ಟ್ರಾವೆಲ್ಸ್ ಹೆಸರಿನಲ್ಲಿ ಲಕ್ಷಾಂತರ ದೋಖಾ ; ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಎಫ್‍ಐಆರ್

Social Share

ಬೆಂಗಳೂರು, ಜ.24- ಟ್ರಾವೆಲ್ಸ ಹೆಸರಿನಲ್ಲಿ ಕಡತಗಳನ್ನು ತಯಾರು ಮಾಡಿ ಪಾಲಿಕೆಗೆ ಪ್ರತಿ ತಿಂಗಳು ಹತ್ತಾರು ಲಕ್ಷ ರೂ.ಗಳನ್ನು ವಂಚಿಸುತ್ತಿದ್ದ ಆರೋಪದಡಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಇಲ್ಲಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ವಿನಯ್ ಬಾಬು ಎಂಬುವವರು ನೀಡಿದ ದೂರಿನ್ವಯ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಸಾರಿಗೆ ವಿಭಾಗದ ಕಾರ್ಯಪಾಲಕ ಅಭಿಯಂತರ ಮಹದೇವ್, ಗುಮಾಸ್ತ ರಮೇಶ್, ಕಂಪ್ಯೂಟರ್ ಆಪರೇಟರ್ ಸತೀಶ್ ಮತ್ತು ಪಂಚಮುಖಿ ಟೂರ್ಸ್ ಟ್ರಾವೆಲ್ಸ ಮಾಲೀಕ ಶಿವಾನಂದ ವಿರುದ್ಧ ಹಲಸೂರು ಗೇಟ್ ಪೊಲಿಸ್ ಠಾಣೆ ಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಐಪಿಸಿ ಸೆಕ್ಷನ್ 420, 465, 468, 471 ಅಡಿಯಲ್ಲಿ ವಂಚನೆ, ನಕಲಿ ದಾಖಲೆ ತಯಾರಿಕೆ, ಅಕಾರ ದುರುಪಯೋಗ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಪಾಲಿಕೆಯ ಅಕಾರಿಗಳ ಬಳಕೆಗೆಂದು ಗುತ್ತಿಗೆ ಆಧಾರದಲ್ಲಿ ವಾಹನಗಳನ್ನು ಒದಗಿಸುತ್ತಿದ್ದ ಟ್ರಾವೆಲ್ಸï ಗಳ ಪೈಕಿ ಒಂದಾಗಿರುವ ಎಂ.ಎಂ. ಲಾಜಿಸ್ಟಿಕ್   ಟೂರ್ಸ್ ಅಂಡ್ ಟ್ರವೆಲ್ಸï ಸಂಸ್ಥೆಯು ತನ್ನ ಚಾಲಕರು, ಸಿಬ್ಬಂದಿ ವರ್ಗದವರಿಗೆ ಪಾವತಿಸುತ್ತಿದ್ದ ಪಿಎಫ್, ಇಎಸ್‍ಐ ದಾಖಲೆಗಳನ್ನು ಆ ಸಂಸ್ಥೆಯು ಪಾಲಿಕೆಗೆ ನಿಡುತ್ತಿದ್ದ ಕಡತಗಳಿಂದ ತೆಗೆದು, ಅವುಗಳನ್ನೇ ನಕಲು ಮಾಡಿಕೊಂಡು ಪಂಚಮುಖಿ ಟೂರ್ಸ್ ಟ್ರಾವೆಲ್ಸï ಎಂಬ ಹೆಸರಿನಲ್ಲಿ ಕಡತಗಳನ್ನು ತಯಾರು ಮಾಡಿ ಪಾಲಿಕೆಗೆ ಪ್ರತಿ ತಿಂಗಳು ಹತ್ತಾರು ಲಕ್ಷ ರೂ.ಗಳನ್ನು ವಂಚಿಸುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ದಾಖಲೆಗಳ ಸಹಿತ ಎಂ.ಎಂ.ಲಾಜಿಸ್ಟಿಕ್  ಟೂರ್ಸ್ ಅಂಡ್ ಟ್ರವೆಲ್ಸï ಸಂಸ್ಥೆಯ ವ್ಯವಸ್ಥಾಪಕ ವಿನಯ್ ಬಾಬು ನೀಡಿರುವ ದೂರಿನನ್ವಯ ಮೇಲೆ ತಿಳಿಸಿರುವ ಎಲ್ಲರ ವಿರುದ್ಧ ಮೊಕದ್ದಮೆ ದಾಖಲಾಗಿದೆ.

Articles You Might Like

Share This Article