ಕೊರೊನಾ ನಿರ್ಲಕ್ಷಿಸಿದವರಿಂದ 67 ಲಕ್ಷ ರೂ. ದಂಡ ಸಂಗ್ರಹ..!

ಬೆಂಗಳೂರು, ಜು.3- ಕೊರೊನಾ ನಿಯಂತ್ರಣಕ್ಕೆ ಜಂಟಿ ಕಾರ್ಯಚರಣೆ ನಡೆಸುತ್ತಿರುವ ಪೊಲೀಸರು, ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳ ತಂಡ 67 ಲಕ್ಷ ರೂಪಾಯಿಗಳ ದಂಡ ವಸೂಲಿ ಮಾಡಿದೆ.

ಈ ಕುರಿತು ಟಿಟ್ವ್ ಮಾಡಿರುವ ಬೆಂಗಳೂರು ನಗರ ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೆಮಂತ್ ನಿಂಬಾಳ್ಕರ್ ಅವರು, ಮಾಸ್ಕ್ ಧರಿಸದ ಕಾರಣಕ್ಕೆ 31,740 ಮಂದಿ ವಿರುದ್ಧ, ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಕಾರಣಕ್ಕೆ 1800 ಹಾಗೂ 118 ವಾಣಿಜ್ಯ ಮಳಿಗೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಒಟ್ಟು 67,04,308.72 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ದಂಡ ವಸೂಲಿ ಮಾಡುವುದು ನಮಗೆ ಸಂತೋಷದ ವಿಷಯ ಅಲ್ಲ. ದಯವಿಟ್ಟು ಎಲ್ಲರೂ ನಿಮ್ಮ ಸುರಕ್ಷತೆಗಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮನವಿ ಮಾಡಿದ್ದಾರೆ.