ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ

Spread the love

ಬೆಂಗಳೂರು, ಮೇ 28- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇಂದು ಚುನಾವಣೆ ನಡೆಯುತ್ತಿದ್ದು,ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ನಡೆದಿದೆ. ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಮತ್ತು ನಿರ್ಮಾಪಕ ಬಾಮಾ ಹರೀಶ್ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಹಿರಿಯ ನಿರ್ಮಾಪಕ ಮತ್ತು ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದು ಈ ಹಿಂದೆ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದಾಗ ಸಿನಿಮಾರಂಗದ ಕಲಾವಿದರು ಮತ್ತು ತಂತ್ರಜ್ಞರನ್ನು ಸಮಭಾವದಿಂದ ಕಂಡು ಕಷ್ಟ-ಸುಖಗಳಿಗೆ ಬೆನ್ನೆಲುಬಾಗಿ ನಿಂತಿದ್ದು, ಹಲವು ಸಕಾರಾತ್ಮಕ ಸುಧಾರಣೆಗಳು ಅವರ ಗೆಲುವಿಗೆ ನೆರವಾಗಲಿವೆ ಎಂದು ಹಿರಿಯ ಕಲಾವಿದರ ಮತ್ತು ತಂತ್ರಜ್ಞರ ಅಭಿಪ್ರಾಯವಾಗಿದೆ.

ಅಷ್ಟೆ ಅಲ್ಲದೆ, ಅನೇಕ ನಿರ್ಮಾಪಕರು ಇವರ ಹಿಂದೆ ಇರುವುದು ಮತ್ತಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಸಾ.ರಾ.ಗೋವಿಂದು ಅಧಿಕಾರದಲ್ಲಿಲ್ಲದಿದ್ದರೂ ಕೊರೊನಾ ಸಮಯದಲ್ಲಿ ಸಿನಿಮಾರಂಗದ ಸದಸ್ಯರಿಗೆ ನೆರವು ನೀಡಿದ್ದನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ.

ಅಧ್ಯಕ್ಷನಾಗಿದ್ದಾಗ ನಾನು ಮಾಡಿದ ಕೆಲಸ ಎಲ್ಲರಿಗೂ ಗೊತ್ತಿದೆ. ಸ್ನೇಹಿತರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ರ್ಪಧಿಸಿದ್ದೇನೆ. ಚುನಾವಣೆಯನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳೋಣ. ಗೆದ್ದವರು ಕೆಲಸ ಮಾಡೋಣ. ಸೋತವರು ಗೆದ್ದವರಿಗೆ ಬೆನ್ನೆಲುಬಾಗಿ ನಿಲ್ಲೋಣ ಎಂದು ಹೇಳುವ ಮೂಲಕ ಸೌಹಾರ್ದ ಮನೋಭಾವ ಪ್ರದರ್ಶಿಸಿದರು.

ಸಾ.ರಾ.ಗೋವಿಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದರೆ ಅವರ ತಂಡದಲ್ಲಿರುವ ಚಿತ್ರಲೋಕ ವೀರೇಶ್ ನಿರ್ಮಾಪಕರ ವಲಯದ ಗೌರವ ಕಾರ್ಯದರ್ಶಿ ಕಣದಲ್ಲಿದ್ದಾರೆ. ನಿರ್ಮಾಪಕರ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ ವಿ.ಸುಬ್ರಮಣಿ. ವಿತರಕರ ವಲಯದ ಉಪಾಧ್ಯಕ್ಷ ಸ್ಥಾನದಲ್ಲಿ ಪಿ.ಎಸ್.ಜ್ಞಾನೇಶ್ವರ ಐತಾಳ್, ಪ್ರದರ್ಶಕರ ಉಪಾಧ್ಯಕ್ಷ ಸ್ಥಾನದಲ್ಲಿ ಜಿ.ಪಿ.ಕುಮಾರ್ ಸ್ಪರ್ಧಾಕಣದಲ್ಲಿದ್ದಾರೆ.

