ಅನುಮತಿಯಿಲ್ಲದೆ ದಾಖಲಾತಿ ಮಾಡಿಕೊಂಡಿ 980 ಶಾಲೆಗಳಿಗೆ ಬೀಗಮುದ್ರೆ ಭಯ..!

Social Share

ಬೆಂಗಳೂರು,ಜು.25- ಸರ್ಕಾರದ ಅನುಮತಿ ಪಡೆಯದೆ ದಾಖಲಾತಿ ಮಾಡಿಕೊಂಡಿರುವ ಸುಮಾರು 980 ಶಾಲೆಗಳಿಗೆ ಬೀಗಮುದ್ರೆ ಬೀಳುವ ಆತಂಕ ಎದುರಾಗಿದೆ. 2022-23ರ ಶೈಕ್ಷಣಿಕ ವರ್ಷದ ಮಾನ್ಯತೆ ಅವ ಮುಕ್ತಾಯ ಅಥವಾ ಮಾನ್ಯತೆ ಇಲ್ಲದೆ ನಡೆಸುತ್ತಿರುವ ಶಾಲೆಗಳನ್ನು ಕಾನೂನು ಬಾಹಿರ ಎಂದು ಘೋಷಣೆ ಮಾಡುವಂತೆ ಬಿಇಒಗಳಿಗೆ ಸೂಚನೆ ನೀಡಲಾಗಿದೆ.

ಶಿಕ್ಷಣ ಸಂಸ್ಥೆಗಳು ಹೊಸದಾಗಿ ಶಾಲೆ ಪ್ರಾರಂಭ ಮಾಡಲು 2022-23ನೇ ಸಾಲಿಗೆ ಅರ್ಜಿ ಸಲ್ಲಿಕೆಮಾಡಿದ್ದವು. ಆದರೆ ಶಿಕ್ಷಣ ಇಲಾಖೆ ಅನುಮತಿ ನೀಡುವ ಮೊದಲೇ ಅದೆಷ್ಟೋ ಶಾಲೆಗಳು ದಾಖಲಾತಿ ಪ್ರಕ್ರಿಯೆಯನ್ನೇ ಮುಗಿಸಿವೆ.

ಹೊಸದಾಗಿ ಅರ್ಜಿಸಲ್ಲಿಸಿರುವ 980ಕ್ಕೂ ಹೆಚ್ಚು ಖಾಸಗಿ ಶಾಲೆಗಳು ಇದರಿಂದ ಅತಂತ್ರವಾಗಿವೆ. ಇದರಲ್ಲಿ ಕೆಲವು ಶಾಲೆಗಳಿಗೆ ಬರುವ ದಿನಗಳಲ್ಲಿ ಅನುಮತಿಯು ಸಿಗಬಹುದು. ಇನ್ನು ಕೆಲವು ಶಾಲೆಗಳಿಗೆ ನಿಯಮ ಉಲ್ಲಂಘನೆಯಡಿ ಅನುಮತಿಯನ್ನು ನಿರಾಕರಿಸಲುಬಹುದು. ಅನುಮತಿ ನಿರಾಕರಿಸದರೆ ಅಂತಹ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನವು ಅತಂತ್ರವಾಗಲಿದೆ.

ಅಂದಾಜಿನ ಪ್ರಕಾರ 980 ಶಾಲೆಯ 30000 ಸಾವಿರ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಲಿದೆ ಎನ್ನಲಾಗುತ್ತಿದೆ.ಶಿಕ್ಷಣ ಇಲಾಖೆಯು ಅನುಮತಿ ನೀಡುವ ಮೊದಲೇ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ದಾಖಲಾತಿ ಮಾಡಿಕೊಂಡಿವೆ. ಮೇ ಮತ್ತು ಜೂನ್ ತಿಂಗಳಲ್ಲಿ ದಾಖಲಾತಿ ಮಾಡಿಕೊಂಡಿರುವ ಶಿಕ್ಷಣಸಂಸ್ಥೆಗಳು ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಆಡಲು ಹೊರಟಿವೆ.

ಇದರಿಂದಾಗಿ ಎಚ್ಚೆತ್ತ ಶಿಕ್ಷಣ ಇಲಾಖೆ ಇಂತಹ ಶಾಲೆಗಳನ್ನು ಸಮೀಪದ ಪೆÇಲೀಸರಿಗೆ ದೂರು ನೀಡಿ ಮುಚ್ಚಿಸಲು ಮುಂದಾಗಿದೆ.ಜು.23 ಖಾಸಗಿ ಶಾಲೆಗಳಿಗೆ ಅನುಮತಿ ನೀಡಲು ಆನ್‍ಲೈನ್‍ನಲ್ಲಿ ಶಿಕ್ಷಣ ಇಲಾಖೆ ಅರ್ಜಿ ಆಹ್ವಾನಿಸಲಾಗಿತ್ತು. ಜುಲೈ 25ರವರೆಗೆಗೂ ಅವಕಾಶ ಕಲ್ಪಿಸಲಾಗಿತ್ತು. ಈ ನಡುವೆ ಹೊಸದಾಗಿ ಅರ್ಜಿ ಸಲ್ಲಿಸಿರುವ 980ಕ್ಕೂ ಖಾಸಗಿ ಶಿಕ್ಷಣ ಸಂಸ್ಥೆಗಳು ಅತಂತ್ರವಾಗುವ ಹಂತ ತಲುಪಿವೆ.

