ವಾಷಿಂಗ್ಟನ್, ಜ. 22- ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರ ಡೆಲವೇರ್ನ ವಿಲ್ಮಿಂಗ್ಟನ್ನಲ್ಲಿರುವ ಮನೆಯನ್ನು ಎಫ್ಬಿಐ ಅಧಿಕಾರಿಗಳು ದಾಳಿ ನಡೆಸಿ ಶೋಧನೆ ವೇಳೆ ಕೆಲ ಪ್ರಮುಖ ದಾಖಲೆಗಳನ್ನು ಪತ್ತೆ ಹಚ್ಚಿ ಸ್ವಾಧೀನಪಡಿಸಿಕೊಂಡಿದೆ.
ಅಧ್ಯಕ್ಷರು ಸ್ವಯಂ ಪ್ರೇರಣೆಯಿಂದ ಎಫ್ಬಿಐ ಅಧಿಕಾರಿಗಳಿಗೆ ತಮ್ಮ ಮನೆಯಲ್ಲಿ ಶೋಧನೆಗೆ ಅನುಮತಿಸಿದ್ದರು ಆದರೆ ಕೆಲ ದಾಖಲೆ ವಶಪಡಿಸಿಕೊಂಡ ಅತಿರೇಕದ ಬಗ್ಗೆ ಗೊತ್ತಿಲ್ಲ ಎಂದು ಬಿಡನ್ ಅವರ ವಕೀಲರು ತಿಳಿಸಿದ್ದಾರೆ.
ಅಮೆರಿಕದ ನ್ಯಾಯಾಂಗ ಇಲಾಖೆಗೆ ಸೇರಿದ ಆರು ವರ್ಗೀಕೃತ ದಾಖಲೆಗಳು ಸಿಕ್ಕಿವೆ ಎನ್ನಲಾಗುತ್ತಿದ್ದು ,ಮುಂದಿನ 2024ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಂದು ಅವಗೆ ಸ್ರ್ಪಧಿಸುವ ಕುರಿತು ತೀರ್ಮಾನ ಪ್ರಕಟಿಸುವ ಹೊತ್ತಿನಲ್ಲಿ ಎಫ್ಬಿಐ ಬಹಿರಂಗ ಪಡಿಸಿರುವ ದಾಖಲೆಗಳು ಬೈಡೆನ್ ಅವರಿಗೆ ಮುಜುಗರಕ್ಕೀಡು ಮಾಡಿವೆ.
ಬಿಬಿಎಂಪಿ ಕೋಟಿ ವೃಕ್ಷ ಅಭಿಯಾನಕ್ಕೆ ಮುಖ್ಯ ಆಯುಕ್ತರಿಂದ ಚಾಲನೆ
ತನ್ನಿಂದ ಯಾವುದೇ ತಪ್ಪು ಆಗಿಲ್ಲ ಎಂದಿರುವ ಬೈಡೆನ್ ಹೇಳಿದ್ದಾರೆ ಈ ದಾಖಲೆಗಳನ್ನು ಮನೆಯಲ್ಲಿರಿಸಿಕೊಳ್ಳುವುದು ಅಪರಾಧ ಎಂದು ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಬೈಡೆನ್ ಅಮೆರಿಕದ ಉಪಾಧ್ಯಕ್ಷರಾಗಿದ್ದ ವೇಳೆಯಲ್ಲೂ ವರ್ಗೀಕೃತ ದಾಖಲೆಗಳು ಪತ್ತೆಯಾಗಿತ್ತು.
ಇಡೀ ಮನೆಯನ್ನು ಸುಮಾರು 13 ಗಂಟೆಗಳ ಕಾಲ ಶೋಧ ನಡೆಸಲಾಗಿದೆ ವಶಕ್ಕೆ ಪಡೆದಿರುವ ದಾಖಲೆಯನ್ನು ನ್ಯಾಯಾಂಗ ಇಲಾಖೆಯು ಪರಿಶೀಲಿಸುವುದರಿಂದ ತಕ್ಷಣವೇ ತಪ್ಪುಗಳು ಸ್ಪಷ್ಟವಾಗಿಲ್ಲ. ಎಫ್ಬಿಐ ದಾಳಿ ನಡೆಸಿದಾಗ ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರು ಡೆಲವೇರ್ನ ರೆಹೋಬೋತ್ ಬೀಚ್ನಲ್ಲಿರುವ ತಮ್ಮ ಮನೆಯಲ್ಲಿ ವಾರಾಂತ್ಯವನ್ನು ಕಳೆಯುತ್ತಿದ್ದರು.
ಇನ್ನು ಹೆಚ್ಚಿನ ಸ್ಥಳಗಳ ಮೇಲೆ ದಾಳಿ ನಡೆಸಬಹುದು ಎನ್ನಲಾಗುತ್ತಿದ್ದು ಒಟ್ಟಾರೆ ಅಮೆರಿಕದಲ್ಲಿ ಈ ಘಟನೆ ಸಂಚಲನ ಮೂಡಿಸಿದೆ.
FBI, searched, Biden home, found, items, marked, classified,