ಕೆ.ಸಿ.ಎನ್. ಕುಮಾರ್ (ಎಂ.ಎನ್.ಕುಮಾರ್) ವಿತರಕರ ವಲಯದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ, ಪ್ರದರ್ಶಕರ ವಲಯದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಎಲï.ಸಿ.ಕುಶಾಲ್ ಹಾಗೂ ಗೌರವ ಖಜÁಂಚಿ ಸ್ಥಾನಕ್ಕೆ ಬಿ.ಕೆ.ಜಯಸಿಂಹ ಮುಸರಿ ನಾಮಪತ್ರ ಸಲ್ಲಿಸಿದ್ದರು. ಇನ್ನು ಸಾ.ರಾ.ಗೋವಿಂದು ಅವರ ಪ್ರತಿಸ್ರ್ಪಯಾಗಿ ಬಾಮಾ ಹರೀಶ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಸಿನಿರಂಗದ ಪ್ರಮುಖರು ತನ್ನ ಬೆನ್ನ ಹಿಂದೆ ಇದ್ದಾರೆ ಎಂಬ ಆತ್ಮವಿಶ್ವಾಸ ಇವರದ್ದು.

ಆಧುನಿಕ ಜಗತ್ತಿನಲ್ಲಿ ಚಿತ್ರರಂಗ ಬದಲಾಗುತ್ತ ಬಂದಿದೆ. ಪ್ರಸ್ತುತ ಅವಶ್ಯಕತೆಗಳಿಗೆ ತಕ್ಕಂತೆ ಮಂಡಳಿಯನ್ನು ಕೊಂಡೊಯ್ಯುವ ಜವಾಬ್ದಾರಿ ಚುನಾವಣೆಯಲ್ಲಿ ಗೆದ್ದವರ ಹೆಗಲಮೇಲಿದೆ ಮತ್ತು ನಿರ್ಮಾಪಕರಿಂದ ಹಿಡಿದು ಸಣ್ಣ ತಂತ್ರಜ್ಞರವರೆಗೂ ಅನೇಕ ಸಮಸ್ಯೆಗಳು, ಸವಾಲುಗಳು ಇವೆ. ಅವುಗಳಿಗೆ ನ್ಯಾಯಸಮ್ಮತವಾಗಿ ಬಗೆಹರಿಸುವುದು ನನ್ನ ಗುರಿಯಾಗಿದೆ ಎಂದು ಹೇಳಿದ್ದಾರೆ.

ಬಾಮಾ ಹರೀಶ್ ಅವರ ತಂಡದಿಂದ ಉಪಾಧ್ಯಕ್ಷ ಸ್ಥಾನಕ್ಕೆ ನಟ ಜೈಜಗದೀಶ್, ವಿತರಕ ಉಪಾಧ್ಯಕ್ಷ ಸ್ಥಾನಕ್ಕೆ ಶಿಲ್ಪಾ ಶ್ರೀನಿವಾಸ್ ಮುತ್ತು ಕೆ.ಮೋ.ರಂಗಪ್ಪ, ವಿತರಕರ ಕಾರ್ಯದರ್ಶಿ ಸ್ಥಾನಕ್ಕೆ ಕುಶಾಲ್ ಮತ್ತು ಪಾರ್ಥಸಾರಥಿ, ನಿರ್ಮಾಪಕ ಕಾರ್ಯದರ್ಶಿ ಸ್ಥಾನಕ್ಕೆ ಸುಂದರರಾಜï, ಖಜÁಂಚಿ ಸ್ಥಾನಕ್ಕೆ ನಟ ಲೂಸ್ ಮಾದ ಯೋಗಿ ಅವರ ತಂದೆ ಟಿ.ಆರ್.ಸಿದ್ದರಾಜು ಸ್ಪರ್ಧಾ ಕಣದಲ್ಲಿದ್ದಾರೆ.

Facebook Comments