ಬೆಂಗಳೂರಿನಲ್ಲಿ 2ನೇ ಫೀಲ್ ಆಟ್ ಹೋಮ್ ಸೀನಿಯರ್ ಕೇರ್

Social Share

ಬೆಂಗಳೂರು, ನ.6- ನಮ್ಮ ಬೆಂಗಳೂರಿನ ಪ್ರೀಮಿಯಂ ಹಿರಿಯರ ಆರೈಕೆ ಕೇಂದ್ರಗಳಲ್ಲಿ ಒಂದಾದ ಫೀಲ್ ಅಟ್ ಹೋಮ್ ಸೀನಿಯರ್ ಕೇರ್ ಸೆಂಟರ್ ತನ್ನ ಎರಡನೇ ಕೇಂದ್ರವನ್ನು ಪ್ರಾರಂಭಿಸಿದೆ. ಅಲಮಾನ್ಸ್ ಐಟಿ ಸೊಲ್ಯೂಷನ್ ಇತರ ದಾನಿಗಳೊಂದಿಗೆ ಸಹಕಾರದಲ್ಲಿ ಬಿ.ಸಿ.ಶಿವಣ್ಣ ಫೌಂಡೇಶನ್ (ಬಿಸಿಎಸ್‍ಎಫ್) ಸ್ಥಾಪಿಸಿರುವ ಈ ನೂತನ ಕೇಂದ್ರವು ಕನಕಪುರ ರಸ್ತೆಯ ತಲಘಟ್ಟಪುರ ಬಳಿಯ ಲಿಂಗದೀರನ ಹಳ್ಳಿಯಲ್ಲಿದೆ.

ಈ ಕೇಂದ್ರ 48 ಹಿರಿಯ ನಾಗರಿಕರು ತಂಗಬಹುದಾದಷ್ಟು ವಿಶಾಲವಾಗಿದ್ದು, ವೃದ್ಧಾಪ್ಯ ಸಹಾಯ ಒದಗಿಸುವ ವೃತ್ತಿಪರ ಆರೈಕೆದಾರರನ್ನು ಹೊಂದಿದೆ. ಬನಶಂಕರಿ ಎರಡನೇ ಹಂತದಲ್ಲಿರುವ ತನ್ನ ಮೊದಲ ಕೇಂದ್ರದಂತೆಯೇ, ಈ ಕೇಂದ್ರವು ಮನೆಯ ವಾತಾವರಣದಿಂದ ಕೂಡಿದೆ. ದಿನದ 24 ಗಂಟೆಯೂ ಕ್ಲಿನಿಕಲ್ ಬೆಡ್ ಮತ್ತು ಇತರೆ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದೆ.

ಅಲ್ಪಾವ ಮತ್ತು ದೀರ್ಘಾವಯ ವಾಸ್ತವ್ಯವನ್ನು ಒದಗಿಸುವ ಈ ಕೇಂದ್ರದಲ್ಲಿ ಫೀಲ್ ಆಟ್ ಹೋಮ್ ಹೆಸರಿಗೆ ತಕ್ಕಂತೆ ಹಿರಿಯರು ತಮಗೆ ಬೇಕಾದ ಆಹಾರವನ್ನು ಪಡೆಯಬಹುದಾಗಿದೆ. ಅಲ್ಲದೆ, ಡೇ ಕೇರ್ ಸೇವೆಯನ್ನು ಸಹ ಇಲ್ಲಿ ಒದಗಿಸಲಾಗುತ್ತದೆ.

ಬ್ಲ್ಯಾಕ್ಕಾಂಬ್(ಆಕ್ಸೆಂಚರ್ ಕಂಪನಿ)ನ ಸಹ ನಿರ್ದೇಶಕ ಸತೀಶ್ ಪೈ ಮಾತನಾಡಿ, ಇಂದಿನ ಜಂಜÁಟದ ಬದುಕು ಮತ್ತು ವೇಗದ ಜಗತ್ತಿನಲ್ಲಿ ಬಹುತೇಕ ಹಿರಿಯರು ನಾವು ಕಳೆದುಹೋಗಿದ್ದೇವೆ ಎಂಬ ಭಾವನೆ ಹೊಂದಿದ್ದಾರೆ. ಹಿರಿಯರ ಆರೈಕೆ ಕೇಂದ್ರಗಳು ತನ್ನ ನಿವಾಸಿಗಳು ಸ್ನೇಹಿತರ ಜೊತೆಗೂಡಿ ಆನಂದಿಸಲು ಮತ್ತು ಸಂಜೆಗಳನ್ನು ಪ್ರಶಾಂತವಾಗಿ ಸಂತಸದಿಂದ ಕಳೆಯಲು ಅನುವು ಮಾಡಿಕೊಡುತ್ತವೆ. ದೇಶದಲ್ಲಿ ಇಂತಹ ಹೆಚ್ಚಿನ ಕೇಂದ್ರಗಳ ಅಗತ್ಯವಿದೆ ಎಂದು ಹೇಳಿದರು.

ಬಿ.ಸಿ.ಶಿವಣ್ಣ ಪ್ರತಿಷ್ಠಾನವು ನೋಂದಾಯಿತ ಟ್ರಸ್ಟ್ ಆಗಿದ್ದು, ವಿವಿಧ ಕಾರಣಗಳಿಗಾಗಿ ತಮ್ಮ ಮನೆಗಳಲ್ಲಿ ವಾಸಿಸಲು ಸಾಧ್ಯವಾಗದ ಹಿರಿಯ ನಾಗರಿಕರಿಗೆ ಮತ್ತೊಂದು ಮನೆಯನ್ನು ಕಲ್ಪಿಸುವ ಮೂಲಕ ಅವರ ಜೀವನವನ್ನು ಸುಧಾರಿಸುವ ಉದ್ದೇಶದಿಂದ ಪ್ರಾರಂಭವಾಗಿದೆ.

Articles You Might Like

Share This Article