ಸಾಲು ಸಾಲು ಹಬ್ಬಗಳ ಸಂಭ್ರಮ, ಮತ್ತೆ ಕೋವಿಡ್ ಹೆಚ್ಚಳ ಭೀತಿ

Social Share

ಬೆಂಗಳೂರು,ಆ.11- ಒಂದು ಕಡೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಪ್ರಕರಣಗಳು, ಮತ್ತೊಂದು ಕಡೆ ಸಾಲು ಸಾಲು ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತೆ ಕೋವಿಡ್ ನಿಯಂತ್ರಣಕ್ಕಾಗಿ ಕೆಲವು ನಿರ್ಬಂಧಗಳನ್ನು ಹಾಕಲು ಮುಂದಾಗಿದೆ.

ನಾಳೆ ಅಥವಾ ಶನಿವಾರ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಜೊತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸಭೆ ನಡೆಸಲಿದ್ದು, ನಂತರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದ್ದಾರೆ.

ಕಳೆದ ವಾರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯವರು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಅತಿ ಹೆಚ್ಚು ಸೋಂಕು ಹಬ್ಬಿರುವ 5 ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಕೂಡಲೇ ಕೆಲವು ನಿರ್ಬಂಧಗಳನ್ನು ವಿಧಿಸಬೇಕೆಂದು ಸೂಚಿಸಿದ್ದರು.

ಜನನಿಬಿಡ ಪ್ರದೇಶ, ಮಾರುಕಟ್ಟೆ, ಮಾಲುಗಳು, ಸಂತೆ ಮೈದಾನ, ಸಿನಿಮಾ ಮಂದಿರ, ಧಾರ್ಮಿಕ ಕೇಂದ್ರಗಳು ಸೇರಿದಂತೆ
ಮತ್ತಿತರ ಕಡೆ ಕೆಲವು ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಜ್ಯ ಸರ್ಕಾರ ಗೌರಿಗಣೇಶ ಹಬ್ಬ, ದಸರಾ ಹಾಗೂ ದೀಪಾವಳಿ ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರಿಂದ ಅಭಿಪ್ರಾಯಗಳನ್ನು ಪಡೆಯಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋವಿಡ್‍ನಿಂದ ಚೇತರಿಸಿಕೊಂಡಿದ್ದು, ಸಚಿವ ಸುಧಾಕರ್ ಅವರು ಮಾತುಕತೆ ನಡೆಸಿದ ಬಳಿಕ ಶನಿವಾರ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಜನಜಂಗುಳಿ ಸೇರದಂತೆ ಎಚ್ಚರ ವಹಿಸಲು ರಾಜ್ಯಕ್ಕೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಹಾಗಾಗಿ ಕಠಿಣ ನಿಯಮಗಳನ್ನ ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ.

ಸಾರ್ವಜನಿಕ ಗಣೇಶೋತ್ಸವಕ್ಕೆ ಹೆಚ್ಚು ಜನಸಂದಣಿ ಸೇರುವಂತಿಲ್ಲ. ಸಾಮಾಜಿಕ ಅಂತರ ಪಾಲನೆಯಾಗಬೇಕು. ಮಾಸ್ಕ್ ಸ್ಯಾನಿಟೈಸ್ ಕಡ್ಡಾಯ ಧಾರಣೆ ಕಡ್ಡಾಯ ಸಾಧ್ಯತೆ. ಬೂಸ್ಟರ್ ಡೋಸ್ ಕಡ್ಡಾಯಗೊಳಿಸುವ ಸಾಧ್ಯತೆ. ಮೈದಾನದಲ್ಲಿ ಅದ್ಧೂರಿ ಗಣೇಶೋತ್ಸವ ಸಂದರ್ಭದಲ್ಲಿ ಫೀವರ್ ಚೆಕ್ ಕಡ್ಡಾಯಗೊಳಿಸುವ ಸಾಧ್ಯತೆ. ಸ್ಯಾನಿಟೈಸರ್ ಬಳಕೆಯ ಬಗ್ಗೆ ಜಾಗೃತಿ. ಹೆಚ್ಚು ಜನಸಂದಣಿ ಜಾಗದಲ್ಲಿ ಟೆಸ್ಟಿಂಗ್ ಕ್ಯಾಂಪ್‍ಗಳನ್ನು ಹಾಕುವ ಸಾಧ್ಯತೆ. ಸಿಮೀತ ಜನರನ್ನ ನಿಗಗೊಳಿಸುವ ಸಾಧ್ಯತೆ. ಮಾರ್ಕೇಟ್ ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ ಹೆಚ್ಚಿನ ಜನರಿಗೆ ನಿರ್ಭಂದಗೊಳಿಸುವ ಸಾಧ್ಯತೆ ಇದೆ.

ಗೌರಿ-ಗಣೇಶ ಹಬ್ಬ ಹಾಗೂ ಉತ್ಸವದ ವಿಚಾರವನ್ನ ಆರೋಗ್ಯ ಇಲಾಖೆ, ಮುಂದೆ ಇಡಲಾಗುವುದು. ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಮುಂದೆ ಗಣೇಶ ಹಬ್ಬದ ವಿಚಾರ ಇಟ್ಟು ಸಲಹೆ ಪಡೆಯುತ್ತೇವೆ. ಸಲಹಾ ಸಮಿತಿ ಕೊಡುವ ಸಲಹೆಯಂತೆ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಗಣೇಶ ಹಬ್ಬದ ಆಚರಣೆಗೆ ನಿರ್ಬಂಧ ಹೇರುವುದು ಅನಿವಾರ್ಯವಾಗುತ್ತದೆ. ಆರೋಗ್ಯ ಇಲಾಖೆಗೆ ಸಲಹಾ ಸಲಹೆ ಏನು ಕೊಡುತ್ತದೆಯೋ ಆ ವರದಿಯನ್ನು ನಾವು ಸರ್ಕಾರದ ಮುಂದೆ ಇಟ್ಟು ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಸರ್ಕಾರದ ಹಂತದಲ್ಲಿ ಸಭೆ ನಡೆಯುತ್ತೆ ಸಭೆ ಬಳಿಕ ಮಾರ್ಗಸೂಚಿ ಕೊಡುತ್ತೇವೆ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ನಿರ್ಧರವಾಗಲಿದೆ. ಆರೋಗ್ಯ ಇಲಾಖೆಗೂ ಕೆಲವು ನಿರ್ಬಂಧಗಳು ಇರಬೇಕು ಎಂದು ಮನವಿ ಮಾಡಲಾಗುವುದು.

ಹೆಚ್ಚು ಜನದಟ್ಟಣೆಯಾಗಬಾರದು. ಹೆಚ್ಚು ಜನಸಂದಣಿ ಈ ಸಮಯದಲ್ಲಿ ಸೂಕ್ತವಲ್ಲ. ಜನರ ನಿರ್ಬಂಧ ಎಷ್ಟು ಹೇಗೆ ಅಂತಾ ಸರ್ಕಾರ ನಿಗ ಮಾಡುತ್ತದೆ. ಆದರೆ ರಿಜಿನಬಲ್ ನಿರ್ಬಂಧಕ್ಕೆ ಆರೋಗ್ಯ ಇಲಾಖೆ ಸಲಹೆ ಮಾಡುತ್ತೆ ಎಂದು ಅವರು ತಿಳಿಸಿದರು.

Articles You Might Like

Share This Article