ಕೌಶಾಂಬಿ (ಯುಪಿ), ಫೆ.5-ದುಷ್ಕರ್ಮಿಗಳು ಮನೆಯ ಬೆಂಕಿ ಹಚ್ಚಿದ್ದರಿಂದ ಮೂರು ವರ್ಷದ ಬಾಲಕಿಯೊಬ್ಬಳು ಸಜೀವ ದಹನವಾಗಿರುವ ಘಟನೆ ಇಂದು ಬೆಳಿಗ್ಗೆ ಕೌಶಾಂಬಿ ಬಳಿಯ ಬಹದ್ದೂರ್‍ಪುರ ಗ್ರಾಮದಲ್ಲಿ ನಡೆದಿದೆ.
ಬಹದ್ದೂರ್‍ಪುರ ಗ್ರಾಮದ ರಾಂಬಾಬು ಎಂಬುವರ ಮೂರು ವರ್ಷದ ಮಗಳು ನಂದಿನಿ ಹುಲ್ಲಿನ ಛಾವಣಿಯ ಕೆಳಗೆ ಮಲಗಿದ್ದಳು ಈ ವೇಳೆ ಯಾರೋ ಛಾವಣಿಗೆ ಬೆಂಕಿ ಹಚ್ಚಿದ್ದಾರೆ.
ಹುಲ್ಲಿನ ಮನೆಯಾಗಿದ್ದರಿಂದ ಬೆಂಕಿ ಜ್ವಾಲೆ ಬೇಗನೆ ವ್ಯಾಪಿಸಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಮರ್ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ. ನೆರೆಹೊರೆಯವರು ಬೆಂಕಿ ನಂದಿಸಲು ಧಾವಿಸಿದರು ಆದರೆ ಬೆಂಕಿಯನ್ನು ನಿಯಂತ್ರಿಸುವಷ್ಟರಲ್ಲಿ ಬಾಲಕಿ ಮತ್ತು ಹತ್ತಿರದಲ್ಲಿ ಕಟ್ಟಿದ್ದ ಹಸು ಸುಟ್ಟು ಕರಕಲಾಗಿವೆ ಎಂದು ತಿಳಿಸಲಾಗಿದೆ.
ದೆಹಲಿ ಅಂಗಳ ತಲುಪುತ್ತಿರುವ ಕಾಂಗ್ರೆಸ್‍ನ ಒಳ ಬೇಗುದಿಗಳು
ಘಟನೆಯಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ, ಸುಟ್ಟ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
Fire, breaks, house, UP village, girl, charred, death,