು, ಜೊತೆಗೆ ಅಮೆರಿಕಾದ ಕಂಪೆನಿಗೆ ಟಿಕ್‍ಟಾಕ್ ಆ್ಯಪ್ ಅನ್ನು ಮಾರಾಟ ಮಾಡಲು ಒತ್ತಡ ಹೇರಿದ್ದರು ಎಂದು ಹೇಳಲಾಗಿತ್ತು.
ಅಮೆರಿಕಾದ ಅಧಿಕಾರಿಗಳು ಭದ್ರತೆಗೆ ಸಂಬಂಧಿಸಿದಂತೆ ಟಿಕ್‍ಟಾಕ್ ಸಂಸ್ಥೆಯ ಜೊತೆಗೆ ಚರ್ಚೆ ನಡೆಸುತ್ತಿದ್ದು, ಒಪ್ಪಂದಕ್ಕೆ ಸಹಿ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
FBI, director, raises, national, security, concerns, TikTok,