ಮತಾಂತರಕ್ಕೆ ಪ್ರೇರಣೆ : 5 ಮಂದಿ ವಿರುದ್ಧ ಎಫ್‍ಐಆರ್

Social Share

ಕನಕಪುರ, ಡಿ. 14- ನಗರದಲ್ಲಿ ಅಕ್ರಮವಾಗಿ ಮತಾಂತರಕ್ಕೆ ಪ್ರೇರೇಪಿಸುತ್ತಿದ್ದ ಕ್ರೈಸ್ತ ಮಿಷನ್ನರಿಯ ಐದು ಮಂದಿಯನ್ನು ನಗರ ಪೊಲೀಸರು ವಶಕ್ಕೆ ಪಡೆದು ಎಫ್‍ಐಆರ್ ದಾಖಲಿಸಿ ತನಿಖೆಗೊಳಪಡಿಸಿದ್ದಾರೆ.

ನಗರದ ಹೌಸಿಂಗ್‍ಬೋರ್ಡ್ ಕಾಲೋನಿಯಲ್ಲಿ ಅಕ್ರಮವಾಗಿ ಶಾಲೋಮನ್ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿರುವ ಕ್ರೈಸ್ತಮಿಷನ್ನರಿಯ ಜೋಸೆಫ್, ಪತ್ನಿ ಹಾಗು ಮಗ ಅಲಿಮ್ ಜೋಸೆಫ್, ಹರೀಶ್ ಹಾಗು ವೆಂಕಟೇಶ್ ಎಂಬುವವರನ್ನು ವಶಕ್ಕೆ ಪಡೆದು ಅವರ ವಿರುದ್ಧ ಎಫ್‍ಐಆರ್ ದಾಖಲಿಸಿ ವಿಚಾರಣೆ ಆರಂಭಿಸಿದ್ದಾರೆ.

ನಮಗೆ ನೀತಿ ಪಾಠ ಅಗತ್ಯವಿಲ್ಲ : ಸಿದ್ದುಗೆ ಸಿಎಂ ಗುದ್ದು

ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಕೆ.ಆರ್.ಸುರೇಶ್ ಎಂಬುವವರು ಈ ಮತಾಂತರದ ವಿರುದ್ಧ ಠಾಣೆಗೆ ದೂರು ನೀಡಿ ಚನ್ನಪಟ್ಟಣ ಮತ್ತು ರಾಮನಗರದ ಭಾಗಗಳಲ್ಲಿನ ಕೂಲಿ ಕಾರ್ಮಿಕರು, ಮಹಿಳೆಯರು ಮತ್ತವರ ಮಕ್ಕಳನ್ನು ಕರೆತಂದು ಮಾಂಸದೂಟ ನೀಡಿ ಅವರಿಗೆ ಸೀರೆ ಮತ್ತು ಇತರೆ ವಸ್ತ್ರಗಳನ್ನು ವಿತರಿಸಿ ಏಸುಕ್ರಿಸ್ತನ ಆರಾಧನೆ ಮಾಡುವಂತೆ ಪ್ರೇರೇಪಣೆ ಮಾಡುತ್ತಿದ್ದರು.

ಬೌಬೌ ಸಿಟಿಯಾದ ಬೆಂಗಳೂರು, ಮಿತಿಮೀರಿದ ಬೀದಿ ನಾಯಿಗಳ ಹಾವಳಿ

ಈ ಖಚಿತ ಮಾಹಿತಿಯನ್ನು ಆಧರಿಸಿ ವಿಶ್ವ ಹಿಂದೂಪರಿಷತ್‍ನವರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ನಗರ ಪೊಲೀಸರು ಕಾನೂನು ಕ್ರಮಕೈಗೊಂಡಿದ್ದಾರೆ.

Articles You Might Like

Share This Article