ಶಾಲೆಗಳು ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಶಾಲೆಗಳಿಗೆ ಅನುಮತಿ ನೀಡಬೇಕೆಂದಿಲ್ಲ. ಶಾಲೆಗಳು ಅರ್ಜಿ ಸಲ್ಲಿಸುವ ವೇಳೆಯೇ ವಿದ್ಯಾರ್ಥಿಗಳನ್ನು ದಾಖಲೆ ಮಾಡಿಕೊಳ್ಳಲು ಅನುಮತಿ ನೀಡಿರುವುದಿಲ್ಲ. ಶಿಕ್ಷಣ ಇಲಾಖೆಯಿಂದ ಮಾನ್ಯತೆ ದೊರೆಯಬೇಕಾದರೆ ಇಲಾಖೆಯ ಎಲ್ಲಾ ನಿಯಮವನ್ನು ಪರಿಪಾಲಿಸಿರಬೇಕಾಗುತ್ತದೆ.

ಆ ನಿಯಮ ಪರಿಪಾಲನೆಯ ಬಳಿಕವಷ್ಟೇ ಶಾಲೆಗೆ ಮಾನ್ಯತೆ ನೀಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲಾಗುತ್ತದೆ. ಆದರೆ ಇಲಾಖೆಯಿಂದ ಅನುಮತಿ ಸಿಗುವ ಮೊದಲೇ ಶಾಲೆಗಳನ್ನು ತೆರೆಯಲಾಗಿದ್ದ ಅಂತಹ ಶಿಕ್ಷಣ ಸಂಸ್ಥೆ ಅತಂತ್ರವಾಗಲಿವೆ.

ಶಿಕ್ಷಣ ಇಲಾಖೆ ಅಥವಾ ಕೇಂದ್ರ ಇಲಾಖೆಗಳಿಂದ ಅನುಮತಿಯನ್ನು ಪಡೆಯದೆ ಶಾಲೆಯನ್ನು ನಡೆಸುವಂತಿಲ್ಲ. ಅಂತಹ ಶಾಲೆಗಳು ಗಮನಕ್ಕೆ ಬಂದರೇ ಪೋಷಕರಿಗೆ ಅನಕೃತ ಶಾಲೆಯ ಬಗ್ಗೆ ಸ್ಥಳೀಯ ಪತ್ರಿಕೆಯಲ್ಲಿ ಸ್ಥಳೀಯವಾಗಿ ಅನಕೃತ ಶಾಲೆ ಎಂಬುದನ್ನು ಪ್ರಕಟಿಸಬೇಕು. ಅನಕೃತ ಶಾಲೆಯಲ್ಲಿ ವ್ಯಾಸಂಗ ಮಾಡಿದ ಮಕ್ಕಳಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಕೃತ ಮಾನ್ಯತೆ ನೀಡಲು ಬರುವುದಿಲ್ಲ.

ಮಕ್ಕಳ ಶೈಕ್ಷಣಿಕ ಭವಿಷ್ಯ ಹಾಳಾಗುವ ಉದ್ದೇಶದಿಂದ ಸ್ಥಳೀಯ ಪೋಲೀಸ್ ಠಾಣೆಗೆ ಸಿಆರ್‍ಪಿ, ಬಿಆರ್‍ಪಿ, ಶಿಕ್ಷಣ ಸಂಯೋಜಕರೇ ದೂರನ್ನು ನೀಡುವ ಮೂಲಕ ಅನಕೃತ ಶಾಲೆಯನ್ನು ಮುಚ್ಚುವ ಕೆಲಸ ಮಾಡಬೇಕು ಎಂದು ಆದೇಶಿಸಲಾಗಿದೆ. ಆ ಮೂಲಕ ಶಿಕ್ಷಣ ಇಲಾಖೆ ಅನಕೃತ ಸಂಸ್ಥೆಯನ್ನು ಮುಚ್ಚಿಸುವ ಕೆಲಸಕ್ಕೂ ಮುಂದಾಗಿದೆ.

ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲು ಜನವರಿಯಲ್ಲೇ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ. 2022-23ನೇ ಸಾಲಿಗೆ ಎಂದೇ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ. ಅರ್ಜಿಯನ್ನು ಸಲ್ಲಿಸುವ ವೇಳೆ ಕಟ್ಟಡ ಹೊಂದಿರಬೇಕು, ಅಗ್ನಿಸುರಕ್ಷತೆ, ಲೋಕೋಪಯೋಗಿ ಇಲಾಖೆಯ ಬಿಲ್ಡಿಂಗ್ ಸೆಫ್ಟಿ ಪತ್ರ, ಶಾಲೆಗೆ ಬೇಕಾಗಿರುವ ಡೆಸ್ಕ್, ಮೇಜು ಸೇರಿದಂತೆ ಪೀಠೋಪಕರಣ, ಆಟೋಪಕರಣ, ವಾಹನ, ಶೌಚಾಲಯ, ನೀರಿನ ವ್ಯವಸ್ಥೆ ಹೀಗೆ ಎಲ್ಲ ಸೌಲಭ್ಯವನ್ನು ಸರಿಮಾಡಿಕೊಂಡು ಅರ್ಜಿಯನ್ನು ಹಾಕಬೇಕಾಗಿರುತ್ತದೆ.

Articles You Might Like

Share This Article