ಪುರಿ, ಆ. 7- ವಿಶ್ವ ಪ್ರಸಿದ್ಧ ಪುರಿ ಜಗನ್ನಾಥ ದೇಗುಲದಲ್ಲಿ ಕಳೆದ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ್ದರೂ ಕೂಡ ಅನಾಹುತವನ್ನು ತಪ್ಪಿಸುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಕಳೆದ ತಡರಾತ್ರಿ ಜಗನ್ನಾಥ ದೇಗುಲದ ಸಾರಾ ಗರಾ (ಅಡುಗೆ ಮನೆ)ದಲ್ಲಿ ಬೆಂಕಿ ಕಾಣಿಸಿಕೊಂಡಿದೆ, ದೇಗುಲದ ಸಿಬ್ಬಂದಿಗಳು ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ, ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ಬೆಂಕಿ ನಂದಿಸಿ ಭಾರೀ ದುರಂತ ತಪ್ಪಿಸಿದ್ದಾರೆ.
ಅಗ್ನಿಶಾಮಕದಳದ ಸಮಯಪ್ರಜ್ಞೆಯಿಂದಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಸಾರಾಗರಾದಲ್ಲಿ ಪುರಿ ಜಗನ್ನಾಥನಿಗೆ ಮಹಾಪ್ರಸಾದವನ್ನು ತಯಾರಿಸುವುದರಿಂದ, ಪ್ರಸಾದ ಹಾಗೂ ಭಕ್ತ ಭೋಜನಕ್ಕೆ ಸಂಬಂಧಪಟ್ಟ ಅಡುಗೆ ಪದಾರ್ಥಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿತ್ತು. ಬೆಂಕಿ ದುರಂತ ನಿಖರ ಕಾರಣವೆಂಬುದು ತಿಳಿದು ಬಂದಿಲ್ಲ.