ಮೊಬೈಲ್ ಆಪ್‌ನ `ಬೆರಳು ಮುದ್ರೆ’ಯಿಂದ 12 ವರ್ಷದ ನಂತರ ಸಿಕ್ಕಿಬಿದ್ದ ಕೊಲೆ ಆರೋಪಿ

Social Share

ಬೆಂಗಳೂರು, ನ.16- ಕೊಲೆ ಪ್ರಕರಣದಲ್ಲಿ ಭಾಗಿಯಾಗಿ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ರಮೇಶ(40) ಎಂಬಾತನನ್ನು ಬೆರಳು ಮುದ್ರೆ ಮೂಲಕ ಪತ್ತೆ ಹಚ್ಚಿ ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

2005 ಆಗಸ್ಟ್ 29 ರಂದು ತಾವರೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ತಿಗಳರಪಾಳ್ಯ ಬಾಲಾಜಿ ನಗರದಲ್ಲಿನ ಮನೆಯೊಂದಕ್ಕೆ ಬಣ್ಣ ಬಳಿಯಲು ಬಂದಿದ್ದ ವ್ಯಕ್ತಿಗಳು ಮನೆಗೆ ಬಣ್ಣ ಒಡೆಯದೆ 8-10 ಮಂದಿ ಹುಡುಗರು ಸೇರಿಸಿಕೊಂಡು ಮನೆಯ ಕೀಯನ್ನು ಮಾಲೀಕರಿಗೆ ಕೊಡದೆ ಗಲಾಟೆ ಮಾಡಿ ಮಾಲೀಕನನ್ನು ಕೊಲೆ ಮಾಡಿ ಪರಾರಿಯಾಗಿದ್ದರು.

ಈ ಪ್ರಕರಣದಲ್ಲಿ ಈ ಆರೋಪಿಯು ಬಂಧಿತನಾಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರ ಬಂದು 2010ರಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಸುಮಾರು 12 ವರ್ಷಗಳಿಂದ ತಲೆಮರೆಸಿ ಕೊಂಡಿದ್ದನು.
ಇತ್ತೀಚೆಗೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಎಂ-ಸಿಸಿಟಿಎನ್ಎಸ್ ಮೊಬೈಲ್ ಆಪ್ ಮೂಲಕ ಬೆರಳು ಮುದ್ರೆ ಪರಿಶೀಲನೆಗಾಗಿ ಚಿಕ್ಕ ಬೆರಳು ಮುದ್ರೆ ಡಿವೈಸ್ನ್ನು ವಿತರಣೆ ಮಾಡಲಾಗಿರುತ್ತದೆ.

ಚುನಾವಣೆಯಲ್ಲಿ ಗೆಲವು ಕಷ್ಟವಾಗಬಹುದು : ಸಿದ್ದರಾಮಯ್ಯಗೆ ಮುನಿಯಪ್ಪ ಎಚ್ಚರಿಕೆ

ಈ ಡಿವೈಸ್ನ್ನು ಉಪಯೋಗಿಸಿ ಕೊಂಡು ಮೊಬೈಲ್ ಅಪ್ಲಿಕೇಷನ್ ಮುಖಾಂತರ ಅನುಮಾನಾಸ್ಪದ ವ್ಯಕ್ತಿಗಳ ಬೆರಳು ಮುದ್ರೆಯನ್ನು ಪರಿಶೀಲಿಸಿದರೆ ಆ ವ್ಯಕ್ತಿಯು ಈ ಹಿಂದೆ ಯಾವುದಾದರೂ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ಮಾಹಿತಿ ತಿಳಿದುಬರುತ್ತದೆ.

ಯಶವಂತಪುರ ಪೊಲೀಸ್ ಠಾಣೆಯ ಸಬ್ಇನ್ಸ್ಸ್ಪೆಕ್ಟರ್ ರಾಜು ಅವರು ರಾತ್ರಿ ಗಸ್ತಿನಲ್ಲಿದ್ದಾಗ ಅನುಮಾನಾಸ್ಪದ ವ್ಯಕ್ತಿ ಬಿಕೆ ನಗರದ ಒಂದನೇ ಮುಖ್ಯರಸ್ತೆಯಲ್ಲಿ ಓಡಾಡುತ್ತಿದ್ದುದ್ದನ್ನು ಗಮನಿಸಿ ಆತನನ್ನು ವಿಚಾರಣೆ ಮಾಡಿ ಮೊಬೈಲ್ ಆಪ್ ಮೂಲಕ ಡಿವೈಸ್ ಬಳಸಿಕೊಂಡು ಆ ವ್ಯಕ್ತಿಯ ಬೆರಳು ಮುದ್ರೆಯನ್ನು ಪರಿಶೀಲಿಸಿದಾಗ ಆ ವ್ಯಕ್ತಿಯ ಮಾಹಿತಿ ಪೊಲೀಸರ ದತ್ತಾಂಶದಲ್ಲಿರುವುದು ದೃಢಪಟ್ಟಿರುತ್ತದೆ.

ತಂತ್ರಜ್ಞಾನ ಬಳಕೆಯಿಂದ ಭ್ರಷ್ಟಾಚಾರ ಕಡಿಮೆಯಾಗಲಿದೆ : ಮೋದಿ

ಈ ಆರೋಪಿಯನ್ನು ಠಾಣೆಗೆ ಕರೆತಂದು ಕೂಲಂಕುಶವಾಗಿ ವಿಚಾರಣೆ ಮಾಡಿ ಪೊಲೀಸರ ದತ್ತಾಂಶದಲ್ಲಿ ಪರಿಶೀಲಿಸಿದಾಗ ಈ ಆರೋಪಿಯು 2005ರಲ್ಲಿ ನಡೆದಿದ್ದ ಮನೆ ಮಾಲೀಕನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದುಬಂದಿರುತ್ತದೆ.

ನ್ಯಾಯಾಲಯವು ಈ ಆರೋಪಿಯ ವಿರುದ್ಧ ಉದ್ಘೋಷಣೆ ಮತ್ತು ದಸ್ತಗಿರಿ ವಾರೆಂಟ್ನ್ನು ಹೊರಡಿಸಿರುವುದರಿಂದ ಮುಂದಿನ ಕಾನೂನು ಕ್ರಮಕ್ಕಾಗಿ ಆರೋಪಿಯನ್ನು ಬ್ಯಾಡರಹಳ್ಳಿ ಪೊಲೀಸರ ವಶಕ್ಕೊಪ್ಪಿಸಲಾಗಿದೆ.

Articles You Might Like

Share This Article