ಆಸ್ಟ್ರೇಲಿಯಾ ಮಣಿಸಿ ಕ್ವಾರ್ಟರ್‌ಫೈನಲ್‍ಗೆ ಲಗ್ಗೆ ಇಟ್ಟ ಅರ್ಜೆಂಟೀನಾ

Social Share

ಅಲ್ ರಯಾನ್ (ಕತಾರ್), ಡಿ. 4 -ಲಿಯೋನೆಲ್ ಮೆಸ್ಸಿ ಅವರ ಅದ್ಬುತ ಆಟದಿಂದ ಆಸ್ಟ್ರೇಲಿಯಾ ವಿರುದ್ಧ 2-1 ಗೋಲುಗಳ ಜಯದೊಂದಿಗೆ ಅರ್ಜೆಂಟೀನಾ ಕ್ವಾರ್ಟರ್‍ಫೈನಲ್‍ಗೆ ಲಗ್ಗೆ ಇಟ್ಟಿದೆ.

ಇಲ್ಲಿ ನಡೆಯುತ್ತರುವ ವಿಶ್ವಕಪ್ ಪುಟ್‍ಬಾಲ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ವಿರುಧ್ದದ ಪ್ರಮುಖ ಪಂದ್ಯದಲ್ಲಿ ಮೆಸ್ಸಿ ಆಕರ್ಷಕ ಹೊಡೆತದ ಮೂಲಕ ಚಂಡನ್ನು ಗೋಲನ ಬಲೆಯೊಳಗೆ ಬೀಳಿಸುವ ಮೂಲಕ ತಮ್ಮ ವೃತ್ತಿಪರ ಆಟ 1,000 ನೇ ಗೋಲು ದಾಖಲಿಸಿದರು ಕಳೆದ ರಾತ್ರಿ ನಡೆದ ರೊಮಾಂಚಕಾರಿ ಪಂದ್ಯ 34 ನೇ ನಿಮಿಷದಲ್ಲಿ ಮೆಸ್ಸಿ ಅರ್ಜೆಂಟೀನಾಕ್ಕೆ ಮುನ್ನಡೆ ತಂದುಕೊಟ್ಟರು.

ವಿಶ್ವಕಪ್‍ನಲ್ಲಿ ಒಟ್ಟು ಒಂಬತ್ತನೇ ಗೋಲು ಗಳಿಸಿ ಪುಟ್‍ಬಾಲ್ ದಿಗ್ಗಜ ಡಿಯಾಗೋ ಮರಡೋನಾ ದಾಖಲೆಯನ್ನು ಸರಿಗಟ್ಟಿದರು. ಕ್ವಾರ್ಟರ್‍ಫೈನಲ್‍ನಲ್ಲಿ ಅರ್ಜೆಂಟೀನಾ ನೆದರ್‍ಲ್ಯಾಂಡ್‍ನೊಂದಿಗೆ ಜೂಲಿಯನ್ ಅಲ್ವಾರೆಜ್ ಎರಡನೇ ಗೋಲುಗಾಗಿ ಖಾಲಿ ನೆಟ್‍ಗೆ ಹೊಡೆಯಲು ಆಸ್ಟ್ರೇಲಿಯಾದ ಗೋಲ್‍ಕೀಪರ್ ಮ್ಯಾಥ್ಯೂ ರಿಯಾನ್ ಅವರ ಭಾರೀ ಸ್ಪರ್ಶದ ಮೇಲೆ ಧಾವಿಸಿದರು.

“ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ”

ಆಸ್ಟ್ರೇಲಿಯಾ ಕ್ರೇಗ್ ಗುಡ್ವಿನ್ ಪಂದ್ಯದ 77 ನೇ ನಿಮಿಷದಲ್ಲಿ ಗೋಲು ಗಳಿಸಿದಾಗ ಉಭಯ ತಂಡಗಳು 1-1 ರಿಂದ ಸಮಭಲ ಸಾಧಿಸಿತು. ಆದರೆ ನಂತರ ಅರ್ಜೆಂಟೀನಾ ಆಟಗಾರರ ಕೆಚ್ಚೆದೆಯ ಅಕ್ರಮಣಕಾರಿ ಹೋರಾಟದ ಫಲವಾಗಿ ಪಂದ್ಯದ ಕೊನೆ ಕ್ಷಣದಲ್ಲಿ ಗೋಲು ಗಳಿಸಿ ಜಯ ಸಾಧಿಸಿತು.

ಸಿ.ಟಿ.ರವಿ ನಿವಾಸಕ್ಕೆ ಕೈ ಕಾರ್ಯಕರ್ತರ ಮುತ್ತಿಗೆ ಯತ್ನ

FIFA World Cup, Argentina, beat, Australia,

Articles You Might Like

Share This Article