ಫೆ.27ಕ್ಕೆ ಬೆಳಗಾವಿಗೆ ಪ್ರಧಾನಿ ಮೋದಿ ಭೇಟಿ

Social Share

ಬೆಂಗಳೂರು,ಫೆ.20- ಫೆಬ್ರವರಿ 27ಕ್ಕೆ ಬೆಳಗಾವಿಗೆ ಪ್ರಧಾನಮಂತ್ರಿ ನರೇಂದ್ರಮೋದಿ ಭೇಟಿ ನೀಡುತ್ತಿದ್ದು, ಹೈಟೆಕ್ ರೈಲ್ವೇ ನಿಲ್ದಾಣವನ್ನು ಉದ್ಘಾಟನೆ ಮಾಡಲಿದ್ದಾರೆ. ಫೆ.27ರಂದು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದು, ನಂತರ ಮಧ್ಯಾಹ್ನ 2.15ಕ್ಕೆ ಬೆಳಗಾವಿಗೆ ಆಗಮಿಸಿ ಹೈಟೆಕ್ ರೈಲು ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಬಳಿಕ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳುವರು.

ಓವೈಸಿ ಮನೆ ಮೇಲೆ ಕಲ್ಲು ತೂರಾಟ

ಜಿಲ್ಲಾ ಕ್ರೀಡಾಂಗಣ, ಸಿಪಿಎಡ್ ಮೈದಾನ, ಅಂಗಡಿ ಕಾಲೇಜು ಮೈದಾನ, ಯಡಿಯೂರಪ್ಪ ರಸ್ತೆ ಬಳಿಯ ಬಯಲು ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಸ್ಥಳವನ್ನು ಪರಿಶೀಲಿಸುತ್ತಿದ್ದೇವೆ. ಸಮಾವೇಶಕ್ಕೆ ಸೂಕ್ತ ಸ್ಥಳವನ್ನು ಆಯ್ಕೆ ಮಾಡಲಾಗುವುದು. ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಈಗಾಗಲೇ ಸಭೆಯ ಸಿದ್ಧತೆಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಅದಾನಿ, ಅಂಬಾನಿ ಸಮಯಕ್ಕಿಂತ ನನ್ನ ಸಮಯ ಮೌಲ್ಯಯುತವಾಗಿದೆ : ರಾಮ್‍ದೇವ್

ಈ ಸಂದರ್ಭದಲ್ಲಿ ಸಂಸದೆ ಮಂಗಳಾ ಸುರೇಶ ಅಂಗಡಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಎಂಎಲ್‍ಸಿ ಕೇಶವ ಪ್ರಸಾದ್, ಉಜ್ವಲಾ ಬಡವನಾಚೆ, ರಮೇಶ ದೇಶಪಾಂಡೆ, ಆರ್.ಎಸ್.ಮುತಾಲಿಕ್, ಮುರಗೇಂದ್ರಗೌಡ ಪಾಟೀಲ, ಜಯಪ್ರಕಾಶ ಎಂ.ಸಿ, ಮತ್ತಿತರರು ಉಪಸ್ಥಿತರಿದ್ದರು.

February 27, PM Modi, Belgaum, visit,

Articles You Might Like

Share This Article