ಚಿಕ್ಕಮಗಳೂರು,ಜು.29- ನಗರದ ಮಿಲನ್ ಚಿತ್ರಮಂದಿರದಲ್ಲಿ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ವೀಕ್ಷಣೆಗೆ ತೆರಳಿದ್ದ ಯುವಕರ ತಂಡ ಹೊಡೆದಾಡಿಕೊಂಡು ಮರಣಾಂತಿಕ ಹಲ್ಲೆ ಮಾಡಿಕೊಂಡಿರುವ ಘಟನೆ ನಡೆದಿದೆ.
ನಗರದ ಕೋಟೆ ನಿವಾಸಿ ಭರತ್(25)ಗೆ ದುಷ್ಕರ್ಮಿಗಳು ಕತ್ತಿಯಿಂದ ಬೆನ್ನು, ಕೈ, ತಲೆ, ಹೊಟ್ಟೆ ಭಾಗಕ್ಕೆ ಚುಚ್ಚಿದ್ದು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳು ಭರತ್ನನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕರೆದೊಯ್ಯಲಾಗಿದೆ.
ಹಳೆ ದ್ವೇಷದಿಂದ ಈ ಜಗಳ ನಡೆದಿರಬಹುದು ಎಂದು ಪೆÇಲೀಸರು ಶಂಕಿಸಿದ್ದಾರೆ. ಸಿನಿಮಾ ನೋಡಲು ಹೋಗಿ ಬಡದಾಡಿಕೊಂಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಕೆಲ ಯುವಕರನ್ನು ವಿಚಾರಣೆಗೆ ವಶಪಡಿಸಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.