ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಬೌದ್ಧ ದೇವಾಲಯಕ್ಕೆ ಬೆಂಕಿ

Social Share

ಮೆಲ್ಬೋರ್ನ್, ಫೆ. 6 -ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ಬೌದ್ಧ ದೇವಾಲಯಕ್ಕೆ ಬೆಂಕಿ ಬಿದ್ದು ಹಾನಿಗೊಂಡಿದೆ. ಸುಮಾರು 80 ಅಗ್ನಿಶಾಮಕ ದಳ ತಂಡ ಬ್ರೈಟ್ ಮೂನ್ ಬೌದ್ಧ ದೇವಾಲಯದಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಪ್ರಯಾಸ ಪಟ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.

ಬೆಂಕಿಯಿಂದ ಯಾರಿಗೂ ಗಾಯಗಳಿಲ್ಲ. ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಸಹಾಯಕ ಮುಖ್ಯ ಅಗ್ನಿಶಾಮಕ ಅಧಿಕಾರಿ ಪಾಲ್ ಫೋಸ್ಟರ್ ತಿಳಿಸಿದ್ದಾರೆ.

ಟರ್ಕಿ, ಸಿರಿಯಾದಲ್ಲಿ ಭಾರಿ ಭೂಕಂಪ, 95 ಮಂದಿ ಸಾವು

ಇದು ಕೇವಲ ಪೂಜಾ ಸ್ಥಳವಲ್ಲ, ಇದು ಸ್ಥಳೀಯ ಬೌದ್ಧ ಸಮುದಾಯಕ್ಕೆ ಒಟ್ಟುಗೂಡಿಸುವ ಸ್ಥಳವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಹಲವು ಮನೆಗಳಿಗೂ ವ್ಯಾಪಿಸುವ ಸಾಧ್ಯತೆ ಇದ್ದು ಸುಮಾರು 30 ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.

Fire, damages, Buddhist, temple, Australian city, Melbourne,

Articles You Might Like

Share This Article