ವಿಶ್ವಸಂಸ್ಥೆ,ಜ.20- ಭಾರತಕ್ಕೆ ವಿದಶೀ ನೇರ ಹೂಡಿಕೆ (ಎಫ್‍ಡಿಐ) ಹರಿವಿನ ಪ್ರಮಾಣ 2021ರಲ್ಲಿ ಶೇ.26ರಷ್ಟು ಕಡಿಮೆಯಾಗಿದೆ. 2020ರಲ್ಲಿನ ಎಂ ಮತ್ತು ಎ ವ್ಯವಹಾರಗಳು ಪುನರಾವರ್ತನೆ ಆಗದಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ವಿಶ್ವಸಂಸ್ಥೆಯ ವಾಣಿಜ್ಯ ಅಂಗಸಂಸ್ಥೆ ತಿಳಿಸಿದೆ. ಯುನೈಟೆಡ್ ನೇಷನ್ಸ್ ಕಾನರೆನ್ಸ್ ಆನ್ ಟ್ರೇಡ್ ಆ್ಯಂಡ್ ಡೆವಲಪ್‍ಮೆಂಟ್ (ಯುಎನ್‍ಸಿಟಿಎಡಿ)ನ ಹೂಡಿಕೆ ನಿರ್ವಹಣಾ ಸಂಸ್ಥೆಯು 2021ರಲ್ಲಿ ಜಾಗತಿಕ ವಿದೇಶೀ ನೇರ ಹೂಡಿಕೆ ಹರಿವು ಪ್ರಬಲ ಪುನಶ್ಬೈತನ್ಯ ಪ್ರದರ್ಶಿಸಿದೆ.
2020ರಲ್ಲಿ 929 ಶತಕೋಟಿ ಅಮೆರಿಕನ್ ಡಾಲರ್‍ಗಳಷ್ಟಿದ್ದ ಜಾಗತಿಕ ವಿದೇಶೀ ನೇರ ಹೂಡಿಕೆ 2021ರಲ್ಲಿ ಅಂದಾಜು 1.65 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದು ಶೇ.77ರಷ್ಟು ಹೆಚ್ಚಳವಾಗಿದೆ. ಈ ಪ್ರಮಾಣವು ಕೋವಿಡ್-19ರ ಮುಚಿನ ಪ್ರಮಾಣವನ್ನು ಹಿಂದಿಕ್ಕಿದೆ ಎಂದು ವರದಿ ಮಾಡಿದೆ.
ಅಭಿವೃದ್ಧಿ ಶೀಲ ದೇಶಗಳಿಗೆ ಹೂಡಿಕೆ ಹರಿವಿನ ಚೇತರಿಕೆ ಆಶಾದಾಯಕವಾಗಿದೆ. ಆದರೆ, ಕನಿಷ್ಠ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಉತ್ಪಾದಕ ಸಾಮಥ್ರ್ಯಗಳು ಮತ್ತು ವಿದ್ಯುಚ್ಛಕ್ತಿ, ಆಹಾರ ಮತ್ತು ಆರೋಗ್ಯದಂತಹ ಪ್ರಮುಖ ತಾಳಿಕೆಯೋಗ್ಯ ಅಭಿವೃದ್ಧಿ ಗುರಿಗಳಿಗೆ ಮುಖ್ಯವಾದ ಹೊಸ ಹೂಡಿಕೆಯು ಸ್ಥಗಿತಗೊಂಡಿರುವುದು ಆತಂಕಕ್ಕೆ ಪ್ರಮುಖ ಕಾರಣವಾಗಿದೆ ಎಂದು ಯುಎನ್‍ಸಿಟಿಎಡಿ ಮಹಾಕಾರ್ಯದರ್ಶಿ ರೆಬೆಕಾ ಗ್ರಿನ್‍ಸ್ಟ್ಯಾನ್ ಹೇಳಿದ್ದಾರೆ.
ಇದುವರೆಗೆ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳು ಅತ್ಯಕ ಏರಿಕೆ ಕಂಡಿವೆ. 2021ರಲ್ಲಿ ಇಲ್ಲಿ ವಿದೇಶೀ ನೇರ ಹೂಡಿಕೆ ಅಂದಾಜು 777 ಶತಕೋಟಿ ಅಮೆರಿಕನ್ ಡಾಲರ್‍ಗಳಷ್ಟು ಹೆಚ್ಚಳ ಕಂಡಿದೆ. ಇದು 2020ಕ್ಕಿಂತ ಮೂರುಪಟ್ಟು ಇದೆ ಎಂದು ವರದಿ ತಿಳಿಸಿದೆ.
