ನಾಮ್ ಪೆನ್,ಮಾ.13- ಪ್ರಸಿದ್ಧ ದೇವಾಲಯದ ಸಂಕೀರ್ಣದ ಸಮೀಪವಿರುವ ಕಾಂಬೋಡಿಯಾದ ರಾಜ ನೊರೊಡೊಮ್ ಸಿಹಾಮೋನಿ ಅವರ ಪ್ರಾಂತೀಯ ನಿವಾಸಕ್ಕೆ ಬೆಂಕಿ ಬಿದ್ದಿದ್ದು, ಆಸ್ತಿ ನಷ್ಟವಾಗಿದೆ.
ವಾಯುವ್ಯ ನಗರದ ಸಿಯೆಮ್ ರೀಪ್‍ನಲ್ಲಿ ಭಾನುವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಸಂಕೀರ್ಣದಲ್ಲಿನ ಸಣ್ಣ ಕಟ್ಟಡವೊಂದರ ಮೇಲ್ಛಾವಣಿಗೆ ಹಾನಿಯಾಗಿದೆ. 69ರ ಹರೆಯದ ರಾಜ ಸಿಹಾಮೋನಿ ಪ್ರಸ್ತುತ ವೈದ್ಯಕೀಯ ತಪಾಸಣೆಗಾಗಿ ಬೀಜಿಂಗ್‍ನಲ್ಲಿದ್ದಾರೆ.
ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಮಾಹಿತಿ ಸಚಿವ ಖಿಯು ಕನ್ಹರಿತ್ ತಿಳಿಸಿದ್ದಾರೆ. ರಾಜಭವನದ ಸಚಿವಾಲಯದಲ್ಲಿನ ಬೆಂಕಿ ಅನಾವುತಕ್ಕೆ ವಿದ್ಯುತ್ ದೋಷ ಕಾರಣವಾಗಿರಬಹುದು ಎಂದು ಆರೋಪಿಸಲಾಗಿದೆ.
ಆಸ್ಕರ್ ಅಂಗಳದಲ್ಲಿ ಭಾರತೀಯ ಚಿತ್ರಗಳ ಸದ್ದು, ಇಲ್ಲಿದೆ ಪ್ರಶಸ್ತಿಗಳ ಕಂಪ್ಲೀಟ್ ಡೀಟೇಲ್ಸ್
ಮುಖ್ಯ ವಸತಿ ಕಟ್ಟಡಕ್ಕೆ ಹೆಚ್ಚಿನ ಹಾನಿಯಾಗುವ ಮುನ್ನ ತುರ್ತು ಪರಿಸ್ಥಿತಿ ನಿಭಾಯಿಸುವ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ ಎಂದು ರಾಜ್ಯ ಸುದ್ದಿ ಸಂಸ್ಥೆ ಎಕೆಪಿ ವರದಿ ಮಾಡಿ, ಬೆಂಕಿಯ ತೀವ್ರತೆಯ ವೀಡಿಯೋವನ್ನು ಪ್ರಸಾರ ಮಾಡಿದೆ.
ಉತ್ತರ ಕೊರಿಯಾ ಜಲಾಂತರ್ಗಾಮಿ ಯಿಂದ ಕ್ಷಿಪಣಿ ಉಡಾವಣೆ
ರಾಜ ಸಿಹಾಮೋನಿಯ ಮುಖ್ಯ ನಿವಾಸ ರಾಜಧಾನಿ ನಾಮ್ ಪೆನ್‍ನಲ್ಲಿರುವ ಗೋಡೆಯ ಆವರಣದೊಳಗಿನ ಅರಮನೆಯಾಗಿದೆ. ಸೀಮ್ ರೀಪ್‍ನಲ್ಲಿ ಶತಮಾನಗಳಷ್ಟು ಹಳೆಯದಾದ ಅಂಕೋರ್ ವಾಟ್ ದೇವಾಲಯದ ಸಂಕೀರ್ಣವಿದೆ. ಇದು ದೇಶದ ಪ್ರಮುಖ ಪ್ರವಾಸಿ ಕೇಂದ್ರವೂ ಆಗಿದೆ. ರಾಜರು ಸೀಮ್ ರೀಪ್‍ನಲ್ಲಿರುವಾಗ ಈ ದೊಡ್ಡ ವಿಲ್ಲಾದಲ್ಲಿ ತಂಗಿರುತ್ತಾರೆ.
Fire, damages, part, Cambodian, king, residence, near, temple,