ದಕ್ಷಿಣ ಆಫ್ರಿಕಾ ಸಂಸತ್ ಕಟ್ಟಡದಲ್ಲಿ ಬೆಂಕಿ

Social Share

ಕೇಪ್‍ಟೌನ್, ಜ.2- ಇಲ್ಲಿರುವ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಸಂಸತ್ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ದಳದವರು ಅಗ್ನಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಗರದ ಮಧ್ಯಭಾಗದಲ್ಲಿರುವ ಈ ಕಟ್ಟಡದಿಂದ ಭಾರೀ ಹೊಗೆಯ ಮೋಡ ಹಾಗೂ ಬೆಂಕಿಯ ಜ್ವಾಲೆ ಮುಗಿಲೆತ್ತರಕ್ಕೆ ಎದ್ದಿರುವ ದೃಶ್ಯ ಗೋಚರಿಸುತ್ತಿದೆ. ಇಂದು ನಸುಕಿನ ಜಾವ ಈ ಕಟ್ಟಡದ ಮೂರನೆ ಮಹಡಿಯ ಕಚೇರಿಗಳಲ್ಲಿ ಅಗ್ನಿ ಅವಘಡ ಸಂಭವಿಸಿದೆ. ತತ್‍ಕ್ಷಣವೇ ಬೆಂಕಿಯ ಜ್ವಾಲೆ ನ್ಯಾಷನಲ್ ಅಸೆಂಬ್ಲಿ ಕೊಠಡಿಗೂ ವ್ಯಾಪಿಸಿವೆ ಎಂದು ಕೇಪ್‍ಟೌನ್ ಸಿಟಿ ಅಗ್ನಿಶಾಮಕ ಹಾಗೂ ರಕ್ಷಣಾ ಸೇವೆಗಳ ವಕ್ತಾರ ಜೆರ್ಮೈನ್ ಕೇರ್‍ಸ್ಲೇ ಅವರು ಸ್ಥಳೀಯ ಮಾಧ್ಯಮಗಳಿಗೆ ವಿವರಿಸಿದ್ದಾರೆ.
ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಸೆಕ್ಯೂರಿಟಿ ಗಾರ್ಡ್‍ಗಳು ವರದಿ ಮಾಡಿದ್ದಾರೆ. ಬೆಂಕಿ ಕಟ್ಟಡದ ಛಾವಣಿಯವರೆಗೂ ವಿಸ್ತರಿಸಿದ್ದು, 35ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಶತಪ್ರಯತ್ನ ಮಾಡುತ್ತಿವೆ ಎಂದು ಕೇರ್‍ಸ್ಲೆ ತಿಳಿಸಿದ್ದಾರೆ.

Articles You Might Like

Share This Article