ಅಭಿವೃದ್ಧಿ ಶೀಲ ಆರ್ಥಿಕತೆಗಳಿಗೆ ವಿದೇಶಿ ನೇರ ಹೂಡಿಕೆ ಹರಿವು ಶೇ.30ರಷ್ಟು ಹೆಚ್ಚಾಗಿದ್ದು, ಹೆಚ್ಚೂ ಕಡಿಮೆ 870 ಡಾಲರ್‍ಗಳಿಗೆ ತಲುಪಿದೆ. ಪೂರ್ವ ಮತ್ತು ಆಗ್ನೇಯ ಏಷ್ಯಾದಲ್ಲಿ ಬೆಳವಣಿಗೆ ದರ ಶೇ.20ರಷ್ಟು ಹೆಚ್ಚಾಗಿದೆ.
ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ರಾಷ್ಟ್ರಗಳು ಹಾಗೂ ಪಶ್ಚಿಮ ಏಷ್ಯಾದಲ್ಲಿ ಸಾಂಕ್ರಾಮಿಕ ಪೂರ್ವದ ಮಟ್ಟಗಳಿಗಿಂತ ವಿದೇಶಿ ಹೂಡಿಕೆ ನೇರ ಹರಿವು ಸಾಕಷ್ಟು ಚೇತರಿಕೆ ಕಂಡಿವೆ. 2021ರಲ್ಲಿ ದಕ್ಷಿಣ ಏಷ್ಯಾದಲ್ಲಿ ಎಫ್‍ಡಿಐ ಹರಿವು 24 ಪ್ರತಿಶತದಷ್ಟು ಕುಸಿದಿದ್ದು, 54 ಶತಕೋಟಿ ಡಾಲರ್‍ಗಳಷ್ಟು ಮಾತ್ರ ಹೂಡಿಕೆಯಾಗಿದೆ. 2020ರಲ್ಲಿ ಇದು 71 ಶತಕೋಟಿ ಡಾಲರ್‍ಗಳಷ್ಟು ಇತ್ತು.
ವಿಶ್ವ ಅತಿದೊಡ್ಡ ಆರ್ಥಿಕತೆಯಾದ ಅಮೆರಿಕದಲ್ಲಿ ವಿದೇಶಿ ನೇರ ಹೂಡಿಕೆ ಹರಿವು ಶೇ.114ರಷ್ಟು ಏರಿಕೆಯಾಗಿದ್ದು, 323 ಶತಕೋಟಿ ಡಾಲರ್‍ಗಳಿಗೆ ತಲುಪಿದೆ ಮತ್ತು ಗಡಿಯಾಚಿಗಿನ ಎಂ ಮತ್ತು ಎ ವಹಿವಾಟಿನ ಪ್ರಮಾಣ ಬಹುತೇಕ ಮೂರು ಪಟ್ಟು ಹೆಚ್ಚಾಗಿದ್ದು, 285 ಶತಕೋಟಿ ಡಾಲರ್‍ಗಳ ಮೌಲ್ಯವನ್ನು ಹೊಂದಿದೆ.
ಚೀನಾ 179 ಶತಕೋಟಿ ಡಾಲರ್‍ಗಳಷ್ಟು ಎಫ್‍ಡಿಐ ಹರಿವು ಹೊಂದಿದೆ. ಇದು ಶೇ.20ರಷ್ಟು ಹೆಚ್ಚಳವಾಗಿದೆ. ಭಾರತಕ್ಕೆ ವಿದೇಶಿ ನೇರ ಹೂಡಿಕೆ ಹರಿವು ಶೇ.26ರಷ್ಟು ಕಡಿಮೆಯಾಗಿದೆ. ಇದಕ್ಕೆ ಪ್ರಮುಖ ಕಾರಣ 2020ರಲ್ಲಿ ದಾಖಲಾದ ಎಂ ಮತ್ತು ಎ ವಹಿವಾಟುಗಳು ಪುನರಾವರ್ತನೆಯಾಗದಿರುವುದು ಎಂದು ಯುಎನ್‍ಸಿಟಿಎಡಿ ವರದಿಯಲ್ಲಿ ವಿವರಿಸಲಾಗಿದೆ.
