ದೋಹಾ, ಡಿ. 10- ಕತಾರ್ ಫಿಫಾ ಫುಟ್ಬಾಲ್ ಟೂರ್ನಿಯಲ್ಲಿ ಕಳೆದ ತಡರಾತ್ರಿ ಲೂಸಿಯಲ್ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡವು ಶೂಟೌಟ್ ಲಾಭ ಪಡೆದು ಸೆಮಿಫೈನಲ್ ಪ್ರವೇಶಿಸಿದೆ.
ಪಂದ್ಯದ ಆರಂಭಿಕ ಕ್ಷಣದಿಂದಲೂ ಎರಡು ತಂಡಗಳ ಆಟಗಾರರು ರೋಚಕ ಪ್ರದರ್ಶನ ನೀಡಿದ್ದರಿಂದ ಪಂದ್ಯ ಮುಗಿದ ಬಳಿಕ ನೆದರ್ಲೆಂಡ್ಸ್ ಹಾಗೂ ಅರ್ಜೆಂಟೀನಾ ತಂಡವು 2-2 ಗೋಲುಗಳಿಂದ ಸಮಬಲ ಸಾಧಿಸಿತ್ತು.
ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಪೆನಾಲ್ಟಿ ಶೂಟೌಟ್‍ನ ಮೊರೆ ಹೋಗಬೇಕಾಯಿತು.
ಪಂದ್ಯದ ಆರಂಭದ 10 ನಿಮಿಷಗಳಲ್ಲೇ ಅರ್ಜೆಂಟೀನಾಗೆ ಗೋಲು ಗಳಿಸುವ ಅವಕಾಶ ಸಿಕ್ಕರೂ ಗೋಲಾಗಿ ಪರಿವರ್ತಸಲು ಆಗಲಿಲ್ಲ. ಆದರೆ 35ನೇ ನಿಮಿಷದಲ್ಲಿ ನಾಯಕ ಮೆಸ್ಸಿ , ಡಚ್ಚರ ರಕ್ಷಣಾ ಪಡೆಯ ಕಣ್ತಪ್ಪಿಸಿ ನ್ಯಾಹೂಯೆಲ್ ಮೊಲಿಸಾಗೆ ಚೆಂಡನ್ನು ಪಾಸ್ ಮಾಡಿದರು.
ರಕ್ಷಣಾ ಇಲಾಖೆಯ ಕಪ್ಪು ಪಟ್ಟಿ ಸೇರಿದ ಬೆಂಗಳೂರು ಮೂಲದ ಏವಿಯೇಷನ್ ಸಂಸ್ಥೆ
ಮೊಲಿಸಾ ಅಷ್ಟೇ ಎಚ್ಚರಿಕೆಯ ಆಟ ಪ್ರದರ್ಶಿಸಿ ಚೆಂಡನ್ನು ಎದುರಾಳಿಯ ನೆಟ್ ಒಳಗೆ ಸೇರಿಸುವ ಮೂಲಕ ಅರ್ಜೆಂಟೀನಾಗೆ ಮೊದಲಾರ್ಧದ ವೇಳೆಗೆ 1-0 ಮುನ್ನಡೆ ದೊರಕಿಸಿಕೊಟ್ಟರು. ಪಂದ್ಯದ 73ನೆ ನಿಮಿಷದಲ್ಲಿ ನಾಯಕ ಲಿಯೋನೆಲ್ ಮೆಸ್ಸಿ ಪೆನಾಲ್ಟಿ ಮೂಲಕ ಗೋಲು ಗಳಿಸಿ ಅಂತರವನ್ನು 2-0 ಏರಿಸುವ ಮೂಲಕ ಪಂದ್ಯ ಗೆಲ್ಲುವ ಭರವಸೆ ಮೂಡಿಸಿದರಾದರೂ ನೆದರ್ಲೆಂಡ್ಸ್‍ನ ವೆಗೋಸ್ಟ್ 83ನೆ ನಿಮಿಷದಲ್ಲಿ ಹೆಡರ್ ಮೂಲಕ ಗೋಲು ಗಳಿಸಿದರೆ, 123 ನೆ ನಿಮಿಷದಲ್ಲಿ ಡೆನ್ಜಲ್ ಡುಮ್ಪೆರಸ್ ಗೋಲು ಗಳಿಸಿ ಅಂತರವನ್ನು 2-2 ಸಮಬಲಗೊಳಿಸಿದರು.
ವೇಗದ ದ್ವಿಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ ಇಶಾನ್ ಕಿಶನ್
ಪಂದ್ಯದ ಫಲಿತಾಂಶಕ್ಕಾಗಿ ಅಂಪೈರ್‍ಗಳು ಪೆನಾಲ್ಟಿ ಶೂಟೌಟ್ ಮೊರೆ ಹೋದರು. ಈ ಹಂತದಲ್ಲಿ ಅರ್ಜೆಂಟೀನಾ 4-3 ಅಂತರದಿಂದ ಗೆಲುವು ಸಾಧಿಸಿ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದ್ದು. ಈ ಹಂತದಲ್ಲಿ ಬ್ರೆಜಿಲ್ ತಂಡವನ್ನು ಮಣಿಸಿದ ಕ್ರೂವೇಷಿಯಾದ ಕಠಿಣ ಸವಾಲನ್ನು ಮೆಸ್ಸಿ ಸಾರಥ್ಯದ ಅರ್ಜಿಂಟೀನಾ ಎದುರಿಸಲಿದೆ.
Fifa World Cup, Argentina, Croatia, semifinal, match,