ಎಫ್‍ಡಿಎ ಪ್ರಕಾಶ್ ವಿರುದ್ಧ ಕ್ರಮ ; ತಹಶೀಲ್ದಾರ್ ಭರವಸೆ

Social Share

ಕೊಪ್ಪ, ಫೆ.9- ತಾಲ್ಲೂಕು ಕಚೇರಿಯಲ್ಲಿ ಕಡತ ನಾಪತ್ತೆ ಪ್ರಕರಣದ ಆರೋಪ ಎದುರಿಸುತ್ತಿರುವ ಈ ಹಿಂದಿನ ಪ್ರಥಮ ದರ್ಜೆ ಸಹಾಯಕ ಪ್ರಕಾಶ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಸಂಬಂಧ ಕ್ರಮ ವಹಿಸುವುದಾಗಿ ತಹಶೀಲ್ದಾರ್ ತಿಳಿಸಿದ್ದಾರೆ.
ರೈತರು, ಬಡವರ ಫಾರಂ 50,53,57ರ ಕಡತ ನಿರ್ವಹಣೆ ಮಾಡುತ್ತಿದ್ದ ವಿಷಯ ನಿರ್ವಾಹಕ ಆರ್.ಪ್ರಕಾಶ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುೀರ್‍ಕುಮಾರ್ ಮುರೊಳ್ಳಿ ಮತ್ತು ಶಾಸಕ ಟಿ.ಡಿ.ರಾಜೇಗೌಡ ಅವರ ನೇತೃತ್ವದಲ್ಲಿ ಕೊಪ್ಪ ತಾಲ್ಲೂಕು ಕಚೇರಿ ಬಳಿ ನಿನ್ನೆ ಅನಿರ್ದಿಷ್ಟಾವ ಧರಣಿ ನಡೆಸಿದ್ದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಪತ್ರ ಬರೆದು ಕ್ರಮ ವಹಿಸುವುದಾಗಿ ಹೇಳಿದ್ದಾರೆ.
ಶಾಸಕರ ಕೆಡಿಪಿ ಸಭೆಯಲ್ಲಿ ಪ್ರಕಾಶ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸು ವಂತೆ ಕಂದಾಯ ಇಲಾಖೆಗೆ ಸೂಚಿಸ ಲಾಗಿತ್ತು. 300ಕ್ಕೂ ಹೆಚ್ಚು ಕಡತಗಳನ್ನು ಬಚ್ಚಿಟ್ಟು ಕೇವಲ ಹಣ ಕೊಟ್ಟವರ ಕಡತಗಳನ್ನಷ್ಟೇ ಭೂ ಮಂಜೂರಾತಿ ಪ್ರಕ್ರಿಯೆ ನಡೆಸುತ್ತಿದ್ದರು.
ಇಂತಹ ಭ್ರಷ್ಟಾಚಾರದಲ್ಲಿ ತೊಡಗಿದ್ದ ಇವರ ವಿರುದ್ಧ ಪ್ರಕರಣ ದಾಖಲಿಸುವ ಬದಲು ರಕ್ಷಣೆಗೆ ಹಿರಿಯ ಅಕಾರಿಗಳು ನಿಂತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿತ್ತು.
ಸ್ಥಳಕ್ಕೆ ಭೇಟಿ ನೀಡಿದ ಶಿರಸ್ತೇದಾರ್ ರಶ್ಮಿ ಅವರು ಪ್ರತಿಭಟನಾಕಾರರ ಅಹವಾಲು ಆಲಿಸಿದ್ದರು. ಸಂಜೆ ನಂತರವೂ ಪ್ರತಿಭಟನೆ ಮುಂದುವರೆದಿತ್ತು. ಈ ಸಂಬಂಧ ಪತ್ರ ಬರೆದಿರುವ ತಹಶೀಲ್ದಾರ್, ಪ್ರಕಾಶ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳುತ್ತೇವೆ ಹಾಗೂ ನಾಪತ್ತೆ ಯಾಗಿರುವ 306 ಕಡತಗಳನ್ನು ರಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Articles You Might Like

Share This Article