ಸ್ಯಾಂಟ್ರೋ ರವಿ ಶಾಕಿಂಗ್ ಸೀಕ್ರೆಟ್ ಗಳು ಬಟಾಬಯಲು

Social Share

ಬೆಂಗಳೂರು,ಜ.8- ಸ್ಯಾಂಟ್ರೋ ರವಿ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆತನ ಒಂದೊಂದೆ ಕರಾಳ ಮುಖಗಳು ಬಯಲಾಗತೊಡಗಿವೆ. ವರ್ಗಾವಣೆ, ವೇಶ್ಯಾವಾಟಿಕೆ ಮತ್ತಿತರ ದಂಧೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಮಾತ್ರವಲ್ಲ, ಆತ ಪ್ರಭಾವಿ ವ್ಯಕ್ತಿಗಳು ಹಾಗೂ ರಾಜಕಾರಣಿಗಳಿಗೆ ಹುಡುಗಿಯರನ್ನು ಸರಬರಾಜು ಮಾಡುತ್ತಿದ್ದ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.

ಯುವತಿಯರ ವಯಸ್ಸು ಹಾಗೂ ರೂಪಕ್ಕೆ ತಕ್ಕಂತೆ ಕೋಡ್ ವರ್ಡ್ ಬಳಕೆ ಮಾಡುತ್ತಿದ್ದ ಖತರ್ನಾಕ್ ರವಿ 18 ರಿಂದ 22 ವರ್ಷದೊಳಗಿನ ಯುವತಿಯರನ್ನು ಜಾಗ್ವಾರ್ ಕಾರು ಎಂದು ಕೋಡ್‍ವರ್ಡ್‍ನಿಂದ ಕರೆಯುತ್ತಿದ್ದನಂತೆ.

23 ರಿಂದ 25 ವಯಸ್ಸಿನ ಯುವತಿಯರಿಗೆ ಆಡಿ ಕಾರು ಹೆಸರಿಟ್ಟಿದ್ರೆ, 26 ರಿಂದ 29 ವಯಸ್ಸಿನ ಮಹಿಳೆಯರಿಗೆ ಬೆಂಜ್ ಕಾರು ಹಾಗೂ 30 ವರ್ಷದವರನ್ನು ಬಿಎಂಡಬ್ಲ್ಯೂ ಕಾರಿನ ಹೆಸರಿನ ಕೋಡ್ ನೀಡಿದ್ದ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸ್ನೇಹಿತನ ಕತ್ತು ಸೀಳಿ ಕೊಂದು ಶವ ಸುಟ್ಟಿದ್ದ ಕೊಲೆಗಾರನ ಬಂಧನ

ಅದರಲ್ಲೂ ವೇಶ್ಯಾವಾಟಿಕೆಗೆ ಬಳಕೆ ಮಾಡುತ್ತಿದ್ದ ಸಣ್ಣ ವಯಸ್ಸಿನ ಹುಡುಗಿಯರು ಚಿತ್ರನಟಿಯರಂತೆ ಇದ್ದರೆ ಅವರಿಗೆ ಪ್ರತ್ಯೇಕ ಕೋಡ್‍ವರ್ಡ್‍ನಿಂದ ಕರೆಯುತ್ತಿದ್ದ ಎಂದು ತಿಳಿದುಬಂದಿದೆ. ಈತನ ಕೋಡ್‍ವರ್ಡ್ ಪ್ರಕಾರ ಮಾರ್ಕೆಟ್‍ನಲ್ಲಿ ಜಾಗ್ವಾರ್ ಕಾರಿಗೆ ಫುಲ್ ಡಿಮ್ಯಾಂಡ್ ಇತ್ತಂತೆ. ಇವನ ಗಾಳದಲ್ಲಿ ಸಿಲುಕಿಕೊಂಡಿದ್ದವರು ಈತನಿಂದ ಎಳಸು ಹುಡುಗಿಯರನ್ನು ಸರಬರಾಜು ಮಾಡು ಎಂದು ಒತ್ತಾಯಿಸುತ್ತಿದ್ದರು ಎಂದು ಗೊತ್ತಾಗಿದೆ.

ಬಲೆಗೆ ಬೀಳುವ ಗ್ರಾಹಕರಿಗೆ ಹಾಗೂ ಪ್ರಭಾವಿ ವ್ಯಕ್ತಿಗಳಿಗೆ ಎಳಸು ಹುಡುಗಿಯ ಫೋಟೋ ಕಳಿಸಿ ಗಾಳ ಹಾಕಿ ಅವರನ್ನು ತನ್ನ ಕೈಗೊಂಬೆ ಮಾಡಿಕೊಳ್ಳುತ್ತಿದ್ದ.ಬಲೆಗೆ ಬಿದ್ದ ಪ್ರಭಾವಿಗಳನ್ನು ಬಳಸಿಕೊಂಡು ಈತ ತನಗೆ ಬೇಕಾದ ಕೆಲಸ ಮಾಡಿಸಿಕೊಳ್ಳುತ್ತಿದ್ದ ಎಂಬುದು ಇದೀಗ ಜಗಜಾಹೀರಾಗಿದೆ.

ತನ್ನ ಕೆಲಸಕ್ಕಾಗಿ ಸ್ಯಾಂಟ್ರೋ ರವಿ ಪ್ರಮುಖ ರಾಜಕಾರಣಿಗಳು ಹಾಗೂ ಐಎಎಸ್, ಐಪಿಎಸ್ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಹುಡುಗಿ ಬಯಸುವವರಿಗೆ 50ಕ್ಕೂ ಹೆಚ್ಚು ಫೋಟೋಗಳನ್ನು ಕಳುಹಿಸಿ ಅವರು ಓಕೆ ಮಾಡುವ ಹುಡುಗಿಯರನ್ನು ಅವರು ಹೇಳಿದ ಸ್ಥಳಕ್ಕೆ ತನ್ನ ಸ್ಯಾಂಟ್ರೋ ಕಾರಿನಲ್ಲಿ ಕಳುಹಿಸಿಕೊಡುತ್ತಿದ್ದ ಎನ್ನಲಾಗಿದೆ.

ಜೋಡೊ ಯಾತ್ರೆ ಬೆಂಬಲಿಸಲು ಚಳಿಯಲ್ಲೂ ಶರ್ಟ್ ತೆಗೆದು ನೃತ್ಯ

ಸ್ಯಾಂಟ್ರೋ ಕಾರಿನಲ್ಲಿಯೇ ಕೂತು ಡೀಲ್ ಕುದುರಿಸುತ್ತಿದ್ದ ಆತ ಗ್ರಾಹಕರೊಂದಿಗೆ ನಡೆಸುವ ಪ್ರತಿಯೊಂದು ವ್ಯವಹಾರಗಳನೂ ರೆಕಾರ್ಡ್ ಮಾಡುತ್ತಿದ್ದ ಅನ್ನೋ ಮಾಹಿತಿಯೂ ಹೊರಬಿದ್ದಿದೆ.

Fir, againest, Santro ravi, dowry, harassment, allegation,

Articles You Might Like

Share This Article