ಬೆಂಗಳೂರು,ಡಿ.15-ಎರಡು ವರ್ಷದ ನಂತರ ಕೇಂದ್ರ ಇಲಾಖೆಗಳ ಕ್ಯಾಲೆಂಡರ್‍ಗಳ ಮುದ್ರಣದ ಮೇಲಿನ ನಿಷೇಧವನ್ನು ಕೇಂದ್ರಹಣಕಾಸು ಸಚಿವಾಲಯ ತೆಗೆದುಹಾಕಿದೆ.
ಕೋವಿಡ್ -19 ರ ಹಿನ್ನೆಲೆಯಲ್ಲಿ, ಸಚಿವಾಲಯವು ಸೆಪ್ಟೆಂಬರ್ 2020 ರಲ್ಲಿ ಗೋಡೆ ಮತ್ತು ಡೆಸ್ಕ್‌ಟಾಪ್ ಕ್ಯಾಲೆಂಡರ್‌ಗಳು, ಡೈರಿಗಳು, ಹಬ್ಬದ ಶುಭಾಶಯ ಪತ್ರ, ಕಾಫಿ ಟೇಬಲ್ ಪುಸ್ತಕ ಮತ್ತು ಅಂತಹುದೇ ವಸ್ತುಗಳ ಮುದ್ರಣವನ್ನು ನಿಷೇಧಿಸಿತ್ತು. ಅಂತಹ ವಸ್ತುಗಳಿಗೆ ಡಿಜಿಟಲ್ ಅಥವಾ ಆನ್‌ಲೈನ್ ವಿಧಾನಗಳಿಗೆ ಹೋಗಲು ಇಲಾಖೆಗಳಿಗೆ ಸೂಚಿಸಲಾಗಿತ್ತು.
ಹಿಂದಿನ ನಿರ್ದೇಶನಕ್ಕೆ ಈಗ ಭಾಗಶಃ ಮಾರ್ಪಾಡು ಮಾಡುವ ಮೂಲಕ, ವಿತ್ತ ಇಲಾಖೆಯು ಜ್ಞಾಪಕ ಪತ್ರದಲ್ಲಿ ಸಚಿವಾಲಯಗಳು/ಇಲಾಖೆಗಳು/ಸ್ವಾಯತ್ತ ಸಂಸ್ಥೆಗಳು ಮತ್ತು ಸರ್ಕಾರದ ಇತರ ಅಂಗಗಳಿಂದ ಕ್ಯಾಲೆಂಡರ್ ಮುದ್ರಣಕ್ಕೆ ಅನುಮತಿಸಲುನಿರ್ಧರಿಸಲಾಗಿದೆ.
ಸೂರ್ಯಕುಮಾರ್ ದಾಖಲೆ ಮುರಿದ ಶ್ರೇಯಸ್‍ಅಯ್ಯರ್
#FinanceMinistry, #liftsban, #printing, #calendars, #ministries, #after2years,