ಏರ್ ಇಂಡಿಯಾ ಕಾರ್ಯವೈಖರಿಗೆ ದೇಬ್‍ ರಾಯ್ ಖಂಡನೆ

Social Share

ನವದೆಹಲಿ,ಫೆ.18- ಖಾಸಗಿಕರಣಗೊಳಿಸುವ ಮೊದಲೆ ಏರ್ ಇಂಡಿಯಾ ವಿಮಾನಯಾನ ಸುವ್ಯವಸ್ಥೆಯಿಂದ ಕೂಡಿತ್ತು. ಸಂಸ್ಥೆಯನ್ನು ಟಾಟಾ ಸಂಸ್ಥೆ ಒಡೆತನಕ್ಕೆ ನೀಡಿದ ನಂತರ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ ಎಂದು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷ ಬಿಬೆಕ್ ದೇಬ್ ರಾಯ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂಬೈನಿಂದ ದೆಹಲಿಗೆ ಆಗಮಿಸಿದ ವಿಮಾನ 4 ಗಂಟೆ ತಡವಾಗಿ ಬಂದ ಕಾರಣ ಏರ್ ಇಂಡಿಯಾ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಕಿಡಿಕಾರಿರುವ ದೇಬ್‍ರಾಯ್ ಅವರು ಖಾಸಗೀಕರಣದ ಮೊದಲು ವಿಮಾನ ಯಾನ ಸಂಸ್ಥೆ ಉತ್ತಮವಾಗಿತ್ತು ಎಂದು ಸರಣಿ ಟ್ವಿಟ್ ಮಾಡಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಬಿಲ್ಲು-ಬಾಣದ ಚಿಹ್ನೆ ಚಿಂತೆ ಬಿಡಿ : ಉದ್ಧವ್‍ಗೆ ಪವಾರ್ ಸಲಹೆ

ಈ ಟ್ವಿಟ್‍ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ಸಂಸ್ಥೆ ವಿಮಾನದ ಕಾರ್ಯಚರಣೆಯ ತಾಂತ್ರಿಕ ಕಾರಣಗಳಿಂದ ಪ್ರಯಾಣ ವಿಳಂಬವಾಗಿದೆ ಕ್ಷಮೆ ಇರಲಿ ಎಂದು ಕೇಳಿಕೊಂಡಿದೆ. ಪರಿಸ್ಥಿತಿ ಸುಧಾರಿಸದಿದ್ದರೆ ನಾನು ಭವಿಷ್ಯದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವ ದೇಬ್‍ರಾಯ್ ಅವರು ಹೆಚ್ಚು ವಿಮಾನ ಖರೀದಿಸುವುದರಿಂದ ಸ್ವಯಂಚಾಲಿ ಸೇವೆ ಸುಧಾರಿಸುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ.

ಗಡಿಯಲ್ಲಿ ಕಳ್ಳಸಾಗಣಿಕೆ ಯತ್ನ ತಡೆದ ಬಿಎಸ್‍ಎಫ್ ಯೋಧರು

ಪರಿಸ್ಥಿತಿ ಸುಧಾರಿಸಲು ನಮ್ಮ ಸಿಬ್ಬಂದಿ ಪ್ರಯತ್ನಿಸಿತ್ತು ಎಂಬ ಸಂಸ್ಥೆಯ ಸಬೂಬಿಗೂ ಆಕ್ರೋಶ ವ್ಯಕ್ತಪಡಿಸಿರುವ ಅವರು, ಕೋಪಗೊಂಡ ಪ್ರಯಾಣಿಕರ ವೀಡಿಯೊವನ್ನು ನಾನು ಟ್ವೀಟ್ ಮಾಡಬೇಕೆಂದು ನೀವು ಬಯಸುತ್ತೀರಾ? ನಾನು ಈಗ 4 ಗಂಟೆಗಳ ಕಾಲ ಕಾಯುವ ಪ್ರಯಾಣಿಕರಿಗೆ ಚಹಾ ಕೊಡಿಸಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

Air India, PM, Economic Advisory, Council, Chairman,

Articles You Might Like

Share This Article